`ತೆಹರಿಕ-ಎ-ತಾಲಿಬಾನ’ ನೊಂದಿಗೆ ಪಾಕಿಸ್ತಾನದ ನಂಟು !

ಜಿನೆವ್ಹಾ (ಸ್ವಿಟ್ಜರಲ್ಯಾಂಡ) – ಇಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ 52ನೇ ಅಧಿವೇಶನದಲ್ಲಿ ಪಾಕಿಸ್ತಾನ ಪುನಃ ಪೇಚಿಗೆ ಸಿಲುಕಿತು. `ಪಶ್ತೂನ ಸಂರಕ್ಷಣಾ ಚಳುವಳಿ’ಯ ಕಾರ್ಯಕರ್ತ ಫಜಲ-ಉರ್-ರಹಮಾನನು ಪಾಕಿಸ್ತಾನದ `ತೆಹರಿಕ-ಎ-ತಾಲಿಬಾನ ಪಾಕಿಸ್ತಾನ’’(ಟಿಟಿಪಿ) ಈ ಭಯೋತ್ಪಾದಕ ಸಂಘಟನೆಯೊಂದಿಗೆ ಹತ್ತಿರದ ಸಂಬಂಧವಿದೆಯೆಂದು ಬಹಿರಂಗ ಪಡಿಸಿದ್ದಾನೆ. ಫಜಲ-ಉರ-ರಹಮಾನ ಮಾತನಾಡುತ್ತಾ, “ಖೈಬರ ಪಖ್ತೂನಖ್ವಾ ಪಾಕಿಸ್ತಾನ’ (ಕೆಪಿಕೆ)ದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಪಶ್ತೂನ ವಂಶದ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ಮತ್ತು ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪಾಕಿಸ್ತಾನ ಮತ್ತು `ತೆಹರಿಕ-ಎ-ತಾಲಿಬಾನ ಪಾಕಿಸ್ತಾನ’ ಇವರೊಂದಿಗೆ ಅಘೋಷಿತ ಒಪ್ಪಂದದ ವಿಷಯದಲ್ಲಿ ನಾವು ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಈ ಒಪ್ಪಂದದಂತೆ `ಟಿಟಿಪಿ’ಯ 44 ಸಾವಿರ ಭಯೋತ್ಪಾದಕರು ಮತ್ತು ಅವರ ಕುಟುಂಬದವರನ್ನು `ಖೈಬರ ಪಖ್ತೂನಖ್ವಾ’ದಲ್ಲಿ ಪುನರ್ವಸತಿಗೊಳಿಸಲಿದ್ದಾರೆ.” `ಪಶ್ತೂನ ಸಂರಕ್ಷಣಾ ಚಳುವಳಿ’ಯು ಈ ಒಪ್ಪಂದದ ವಿರುದ್ದ ಪಾಕಿಸ್ತಾನದಲ್ಲಿ ಪ್ರತಿಭಟನೆಗಳನ್ನು ನಡೆಸಿ ನಮ್ಮ ಭೂಮಿಯ ನಮಗೆ ಮರಳಿಸುವಂತೆ ಕೋರಿದ್ದೇವೆ, ಎಂದು ಫಜಲ-ಉರ-ರಹಮಾನ ಇವರು ಪರಿಷತ್ತಿನಲ್ಲಿ ತಿಳಿಸಿದನು.

ಇತ್ತೀಚೆಗಷ್ಟೇ ಪ್ರಸಾರವಾಗಿರುವ ಒಂದು ವರದಿಯಲ್ಲಿ `ಟಿಟಿಪಿ’ಯು 367 ದಾಳಿಗಳನ್ನು ನಡೆಸಿರುವುದಾಗಿ ಒಪ್ಪಿಕೊಂಡಿದೆ. ಇದರಲ್ಲಿ ಖೈಬರ ಪಖ್ತೂನಖ್ವಾದಲ್ಲಿ 348, ಬಲೂಚಿಸ್ತಾನದಲ್ಲಿ 12, ಪಂಜಾಬಿನಲ್ಲಿ 5 ಮತ್ತು ಸಿಂಧ ಪ್ರಾಂತ್ಯದಲ್ಲಿ 2 ದಾಳಿಗಳು ಸೇರಿವೆ. ಈ ದಾಳಿಯಲ್ಲಿ 446 ಜನರು ಸಾವನ್ನಪ್ಪಿದ್ದು, 1015 ಜನರು ಗಾಯಗೊಂಡಿದ್ದರು. `ಈ ಪ್ರಕರಣದಲ್ಲಿ ವಿಶ್ವ ಸಂಸ್ಥೆಯು ತನಿಖೆ ನಡೆಸಿ ಖೈಬರ ಪಖ್ತೂನಖ್ವಾದ ಜನರಿಗೆ ನ್ಯಾಯ ಒದಗಿಸಬೇಕು’, ಎಂದು ಫಜಲ-ಉರ-ರಹಮಾನ ಮನವಿ ಮಾಡಿದನು.