ಲಿಸ್ಬಿನನ ಇಸ್ಲಾಮಿಕ್ ಸೆಂಟರ್ ಮೇಲೆ ದಾಳಿ : ಇಬ್ಬರ ಸಾವು, ಅನೇಕರಿಗೆ ಗಾಯ

ಲಿಸ್ಬನ್ – ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿನ ಇಸ್ಮಾಯಿಲ್ ಸೆಂಟರ್ ಮೇಲೆ ಓರ್ವ ವ್ಯಕ್ತಿಯು ಜನರ ಮೇಲೆ ಚಾಕುವಿಂದ ದಾಳಿ ನಡೆಸಿದನು. ಇದರಲ್ಲಿ ೨ ಹತರಾದರು ಹಾಗು ಅನೇಕರು ಗಾಯಗೊಂಡರು. ಪೊಲೀಸರಿಗೆ ಈ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು. ಇದು ಭಯೋತ್ಪಾದಕರ ದಾಳಿಯ ಎಂದು ಅನುಮಾನವಿದೆ. ದಾಳಿಕೋರನು ಅಫಗಾಣ ಶರ್ಣಾರ್ಥಿಯಾಗಿದ್ದು ಅವನಿಗೆ ೩ ಮಕ್ಕಳಿದ್ದಾರೆ, ಎಂದು ಪೊಲೀಸರು ಮಾಹಿತಿ ನೀಡಿದರು.