ಪಾಕಿಸ್ತಾನದಲ್ಲಿ  ಶ್ರೀ ಹನುಮಂತನನ್ನು ಅಪಮಾನಿಸಿದ ಮುಸಲ್ಮಾನ ಪತ್ರಕರ್ತನ ಬಂಧನ

ಪತ್ರಕರ್ತ ಅಸ್ಲಮ್ ಬಲೋಚನ

ಸ್ಲಾಮಾಬಾದ- ಪಾಕಿಸ್ತಾನದಲ್ಲಿ ಹಿಂದೂ ದೇವತೆಗಳನ್ನು ಅಪಮಾನಿಸಿದ ಪ್ರಕರಣದಲ್ಲಿ ಪತ್ರಕರ್ತ ಅಸ್ಲಮ್ ಬಲೋಚನನ್ನು ಸಿಂಧ್ ಪೊಲೀಸರು ಬಂಧಿಸಿದ್ದಾರೆ. ಮೀರಪುರ ಖಾಸ ಪಂಚಾಯತಿಯ ಉಪಸರಪಂಚ ರಮೇಶ ಕುಮಾರ ಇವರು ಪೊಲೀಸ ಠಾಣೆಯಲ್ಲಿ ಬಲೋಚನ ವಿರುದ್ಧ  ದೂರು ದಾಖಲಿಸಿದ್ದರು. ಬಲೋಚಾನು ತನ್ನ ಫೇಸಬುಕ್ ಖಾತೆಯಲ್ಲಿ ಶ್ರೀ ಹನುಮಂತನ ಮುಖದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನನ ಮುಖವನ್ನು ಹಚ್ಚಿರುವ ಚಿತ್ರವನ್ನು ಪ್ರಸಾರ ಮಾಡಿದ್ದನು. `ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು 2 ಸಮಾಜದ ನಡುವೆ ದ್ವೇಷಮಯ ವಾತಾವರಣ ಮೂಡಿಸುವ ಪ್ರಯತ್ನವಾಗಿದೆ’, ಎಂದು ರಮೇಶ ಕುಮಾರ ತಮ್ಮ ದೂರಿನಲ್ಲಿ ಹೇಳಿದ್ದರು.

1. ಬಿಬಿಸಿ ಪ್ರಸಾರ ಮಾಡಿದ್ದ  ವಾರ್ತೆಗನುಸಾರ  ಪಾಕಿಸ್ತಾನದಲ್ಲಿ ದೈವನಿಂದನೆ ಕಾನೂನು ಇದೆ. ಈ ಕಾನೂನುನ್ನು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಉಪಯೋಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಈ ಕಾನೂನನ್ನು ಮುಸಲ್ಮಾನರ ವಿರುದ್ಧವೂ ಅನ್ವಯಿಸಲಾಗುತ್ತಿದೆ.

2. ಬಲೋಚನು ಮಾಡಿದ್ದ ಆಕ್ಷೇಪಾರ್ಹ ಪೋಸ್ಟ ಬಳಿಕ ಅಲ್ಲಿಯ ಹಿಂದೂಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಲೋಚನನ್ನು ವಿರೋಧಿಸಲು ಪ್ರಾರಂಭಿಸಿದರು. ತದನಂತರ ಪಾಕಿಸ್ತಾನ ಅಲ್ಪಸಂಖ್ಯಾತ ಸಚಿವ ಜ್ಞಾನಚಂದ  ಅಸ್ರಾನಿ ಈ  ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಬಲೋಚನನ್ನು ತಕ್ಷಣವೇ ಬಂಧಿಸುವಂತೆ  ಮನವಿ ಸಲ್ಲಿಸಿ. `ಇತರ ಪಂಥದವರ ಶ್ರದ್ಧಾಸ್ಥಾನಗಳ ಅಪಮಾನ ಮಾಡಲು ಯಾರಿಗೂ ಅಧಿಕಾರವಿಲ್ಲ. ಈ ರೀತಿ ಮಾಡಿ ಸಮಾಜದಲ್ಲಿರುವ ಸದ್ಭಾವನೆಯನ್ನು ನಷ್ಟಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು

3. ಪಾಕಿಸ್ತಾನ ಪತ್ರಕರ್ತ ವೀನಗಾಸ ಟ್ವೀಟ ಮೂಲಕ ಸಧ್ಯಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂದೂಗಳ ದೇವತೆಗಳನ್ನು ಅಪಮಾನಿಸುವ ಚಿತ್ರಗಳನ್ನು ಪ್ರಸಾರ ಮಾಡುವುದು ಪಾಕಿಸ್ತಾನದಲ್ಲಿ ಸಾಮಾನ್ಯ ವಿಷಯವಾಗಿದೆ. ತಮ್ಮ ಮಾತನ್ನು ದೃಢ ಪಡಿಸಲು ಅವರು 2 ಛಾಯಾಚಿತ್ರಗಳನ್ನು ಪ್ರಸಾರ ಮಾಡಿದರು. ಒಂದು ಚಿತ್ರದಲ್ಲಿ ಶ್ರೀ ಹನುಮಂತನ ಮುಖದ ಸ್ಥಳದಲ್ಲಿ ಒಬ್ಬ ಮೌಲವಿಯ ಮುಖವನ್ನು ಹಚ್ಚಲಾಗಿತ್ತು. ಇನ್ನೊಂದು ಛಾಯಾಚಿತ್ರದಲ್ಲಿ ಶ್ರೀ ಮಹಾಕಾಲಿದೇವಿಯ ಮುಖದ ಮೇಲೆ ಆಡಳಿತಾರೂಧ ಪಕ್ಷದ  ನಾಯಕಿ ಮರಿಯಮ್ ನವಾಝ ಇವರ ಮುಖವನ್ನು ಹಚ್ಚಲಾಗಿತ್ತು.

ಪಾಕಿಸ್ತಾನಿ ಪತ್ರಕರ್ತನು ಹಿಂದೂಗಳ ಕ್ಷಮೆ ಕೋರಿದನು.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಪ್ರಕರಣದಲ್ಲಿ ಬಂಧಿಸಿದ ಬಳಿಕ ಪತ್ರಕರ್ತ ಅಸ್ಲಮ್ ಬಲೋಚನು ಹಿಂದೂಗಳ ಕ್ಷಮೆ ಯಾಚಿಸಿದನು. `ಯಾರ ಧಾರ್ಮಿಕ ಭಾವನೆಯನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಈ ಚಿತ್ರವನ್ನು ಬೇರೆ ಯಾರೋ ಮಾಡಿದ್ದರು. ಅದನ್ನು ನಾನು `ಶೇಅರ್’ ಮಾಡಿದೆನು. ನಾನು ಹಿಂದೂಗಳ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇನೆ’, ಎಂದು ಅವನು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಭಾರತದಲ್ಲಿ ವಿವಿಧ ಮಾಧ್ಯಮಗಳಿಂದ ಹಿಂದೂಗಳ  ಧಾರ್ಮಿಕ ಭಾವನೆಗೆ ಧಕ್ಕೆತರಲಾಗುತ್ತದೆ; ಆದರೆ ಹೆಚ್ಚಿನ ಸಲ ಸಂಬಂಧಿತರ ಮೇಲೆ ಕ್ರಮ  ಕೈಕೊಳ್ಳಲಾಗುವುದಿಲ್ಲ. ಪಾಕಿಸ್ತಾನದಲ್ಲಿ ಕೈಕೊಳ್ಳಲಾಗಿರುವ ಕ್ರಮದಿಂದ ಭಾರತವು ಪಾಠ ಕಲಿಯಬೇಕು.