ಯುಗಾದಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ‘ಭಾರತದ ಇತಿಹಾಸದಲ್ಲಿ ಸಾತ್ತ್ವಿಕ ಮತ್ತು ಪರಾಕ್ರಮಿ ರಾಜರ ಕಾಲವನ್ನು ‘ಸುವರ್ಣ ಕಾಲ’ ಎಂದು ಪರಿಗಣಿಸ ಲಾಗಿದೆ; ಅದರೆ ಈ ಇತಿಹಾಸದ ಇನ್ನೊಂದು ಬದಿ ನೋಡಿದರೆ ಅದರಲ್ಲಿ ಪಾರತಂತ್ರ್ಯದ, ಅಂದರೆ ವಿದೇಶಿಯರು ಭಾರತದ ಮೇಲೆ ರಾಜ್ಯವಾಳಿದ ಇತಿಹಾಸವೂ ಇದೆ. ರಾಮಾಯಣ ಕಾಲದಲ್ಲಿ ಲಂಕೆಯ ರಾವಣನು ಭಾರತದ ಕೆಲವು ಪ್ರದೇಶಗಳನ್ನು ಆಳಿದ್ದನು. ಭಾರತವನ್ನು ಆತನ ಪಾರತಂತ್ರ್ಯದಿಂದ ಬಿಡಿಸಲು ಪ್ರಭು ಶ್ರೀರಾಮನು ಅವತಾರ ತಾಳಬೇಕಾಯಿತು. ಕಳೆದ ೧೪೦೦ ವರ್ಷಗಳ ಇತಿಹಾಸವನ್ನು ನೋಡಿದರೆ ಭಾರತದ ಕೆಲವು ಭಾಗಗಳಲ್ಲಿ ಗ್ರೀಕರು, ಪೋರ್ಚುಗೀಸರು, ಬ್ರಿಟಿಷರು, ಡಚ್ಚರು ಹಾಗೂ ಮುಸಲ್ಮಾನರು ಹೆಚ್ಚುಕಾಲ ರಾಜ್ಯವನ್ನಾಳಿದರು. ‘ಸಮಾಜದ ಕ್ಷಾತ್ರಭಾವ ಕಡಿಮೆಯಾದಾಗ ಪರಕೀಯ ಸಾಮ್ರಾಜ್ಯವಾದಿ ಶಕ್ತಿ ಪ್ರಭಾವಶಾಲಿಯಾಗುತ್ತದೆ ಮತ್ತು ಪಾರತಂತ್ರ್ಯ ಬರುತ್ತದೆ’, ಇದು ವಿಶ್ವ ಸಿದ್ಧಾಂತವಾಗಿದೆ. ಹಲವಾರು ಬಾರಿ ವಿದೇಶಿಯರ ಈ ಸಾಮ್ರಾಜ್ಯಶಾಹಿಯು ಕ್ಷಾತ್ರಭಾವರಹಿತ ಮಾನಸಿಕತೆಯ ಹಿಂದೂಗಳನ್ನು ಪಾರತಂತ್ರ್ಯಕ್ಕೆತಳ್ಳಿದೆ, ಎಂಬುದನ್ನು ಹಿಂದೂಗಳು ಯಾವಾಗ ಕಲಿಯುವರು ?ನಿಜವೆಂದರೆ ಪಾರತಂತ್ರ್ಯಕ್ಕೆ ತಳ್ಳುವ ಸಾಮ್ರಾಜ್ಯಶಾಹಿಯನ್ನು ಸೋಲಿಸಲು ಹಾಗೂ ಮುಂದೆ ಎಂದಿಗೂ ಪಾರತಂತ್ರ್ಯಕ್ಕೊಳ ಗಾಗದಿರಲು, ಭಾರತವನ್ನು ಅಜೇಯ ರಾಷ್ಟ್ರವನ್ನಾಗಿಸÀಲು ಹಿಂದೂ ಸಮಾಜವು ತನ್ನಲ್ಲಿ ಹೋರಾಡುವ ವೃತ್ತಿಯನ್ನು ಜಾಗೃತಗೊಳಿಸಬೇಕು !
ಹಾಗಾಗಿ ಹಿಂದೂಗಳೇ, ಶಸ್ತ್ರಸಜ್ಜಿತರು ಹಾಗೂ ದುಷ್ಟಶಕ್ತಿಗಳಿಗೆ ಕಾಲವಾಗಿರುವ ದೇವತೆಗಳ ಉಪಾಸನೆಯನ್ನು ಭಜನೆಯಿಂದ ಮಾತ್ರವಲ್ಲ, ಜೊತೆಗೆ ಅವರಲ್ಲಿನ ಹೋರಾಟವೃತ್ತಿಯನ್ನೂ ಅಂಗೀಕರಿಸಿ, ಭಾರತವನ್ನು ಅಜೇಯ ಸಾಮ್ರಾಜ್ಯವನ್ನಾಗಿಸಿ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ