‘ಯಾವ ರೀತಿ ಐಸ್‌ಕ್ರೀಮ್‌ಅನ್ನು ತಂಪುಪೆಟ್ಟಿಗೆಯಿಂದ ಹೊರಗೆ ತೆಗೆದರೆ ಕರಗುತ್ತದೆಯೋ, ಅದೇ ರೀತಿ ಚಳಿಗಾಲ ಮುಗಿದು ವಸಂತ ಋತು ಆರಂಭವಾದಾಗ, ಸೂರ್ಯನ ಪ್ರಖರ ಕಿರಣಗಳಿಂದ ಶರೀರದ ಕಫ ಕರಗಿ ತೆಳ್ಳಗಾಗುತ್ತದೆ. ಇದರಿಂದ ವಸಂತ ಋತುವಿನ ಆರಂಭದಲ್ಲಿ ನೆಗಡಿ, ಕೆಮ್ಮು, ಜ್ವರ, ದಮ್ಮು, ಚರ್ಮರೋಗದಂತಹ ಕಫದ ರೋಗಗಳು ಹೆಚ್ಚಾಗುತ್ತವೆ.
ನಿಯಮಿತ ವ್ಯಾಯಾಮ ಮಾಡುವುದು, ಬೆಳಗ್ಗೆ ೧೦ ಗಂಟೆಯ ರೆಗೆ ಏನೂ ತಿನ್ನದೆ ಇರುವುದು, ಹಸಿವಾದಾಗಲೇ ತಿನ್ನುವುದು, ರಾತ್ರಿ ೮ ರ ತನಕ ಊಟ ಮಾಡುವುದು ಮತ್ತು ಸಾಕಷ್ಟು ನಿದ್ದೆ ಇಷ್ಟು ಪಾಲಿಸಿದರೆ, ವಸಂತ ಋತುವಿನಲ್ಲಿ ಆಗುವ ರೋಗಗಳನ್ನು ತಡೆಗಟ್ಟಬಹುದು’.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೨.೨೦೨೩)