ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಇತ್ತೀಚೆಗೆ ಭಾರತೀಯ ರಾಯಭಾರ ಕಚೇರಿಯ ಸ್ಥಳದಲ್ಲಿ ನಡೆದ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ನಾವು ಪ್ರತಿಭಟನೆ ನಡೆಸುವವರ ಅಧಿಕಾರವನ್ನು ಬೆಂಬಲಿಸುತ್ತೇವೆ; ಆದರೆ ಹಿಂಸೆ ಅಥವಾ ಹಿಂಸೆಯಿಂದ ಎದುರಾಗುವ ಅಪಾಯವನ್ನು ಎಂದಿಗೂ ಬೆಂಬಲಿಸುವುದಿಲ್ಲವೆಂದು ಅಮೇರಿಕಾದ ವಿದೇಶಾಂಗ ಇಲಾಖೆಯ ಸಹಾಯಕ ವಕ್ತಾರ ವೇದಾಂತ ಪಟೇಲ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಪಟೇಲರು ಮೇಲಿನಂತೆ ಹೇಳಿದರು. ಭಾರತವು ಈ ದಾಳಿಯ ಬಗ್ಗೆ ಅಮೇರಿಕಾದ ಬಳಿ ನಿಷೇಧವನ್ನು ವ್ಯಕ್ತಪಡಿಸಿತ್ತು.
ಸಂಪಾದಕೀಯ ನಿಲುವುಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು ! |