ಖಲಿಸ್ತಾನಿಗಳಿಂದ ಮತ್ತೊಮ್ಮೆ ಲಂಡನ್ ನ ರಾಯಭಾರಿ ಕಚೇರಿಯ ಮುಂದೆ ಪ್ರತಿಭಟನೆ

ಪೊಲೀಸರ ಮೇಲೆ ನೀರಿನ ಬಾಟಲಿ ಮತ್ತು ಮೊಟ್ಟೆ ಎಸೆತ !

ಲಂಡನ್ ನಲ್ಲಿ ಖಲಿಸ್ತಾನಿಗಳ ಭಾರತ ವಿರೋಧಿ ಪ್ರತಿಭಟನೆ ಭುಗಿಲೆದ್ದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ಲಂಡನ (ಬ್ರಿಟನ್) – ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಮಾರ್ಚ್ ೨೦ ರಂದು ಖಲಿಸ್ತಾನಿಯರು ದಾಳಿ ನಡೆಸಿ ಕಿಟಕಿಯ ಗಾಜುಗಳನ್ನು ಒಡೆಯುವುದರ ಜೊತೆಗೆ ಭಾರತೀಯ ರಾಷ್ಟ್ರಧ್ವಜ ಇಳಿಸಿದ್ದರು. ನಂತರ ಮಾರ್ಚ್ ೨೨ ರಂದು ಮತ್ತೊಮ್ಮೆ ೨ ಸಾವಿರಕ್ಕಿಂತಲೂ ಹೆಚ್ಚಿನ ಖಲಿಸ್ತಾನಿಗಳು ಅಲ್ಲಿಗೆ ಬಂದು ಪ್ರತಿಭಟನೆ ನಡೆಸಿದರು; ಆದರೆ ಈ ಹಿಂದೆ ಅಲ್ಲಿ ಲಂಡನ್ ಪೊಲೀಸರಿಂದ ಹೆಚ್ಚಿನ ಬಂದೋಬಸ್ತು ಮಾಡಲಾಗಿತ್ತು. ಆ ಸಮಯದಲ್ಲಿ ಖಲಿಸ್ತಾನಿಯರು ಪೊಲೀಸರ ಮೇಲೆ ಮಸಿ, ನೀರಿನ ಬಾಟಲಿಗಳು ಮತ್ತು ಮೊಟ್ಟೆಗಳನ್ನು ಎಸೆದರು. ಆ ಸಮಯದಲ್ಲಿ ರಾಯಭಾರಿ ಕಚೇರಿಯ ಕಟ್ಟಡದ ಮೇಲೆ ದೊಡ್ಡದಾದ ರಾಷ್ಟ್ರಧ್ವಜ ಹಾಕಲಾಗಿತ್ತು. ಬಿಬಿಸಿಯ ವಾರ್ತೆಯ ಪ್ರಕಾರ, ಬ್ರಿಟನ್ ನಲ್ಲಿನ ‘ಫೆಡರೇಶನ್ ಆಫ್ ಸಿಖ್ಖ ಆರ್ಗನೈಜೇಷನ್’ ಮತ್ತು ಬೇರೆ ಬೇರೆ ಇತರ ಸಿಖ್ಖ ಯುವಕರ ತಂಡದಿಂದ ಈ ಪ್ರತಿಭಟನೆಯ ಆಯೋಜನೆ ಮಾಡಲಾಗಿತ್ತು.

೧. ಖಲಿಸ್ತಾನಿಗಳ ಪ್ರಕಾರ, ನಮಗೆ ಪಂಜಾಬ್ ನಲ್ಲಿನ ನಮ್ಮ ಕುಟುಂಬದವರ ಮತ್ತು ಸ್ನೇಹಿತರ ರಕ್ಷಣೆಯ ಕಳವಳ ಇದೆ. ರಾಜ್ಯದಲ್ಲಿ ಇಂಟರ್ನೆಟ್ ಸೇವೆ ನಿಲ್ಲಿಸಿದ್ದಾರೆ, ಆದ್ದರಿಂದ ನಾವು ನಮ್ಮ ಕುಟುಂಬದವರ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸೇವೆ ಆರಂಭಿಸಬೇಕು.

೨. ಈ ಪ್ರತಿಭಟನೆಯಿಂದ ಬ್ರಿಟನ್ ನ ವಿದೇಶಾಂಗ ಸಚಿವ ಜೇಮ್ಸ್ ಚತುರಾಯಿ ಇವರು, ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿಗಳ ಮೇಲಿನ ದಾಳಿ ಸಹಿಸಲಾಗದು. ನಾನು ನನ್ನ ಅಭಿಪ್ರಾಯವನ್ನು ರಾಯಭಾರಿ ಅಧಿಕಾರಿ ವಿಕ್ರಮ ದೋರೈಸ್ವಾಮಿ ಇವರ ಮುಂದೆ ಮಂಡಿಸಿದ್ದೇನೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು ನಾವು ಲಂಡನ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತ ಸರಕಾರದ ಸಂಪರ್ಕದಲ್ಲಿದ್ದೇವೆ. ನಾವು ನಗರ ಪೊಲೀಸರ ಸಹಾಯದಿಂದ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸುರಕ್ಷೆಯ ವರದಿ ಪಡೆಯುತ್ತಿದ್ದೇವೆ. ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿಗಳ ಭದ್ರತೆಗಾಗಿ ಅಗತ್ಯವಿರುವ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಸಂಪಾದಕರ ನಿಲುವು

* ನಿರಂತರವಾಗಿ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವ ಖಲಿಸ್ತಾನಿಗಳ ಮೇಲೆ ಲಂಡನ್ ಪೊಲೀಸರು ಕಠಿಣ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಅಥವಾ ಬ್ರಿಟನ್ ಸರಕಾರದಿಂದಲೇ ಖಲಿಸ್ತಾನಿಗಳಿಗೆ ಕುಮ್ಮಕ್ಕು ಇದೆಯೇ ?

* ಬ್ರಿಟಾನ್ ನ ಪ್ರಧಾನಿ ಋಷಿ ಸುನಾಕ್ ಭಾರತೀಯ ಮೂಲದವರಾಗಿದ್ದಾರೆ; ಆದರೂ ಬ್ರಿಟನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಪರಿಸ್ಥಿತಿ ಹೀಗಿದೆ. ಇದು ವಿದೇಶದಲ್ಲಿನ ಭಾರತೀಯ ಮೂಲದ ಜನರನ್ನು ಹೆಜ್ಜೆ ಹೆಜ್ಜೆಗು ಶ್ಲಾಘಿಸುವವರು ಅರ್ಥಮಾಡಿಕೊಳ್ಳಬೇಕು !