‘ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಲಯ ಮೂಲಭೂತ ಮತ್ತು ಪ್ರಜಾಪ್ರಭುತ್ವದ ತತ್ವ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿ !’ (ಅಂತೆ)

ರಾಹುಲ್ ಗಾಂಧಿ ಪ್ರಕರಣದಲ್ಲಿ ಜರ್ಮನಿಯ ನಿಲುವು !

ಬರ್ಲಿನ್ (ಜರ್ಮನಿ) – ರಾಹುಲ್ ಗಾಂಧಿಯ ಪ್ರಕರಣದ ವಿಚಾರಣೆ ನ್ಯಾಯಯುತವಾಗಿ ನಡೆಯಬೇಕು. ನ್ಯಾಯಾಲಯವು ರಾಹುಲ್ ಗಾಂಧಿ ಇವರ ಸದಸ್ಯತ್ವ ರದ್ದಾಗಿರುವ ಪ್ರಕರಣದ ವಿಚಾರಣೆ ಮೂಲಭೂತ ಮತ್ತು ಜಾತ್ಯತೀತದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಿದೆ ಎಂದು ಅಪೇಕ್ಷೆ ಇದೆ.

ನ್ಯಾಯಾಲಯದ ನಿರ್ಣಯದ ನಂತರ ಗಾಂಧಿ ಇವರು ಸಂಸತ್ತಿನಿಂದ ಅಮಾನತು ಗೊಂಡಿರುವುದು ಯೋಗ್ಯವೋ ಅಥವಾ ಅಯೋಗ್ಯವೋ ಇದು ಸ್ಪಷ್ಟವಾಗುವುದು, ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ಮಹಿಳಾ ವಕ್ತಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಮೆರಿಕ ಕೂಡ ಈ ಪ್ರಕರಣದಲ್ಲಿ ಅವರು ನಿಗಾವಹಿಸುತ್ತಿರುವುದರ ಬಗ್ಗೆ ಹೇಳಿತ್ತು.

ಸಂಪಾದಕರ ನಿಲುವು

ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !