|
ಹಾಸನ – ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ. ಈ ರಥೋತ್ಸವ ದಿನದಂದು ಕುರಾನ್ ಓದುವ ಪರಂಪರೆ ಇದೆ. ಪ್ರತಿವರ್ಷ ಇದಕ್ಕೆ ವಿರೋಧ ವ್ಯಕ್ತವಾಗುತ್ತದೆ; ಆದರೆ ಈ ವರ್ಷ ಕುರಾನ್ ಓದಬಾರದೆಂದು ಹಿಂದುತ್ವನಿಷ್ಠ ಸಂಘಟನೆಗಳು ಹೆಚ್ಚು ಕಾರ್ಯನಿರತವಾಗಿವೆ.
(ಸೌಜನ್ಯ : ಏಷ್ಯಾನೆಟ್ ಸುವರ್ಣ)
ಇಲ್ಲಿ ಪ್ರತಿಭಟನೆ ನಡೆಯುವಾಗ ಬೈಕಿನಲ್ಲಿ ಬಂದ ಓರ್ವ ಮುಸಲ್ಮಾನ ಯುವಕನು ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ನೀಡಿದನು. ಆದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅವನನ್ನು ಅಡ್ಡಗಟ್ಟಿದರು. ಆ ಸಮಯದಲ್ಲಿ ಬಜರಂಗದಳದ ಕಾರ್ಯಕರ್ತ ಮತ್ತು ಸಂಬಂಧ ಪಟ್ಟ ಯುವಕ ಇವರಲ್ಲಿ ಮಾತಿನ ಚಕಮಕಿ ನಡೆಯಿತು. ಆದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆ ಸಮಯದಲ್ಲಿ ಪೊಲೀಸರು ಪರಿಸ್ಥಿತಿ ಹದಗೆಡಬಾರದೆಂದು; ಲಾಠಿಚಾರ್ಜ್ ಮಾಡಿದರು. ಹಾಗೂ ಸಂಬಂಧಪಟ್ಟ ಯುವಕನನ್ನು ವಶಕ್ಕೆ ಪಡೆದರು. ಘಟನಾ ಸ್ಥಳದಲ್ಲಿ ಪೊಲೀಸರ ಹೆಚ್ಚಿನ ಬಂದೋಬಸ್ತ್ ನೇಮಿಸಲಾಗಿದೆ.
ಸಂಪಾದಕರ ನಿಲುವುಮೊಹರಂ ಮೆರವಣಿಗೆಯಲ್ಲಿ ಶ್ರೀಮದ್ ಭಗವದ್ಗೀತೆಯ ಅಥವಾ ವೇದಮಂತ್ರ ಪಠಣ ಎಂದಾದರೂ ಆಗುತ್ತದೆಯೆ ? ಅಥವಾ ಹೀಗಾಗಲು ಸಾಧ್ಯವೇ ? ಆದ್ದರಿಂದ ಹಿಂದೂಗಳು ಮಾತ್ರ ಸರ್ವಧರ್ಮಸಮಭಾವ ಎಷ್ಟು ದಿನ ತೋರಿಸಬೇಕು ? |