೧. ಜಾಗತಿಕ ಮಟ್ಟದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ವರ್ಚಸ್ಸು !
‘ಇಂದು ಭಾರತೀಯನೊಬ್ಬನು ವಿಶ್ವದಾದ್ಯಂತ ಭಯ ಹುಟ್ಟಿಸಿದ್ದಾನೆ. ಕೆಲವರು ತಕ್ಷಣ ಮೋದಿ, ಪುತಿನ್, ಜೋ ಬಾಯಡೆನ್, ಕಿಮ್ ಜೋಂಗ್ ಉನ್, ಶೀ ಜಿನ್‌ಪಿಂಗ್ ಇವರ ಪೈಕಿ ಒಬ್ಬರ ಹೆಸರನ್ನು ಹೇಳಬಹುದು, ಇನ್ನು ಕೆಲವರು ಅಮಿತ ಶಾಹ ಅಥವಾ ರಾಹುಲ ಗಾಂಧಿ ಇವರ ಹೆಸರನ್ನು ಹೇಳಲೂ ಹಿಂಜರಿಯಲಿಕ್ಕಿಲ್ಲ; ಆದರೆ ಈ ಹೆಸರು ಇವರ‍್ಯಾರದ್ದು ಅಲ್ಲ. ಈ ಹೆಸರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಆದರೂ ಗಣ್ಯಾತಿಗಣ್ಯ ವ್ಯಕ್ತಿಗಳು ಸಹ ಈ ವ್ಯಕ್ತಿಯನ್ನು ಎದುರಿಸಲು ಭಯಪಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜ ಠಾಕ್ರೆಯವರೂ ಸಹ ಇಂತಹದ್ದೇ ವ್ಯಕ್ತಿಯಾಗಿದ್ದು ಅವರಲ್ಲಿಯೂ ಪ್ರಶ್ನೆ ಕೇಳಲು ಪತ್ರಕರ್ತರೂ ಹೆದರುತ್ತಾರೆ; ಆದರೆ ಅದರ ಕಾರಣ ಅಷ್ಟೇನೂ ಮಹತ್ವದ್ದಲ್ಲ. ಇಲ್ಲಿ ನಾನು ಹೇಳಲಿರುವ ಹೆಸರಿನ ಭಯ ಜಗತ್ತಿಗೆ ಮತ್ತು ಭಾರತೀಯರಿಗೆ ಅಭಿಮಾನಪಡುವಂತಹ ವಿಷಯವಾಗಿದೆ.
ಇತ್ತೀಚಿನವರೆಗೆ ‘ಭಾರತೀಯ ವಿದೇಶಾಂಗ ಸೇವೆಯಲ್ಲಿದ್ದ (ಐ.ಎಫ್.ಎಸ್.) ಈ ಅಧಿಕಾರಿಯು ಕಡತಗಳನ್ನು ಹಿಡಿದುಕೊಂಡು ರಾಜಕೀಯ ನೇತಾರರ ಹಿಂದೆಮುಂದೆ ಅಲೆದಾಡುತ್ತಿದ್ದರ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಈ ಅಧಿಕಾರಿಯನ್ನು ಗುರುತಿಸಿ ನಿವೃತ್ತರಾದ ತಕ್ಷಣ ನೇರವಾಗಿ ಭಾರತದ ವಿದೇಶಾಂಗ ಸಚಿವ ಹಾಗೂ ರಾಜ್ಯಸಭೆಯಲ್ಲಿ ಸಂಸದರನ್ನಾಗಿ ಮಾಡಿದರು. ಹೌದು ಇದು ಸತ್ಯ, ಡಾ. ಎಸ್. ಜಯಶಂಕರ ! ಇವರು ತಮಗೆ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡು ಜಾಗತಿಕ ಸ್ತರದಲ್ಲಿ ಎಲ್ಲ ದೇಶಗಳಿಗೆ ಭಾರತೀಯರ ಶಕ್ತಿಯನ್ನು ತೋರಿಸಿಕೊಟ್ಟರು.
ಶಸ್ತ್ರಾಸ್ತ್ರಗಳ ಪ್ರಭಾವದಿಂದ ಭಯಹುಟ್ಟಿಸುವವರನ್ನು ಬಹಳಷ್ಟು ನೋಡಿದ್ದೇವೆ; ಆದರೆ ಸಂದರ್ಭಕ್ಕನುಸಾರ ತಟ್ಟನೆ ಉತ್ತರ ನೀಡುವ ವಿದೇಶಾಂಗ ಸಚಿವ ಭಾರತಕ್ಕೆ ಲಭಿಸುವುದು, ಮತ್ತು ಜಾಣ್ಮೆಯ ಆಧಾರದಲ್ಲಿ ಇಂತಹ ವ್ಯಕ್ತಿಗೆ ಹುದ್ದೆಯನ್ನು ನೀಡುವುದು, ಇದು ಬಹುಶಃ ಸ್ವಾತಂತ್ರ್ಯದ ನಂತರ ನಡೆದ ಅಪರೂಪದ ಘಟನೆಯಾಗಿರಬಹುದು. ೨೦೧೪-೨೦೧೫ ರ ನಂತರ ಡಾ. ಎಸ್. ಜಯಶಂಕರ, ಅಶ್ವಿನಿ ವೈಷ್ಣವ, ಹರದೀಪಸಿಂಹ ಪುರೀ, ಅಜಿತ್ ಡೋವಾಲ್, ಪಿ.ಕೆ. ಮಿಶ್ರಾ ಹಾಗೂ ಇಂತಹ ಸುಮಾರು ೨೦೦ ಭಾರತೀಯರು ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ವಿದೇಶಸೇವೆಯಲ್ಲಿದ್ದ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಯೋಗ್ಯ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ, ಸದ್ಯ ಅವರು ಮಾಡುತ್ತಿರುವ ಸೇವೆಯಿಂದ ಉತ್ತಮ ಪರಿಣಾಮ ಕಂಡುಬರುತ್ತಿದೆ ಹಾಗೂ ಮುಂದೆಯೂ ಕಾಣಿಸಲಿಕ್ಕಿದೆ. ಸ್ವಾತಂತ್ರ್ಯದ ನಂತರ ೭೫ ವರ್ಷ ಪಾಕ್‌ಆಕ್ರಮಿತ ಕಾಶ್ಮೀರದ ರೂಪದಲ್ಲಿ ಉಲ್ಬಣಿಸುತ್ತಿರುವ ಗಾಯ ವನ್ನು ಈ ಜನರು ಯುದ್ಧ ಮಾಡದೆಯೆ ಗುಣಪಡಿಸಲಿದ್ದಾರೆ. ಮೋದಿಯವರು ಸರಿಯಾಗಿ ಹೇಳಿದ್ದಾರೆ, “ಪ್ರಸ್ತುತ ಕಾಲದಲ್ಲಿ ಯುದ್ಧವು ಬಹಳ ದುಬಾರಿಯಾಗಿದೆ; ಆದರೆ ಯುದ್ಧ ಮಾಡದೆಯೇ ಯುದ್ಧಕ್ಕಿಂತಲೂ ಕೆಟ್ಟ ಪರಿಣಾಮವನ್ನು ಯಾವುದಾದರೂ ಅಥವಾ ನಿರ್ದಿಷ್ಠ ಗುರಿಯತ್ತ ತಂದೊಡ್ಡಬಹುದು. ಇದರ ಜ್ವಲಂತ ಉದಾಹರಣೆಯನ್ನು ನಾವು ಪಾಕಿಸ್ತಾನದ ರೂಪದಲ್ಲಿ ನೋಡುತ್ತಿದ್ದೇವೆ. ತಮ್ಮನ್ನು ಭಾರತ ನಾಶಗೊಳಿಸಿದೆ ಎಂದು ಪಾಕಿಸ್ತಾನಕ್ಕೂ ತಿಳಿದಿಲ್ಲ ಹಾಗೂ ತಿಳಿದರೂ ಅದನ್ನು ಅವರು ಜಗತ್ತಿಗೆ ಹೇಳಲೂ ಸಾಧ್ಯವಿಲ್ಲ. ಅದು ಜಗತ್ತಿಗೂ ತಿಳಿದಿದ್ದರೂ ಹೇಳಲು ಆಗುವುದಿಲ್ಲ. ಆದರೆ ಪಾಕಿಸ್ತಾನಕ್ಕೆ ತಿಳಿಯದಂತೆಯೆ ಮುಳ್ಳನ್ನು ತೆಗೆಯಲಾಗಿದೆ. ನಿಜವಾದ ಮೋಜು ಇನ್ನು ಮುಂದೆ ಆರಂಭವಾಗಲಿಕ್ಕಿದೆ.
೨. ಪಾಕಿಸ್ತಾನ ಯಾದವೀ ಯುದ್ಧದ ಹೊಸ್ತಿಲಲ್ಲಿದೆ !
ನಾವು ಪಾಕಿಸ್ತಾನದ ಬಲುಚಿಸ್ತಾನವನ್ನು ನೋಡುತ್ತೇವೆ, ಅದಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಜಿನ್ನಾ ಒಪ್ಪಿಕೊಂಡಿದ್ದರು; ಆದರೆ ಅಲ್ಲಿಯೂ ಕಾಶ್ಮೀರದ ಹಾಗೆಯೆ ಜನರನ್ನು ತುರುಕಿ ವಶಪಡಿಸಿ ಕೊಂಡರು. ಬಲುಚಿಸ್ತಾನಕ್ಕೆ ಕೇವಲ ೮ ದಿನಗಳ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾಯಿತು. ಆದರೆ ಒಮ್ಮೆ ಸ್ವಾತಂತ್ರ್ಯ ಸವಿಯನ್ನು ಅನುಭವಿಸಿದ ಬಲುಚಿಸ್ತಾನಕ್ಕೆ ಪುನಃ ತನ್ನ ಸ್ವಾತಂತ್ರ್ಯವನ್ನುಗಳಿಸಬೇಕೆನ್ನುವ ಹಂಬವಿದೆ. ಬಲುಚಿಸ್ತಾನದ ಜನರು ಕೇವಲ ಬಲುಚಿಸ್ತಾನದಲ್ಲಿ ಮಾತ್ರವಲ್ಲ, ಇರಾನ್ ಮತ್ತು ಅಫಘಾನಿಸ್ತಾನದಲ್ಲಿಯೂ ಇದ್ದಾರೆ. ಪಖ್ತೂನ ಪ್ರಾಂತದ್ದೂ ಅದೇ ಸ್ಥಿತಿಯಾಗಿದೆ. ಪಾಕಿಸ್ತಾನದಂತೆಯೆ ಅಫ್ಘಾನಿಸ್ತಾನದಲ್ಲಿಯೂ ಪಖ್ತೂನಿ ಜನರಿದ್ದಾರೆ. ಸ್ವಾತಂತ್ರ್ಯದ ಮೊದಲು ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಆಂಗ್ಲರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ‘ಡ್ಯುರಂಡ್ ರೇಖೆಯನ್ನು (ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ನಡುವಿನ ಸೀಮೆ) ನಿರ್ಮಿಸಿದರು. ಈ ರೇಖೆಯಲ್ಲಿ ಎಷ್ಟು ದೊಡ್ಡ ಹಗರಣವಿದೆಯೆಂದರೆ ಅರ್ಧ ಪಖ್ತೂನ ಅಫ್ಘಾನಿಸ್ತಾನಕ್ಕೆ ಹಾಗೂ ಅರ್ಧ ಪಾಕಿಸ್ತಾನಕ್ಕೆ ಹೋಗಿದೆ.
ಗಡಿನಾಡ ಗಾಂಧಿ ಅಥವಾ ಸರದಾರ ಖಾನ್ ಅಬ್ದುಲ್ ಗಫಾರ ಖಾನ್ ಇವರ ನೆನಪಾಗುತ್ತದೆಯೇ ? ಇವರೇ ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದವರು. ಈ ಗಡಿನಾಡ ಗಾಂಧಿಯವರು ಜಿನ್ನಾರ ‘ದ್ವಿರಾಷ್ಟ್ರ ಥಿಯರಿಯನ್ನು ವಿರೋಧಿಸಿದ್ದರು. ಪಖ್ತೂನ ಪ್ರಾಂತವನ್ನು ಭಾರತದಲ್ಲಿ ಸೇರಿಸಬೇಕು, ಎಂದು ಗಡಿನಾಡ ಗಾಂಧಿಗೆ ಅನಿಸುತ್ತಿತ್ತು. ಅದು ಸಾಧ್ಯವಾಗಲಿಲ್ಲ, ಆದರೆ ಅವರಿಗೆ ಬೇರೆಯೆ ಪಖ್ತೂನ ದೇಶ ನಿರ್ಮಾಣ ಮಾಡಲು ಒಪ್ಪಿಗೆಯಿತ್ತು; ಆದರೆ ಜಿನ್ನಾ ಹಾಗಾಗಲು ಬಿಡಲಿಲ್ಲ. ಆದರೂ ವಿಭಜನೆಯ ವಿಷಯದಲ್ಲಾದ ಮತದಾನದಲ್ಲಿ ಹೆಚ್ಚು ಕಡಿಮೆ ಶೇ. ೧೦೦ ರಷ್ಟು ವಿಭಜನೆಯ ಪರವಾಗಿ ಮತದಾನವಾಗಿತ್ತು; ಆದರೆ ಮುಸಲ್ಮಾನರು ಪಾಕಿಸ್ತಾನದ ಬದಲು ಭಾರತದಲ್ಲಿಯೆ ಉಳಿಯಲು ಇಷ್ಟಪಟ್ಟರು. ಇದರ ಅರ್ಥ ವಿಭಜನೆಯ ಈ ಮೋಸಗಾರಿಕೆಯು ಸ್ವಲ್ಪ ಜನರನ್ನು ಓಲೈಸಲು ಮಾಡಿದಂತಾಯಿತು. ಈ ವಿಭಜನೆಯ ಬೆಲೆಯನ್ನು ಎರಡೂ ದೇಶಗಳು ಮತ್ತು ಅವುಗಳ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಜೀವ ಮತ್ತು ಸಂಪತ್ತಿನ ರೂಪದಲ್ಲಿ ತೆರಬೇಕಾಯಿತು. ೧೯೪೭ ರಿಂದ ಪಾಕಿಸ್ತಾನದಲ್ಲಿ ಯಾವತ್ತೂ ಪ್ರಜಾಪ್ರಭುತ್ವವು ನೆಲೆಯೂರಲು ಸಾಧ್ಯವಾಗಿಲ್ಲ. ಬೇಲಿಯೇ ಎದ್ದು ಮೇಯ್ದಂತಿದೆ. ಈಗ ಶೀಘ್ರದಲ್ಲೇ ಪಾಕಿಸ್ತಾನದಲ್ಲಿ ಯಾದವೀ ಅಥವಾ ಆಂತರಿಕ ಯುದ್ಧ ಆರಂಭವಾಗುವ ಸಾಧ್ಯತೆಯಿದೆ.
೩. ಪಾಕಿಸ್ತಾನವನ್ನು ಉಳಿಸಲು ಅಸಮರ್ಥವಾಗಿರುವ ಚೀನಾ ಮತ್ತು ಮುಸಲ್ಮಾನ ರಾಷ್ಟ್ರಗಳು
ತಾಲೀಬಾನಿ ಭಯೋತ್ಪಾದಕರಿಗೆ ತನ್ನ ಭೂಮಿಯನ್ನು ಉಪಯೋಗಿಸಲು ನೀಡಿದ ಪಾಕಿಸ್ತಾನ ಸಾಕಷ್ಟು ಹಣ ಮತ್ತು ಇತರ ವಿಷಯಗಳ ಪ್ರತಿಫಲದಿಂದ ಭಯೋತ್ಪಾದನೆಯನ್ನು ಪುರಸ್ಕರಿಸಿತು. ಈ ಜನರು ಭವಿಷ್ಯದಲ್ಲಿ ನಮಗೆ ಉಪಯೋಗ ವಾಗುವರು, ಎಂಬುದು ಪಾಕಿಸ್ತಾನದ ದೂರದೃಷ್ಟಿಯಾಗಿತ್ತು. ಈಗ ಅದರ ಫಲವನ್ನು ಭೋಗಿಸುತ್ತಿದೆ. ಯಾವುದೇ ದೇಶಕ್ಕೆ ತನ್ನ ವಿದೇಶಾಂಗ ನೀತಿ ಹಾಗೂ ಗೂಢಚರ ವ್ಯವಸ್ಥೆಯು ಮಹತ್ವದ್ದಾಗಿರುತ್ತದೆ. ವರ್ಷಗಟ್ಟಲೆ ಬಲಿಪಶುವಿನ ಹಂತಕ್ಕೆ ಬರುವ ದಾರಿ ಕಾಯುತ್ತಾ ಕುಳಿತುಕೊಳ್ಳುವುದು ಹಾಗೂ ಅದು ಆ ಹಂತಕ್ಕೆ ಬಂದಾಗ ಮುಖ ತಿರುಗಿಸುವುದು. ಇದರಿಂದ ಸಾಧನ ಸಾಮಗ್ರಿ ಗಳಿಗೆ ಹಾನಿಯಾಗುತ್ತದೆ. ಅದೇ ರೀತಿ ಸಮಸ್ಯೆಗಳು ಹೆಚ್ಚು ಜಟಿಲ ವಾಗುತ್ತದೆ. ಅಲ್ಲದೇ ಜಗತ್ತಿನಲ್ಲಿ ತೇಜೋವಧೆಯಾಗುತ್ತದೆ. ಈಗ ಹಾಗಿಲ್ಲ. ಕೆಲವು ವಿಷಯಗಳು ಘಟಿಸಿವೆ, ಕೆಲವು ವಿಷಯ ಗಳನ್ನು ಮಾಡಿಸಲಾಗುತ್ತಿದೆ. ಕಾಲ ಕಳೆದಂತೆ ಪಾಕಿಸ್ತಾನ ಅಶಾಂತವಾಗುವುದು. ತಾಲೀಬಾನ್ ಪಾಕಿಸ್ತಾನದೊಂದಿಗೆ ಬೇಟೆಯ ನಾಯಿಯಂತೆ ವರ್ತಿಸಲು ಪ್ರಾರಂಭಿಸುವುದು. ಸದ್ಯ ಇಡೀ ಪಾಕಿಸ್ತಾನದಲ್ಲಿ ಪಾಕಿಸ್ತಾನವೇ ಸಾಕಿ ಸಲಹಿದ ಭಯೋತ್ಪಾದಕರು ಬಾಂಬ್‌ಸ್ಫೋಟ ಮಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಿಂದ ಕಂಗ್ಗೆಟ್ಟ ಪಾಕಿಸ್ತಾನಕ್ಕೆ ತಾಲೀಬಾನಿನೊಂದಿಗೆ ಹೋರಾಡಲು ಬೇಕಾಗುವ ಹಣವನ್ನು ಸಂಗ್ರಹಿಸಲು ಅಸಾಧ್ಯವಾಗಲಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ದೇಶಗಳು ಖಂಡಿತ ಪಾಕಿಸ್ತಾನಕ್ಕೆ ಸಹಾಯ ಮಾಡುವ ಹಾಗೆ ಸೋಗು ಹಾಕಬಹುದು. ಅಂತಹ ಕೆಲವು ದೇಶಗಳೆಂದರೆ ಮುಸಲ್ಮಾನ ಸಮಾಜದ ಹೊಸ ಆಶ್ರಯದಾತ ಎಂಬ ಚಿತ್ರವನ್ನು ಬಣ್ಣಿಸುವ ತುರ್ಕಿಯೆ ಹಾಗೂ ಚೀನಾ. ಕಾರಣಾಂತರದಿಂದ ಪಾಕಿಸ್ತಾನದಲ್ಲಿ ಮಾಡಿದ ಹೂಡಿಕೆ ನಿಷ್ಫಲವಾದ ಕಾರಣ ಚೀನೀ ನೇತೃತ್ವ ಚಿಂತೆಯಲ್ಲಿದೆ. ಈಗ ಉಳಿದಿರುವ ಸಮಸ್ಯೆ ಅರಬ ದೇಶಗಳದ್ದು, ಖನಿಜ ತೈಲದ ಆಧಾರದಲ್ಲಿ ಜೀವಿಸುವ ಈ ದೇಶಗಳಿಂದ ಸದ್ಯ ಪ್ರವಾಸೋದ್ಯಮದ ಮೇಲಾಧಾರಿತ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುತ್ತಿದ್ದೇವೆ ಎಂಬಂತೆ ತೋರತ್ತಿದೆ. ಮೂಲತಃ ಇನ್ನೂ ೩೦-೪೦ ವರ್ಷಗಳಲ್ಲಿ ಈ ದೇಶಗಳಿಗೆ ಯಾರು ಸುತ್ತಾಡಲು ಹೋಗುವರು ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
೪. ಭಾರತದ ಮುತ್ಸದ್ದಿತನ ಚೀನಾಗೆ ಸವಾಲು
ನಿಜವಾಗಿಯೂ ಅರಬರಾದರೂ ಅಲ್ಲಿ ನಿಲ್ಲುವರೇ ? ಇಂದು ಅವರ ವಿಕಸನಶೀಲ ಅಥವಾ ವಿಕಸಿತ ದೇಶಗಳಲ್ಲಿ ಹೂಡಿಕೆ ಮಾಡುವ ನಿರಂತರ ಚಡಪಡಿಕೆಯು ಗುಟ್ಟಾಗಿ ಉಳಿದಿಲ್ಲ. ಹೂಡಿಕೆಗಾಗಿ ಅವರಿಗೆ ಭಾರತವು ಮೊದಲು ಪ್ರಾಧಾನ್ಯತೆಯಾಗಿದೆ. ಅದರಲ್ಲಿಯೆ ರಷ್ಯಾ-ಯುಕ್ರೇನ್ ಯುದ್ಧದ ನಂತರ ಭಾರತವು ರಷ್ಯಾದ ಪರ ನಿಂತಿರುವುದರಿಂದ ಭಾರತ ಮತ್ತು ರಷ್ಯಾ ಇನ್ನಷ್ಟು ಹತ್ತಿರವಾಗಿವೆ. ಹಾಗೆ ಚೀನಾವೂ ರಷ್ಯಾದ ಪರ ನಿಂತಿದೆ; ಆದರೆ ರಷ್ಯಾದ ದೃಷ್ಟಿಯಲ್ಲಿ ಭಾರತವೇ ಮಹತ್ವದ್ದಾಗಿದೆ; ಏಕೆಂದರೆ ಚೀನಾ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಒಂಟಿಯಾಗಿದೆ ಹಾಗೂ ಭಾರತವನ್ನು ಬಿಟ್ಟು ಜಗತ್ತಿನ ಮಹತ್ವದ ದೇಶಗಳು ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವುದಿಲ್ಲ. ರಷ್ಯಾದ ಭಾರತ ದೊಂದಿಗಿನ ಸಂಬಂಧ ಯಾವಾಗಲೂ ಚೀನಾಕ್ಕಿಂತ ಹೆಚ್ಚು ಉತ್ತಮವಾಗಿದೆ. ಹೀಗಿರುವಾಗ ರಷ್ಯಾ ಮತ್ತು ಭಾರತ ವ್ಯಾಪಾರಿ ಸಂಬಂಧವನ್ನು ಹೆಚ್ಚಿಸುವುದು ಸ್ವಾಭಾವಿಕವಾಗಿದೆ. ಅದರಲ್ಲಿ ಇನ್ನೊಂದು ವಿಷಯವೆಂದರೆ, ಪೈಪ್‌ಲೈನ್‌ನ ಮೂಲಕ ಭಾರತಕ್ಕೆ ಗ್ಯಾಸ್ ಮತ್ತು ಖನಿಜ ತೈಲ ಪೂರೈಸುವುದು. ಪಾಕ್‌ಆಕ್ರಮಿತ ಕಾಶ್ಮೀರವು ಭಾರತ, ರಷ್ಯಾ, ಪಾಕಿಸ್ತಾನ ಮತ್ತು ಚೀನಾ ಈ ನಾಲ್ಕೂ ದೇಶಗಳ ‘ಕ್ರಾಸ್ ಪಾಯಿಂಟ್ ಆಗಿದೆ. ಇಲ್ಲಿ ಭಾರತಕ್ಕೆ ಅಡ್ಡಿ ಪಡಿಸಿದರೆ ಚೀನಾದ ಕಾಶಗರದಿಂದ ಗ್ವಾದಾರ ಬಂದರದ ವರೆಗೆ ತಲಪಲು ಬಲುಚಿಸ್ತಾನದ ಹೊರತು ಪರ್ಯಾಯವಿಲ್ಲ ಹಾಗೂ ಸದ್ಯವಂತೂ ಬಲುಚಿಸ್ತಾನದಲ್ಲಿ ಭಾರತದ್ದೆ ವರ್ಚಸ್ಸಿದೆ. ಇದು ಭಾರತೀಯರಿಗೆ ಗೊತ್ತಿಲ್ಲದಿದ್ದರೂ, ಚೀನಾದವರಿಗೆ ತಿಳಿದಿದೆ. – ಶ್ರೀ. ಸಚಿನ್ ಢೋಕ್, ಪುಣೆ.
೫. ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್ ಬಾಲ್ಟಿಸ್ತಾನವನ್ನು ವಶಪಡಿಸಿಕೊಂಡರೆ ದೇಶದ್ರೋಹಿಗಳ ಗುಂಪು ದೇಶದಲ್ಲಿ ಅಸ್ಥಿರತೆಯನ್ನುಂಟು ಮಾಡುವ ಸಾಧ್ಯತೆ !
ಇನ್ನೊಂದೆಡೆ ಪಖ್ತೂನದಲ್ಲಿ ತಾಲೀಬಾನ್ ಮಾಡುತ್ತಿರುವ ಕಾರ್ಯಾಚರಣೆಯಿಂದ ಗಿಲ್‌ಗಿಟ್ ಬಾಲ್ಟಿಸ್ತಾನ ತನ್ನಿಂತಾನೇ ಬದಿಗೆ ಸರಿಯುವುದು. ಆಗ ಅಲ್ಲಿ ಆಂದೋಲನಗಳು ಆರಂಭವಾಗಬಹುದು ಹಾಗೂ ಆ ಮೇಲೆ ಭಾರತವು ನಿರಾಯಾಸವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್ ಬಾಲ್ಟಿಸ್ತಾನವನ್ನು ವಶಪಡಿಸಿಕೊಳ್ಳುವುದು. ವಿಶೇಷವೆಂದರೆ ಹೀಗೆಲ್ಲ ಆಗುತ್ತಿರುವಾಗ ಚೀನಾ ಬಾಯಿ ಮುಚ್ಚಿ ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ; ಏಕೆಂದರೆ ಬೀಜಿಂಗ್‌ನಿಂದ ಗ್ವಾದಾರ ಬಂದರಗೆ ತಲುಪಲು ಭಾರತದ ಸಹಾಯ ಪಡೆಯಬೇಕಾಗುತ್ತದೆ.
ವಾಸ್ತವದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗೊಂದಲಮಯ ಲೆಕ್ಕಾಚಾರವನ್ನು ಇಷ್ಟು ಸುಲಭದಲ್ಲಿ ಪರಿಹರಿಸಿದಾಗ ಕಲಮ್ ೩೭೦ ರ ನಂತಹ (ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ) ವಾತಾವರಣವನ್ನು ಭಾರತದಲ್ಲಿಯೂ ಸೃಷ್ಟಿಸಲು ಪ್ರಯತ್ನವಾಗಬಹುದು. ಹೀಗಾದರೆ ಚೀನಾದ ಉಪ್ಪು ತಿಂದ ಜನರನ್ನು ಎಚ್ಚರಗೊಳಿಸಬೇಕಾಗಬಹುದಲ್ಲವೇ ? ಏಕೆಂದರೆ ಭಾರತದಲ್ಲಿ ಒಂದಲ್ಲ ಒಂದು ಕಾರಣದಿಂದ ಅಸ್ಥಿರತೆಯನ್ನುಂಟು ಮಾಡುವ ಒಂದು‘ಲಾಗ್ ಟರ್ಮ್ ಅಜೆಂಡಾ (ಪ್ರದೀರ್ಘ ಕಾಲದ ಕಾರ್ಯಕ್ರಮ) ಇದೆಯಲ್ಲವೇ !
೬. ಪಾಕ್‌ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್ ಬಾಲ್ಟಿಸ್ತಾನವನ್ನು ವಶಪಡಿಸಿಕೊಳ್ಳಲು ಸೂಕ್ತ ಕಾಲ !
ಅಫ್ಘಾನಿಸ್ತಾನದಲ್ಲಿ ಅಧಿಕಾರ ಸಿಕ್ಕಿದ ನಂತರ ತಾಲೀಬಾನಿಗಳು ಆಕಾಶದಲ್ಲಿ ತೇಲುತ್ತಿದ್ದಾರೆ. ಆದ್ದರಿಂದ ಬಲೂಚ್ ಮತ್ತು ಪಖ್ತೂನ ಪ್ರಾಂತವನ್ನು ಸ್ವತಂತ್ರಗೊಳಿಸುವ ಅವರ ಮಹತ್ವಾಕಾಂಕ್ಷೆ ಜಾಗೃತವಾಗಿದೆ. ಪಾಕಿಸ್ತಾನವು ಸದ್ಯ ರಾಜಕೀಯ ಹಾಗೂ ಆರ್ಥಿಕ ದೃಷ್ಟಿಯಲ್ಲಿ ದಿವಾಳಿಯಾಗಿದೆ. ಅದೇ ರೀತಿ ಪರಿಸ್ಥಿತಿ ಯಾವತ್ತೂ ಕೈಮೀರಿ ಹೋಗುವ ಸಾಧ್ಯತೆಯೂ ದಟ್ಟವಾಗಿದೆ. ಭಾರತದ ಅಜೆಂಡಾದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸಮಯ ಅನುಕೂಲವಾಗಿದೆ. ಅದಕ್ಕಾಗಿ ಭಾರತದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ‘ಭಾರತವು ಯಾವುದೇ ಕ್ಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬಹುದು; ಎನ್ನುವ ವಾತಾವರಣ ಮೂಡಿಸುವ ಕಾರ್ಯ ನಡೆದಿದೆ. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಲು ಆವಶ್ಯಕವಾಗಿರುವಂತಹ ಕಾರ್ಯವೂ ನಡೆದಿದೆ. ಗಿಲ್‌ಗಿಟ್ ಬಾಲ್ಟಿಸ್ತಾನದಲ್ಲಿ ಪಾಕಿಸ್ತಾನ ಹಾಗೂ ಚೀನಾದ ವಿರುದ್ಧ ಜನಾಂದೋಲನ ನಡೆಸಿ ವಾತಾವರಣ ಅಸ್ಥಿರಗೊಳಿಸಲು ಪ್ರಾರಂಭವಾಗಿದೆ. ಪಾಕ್‌ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್ ಬಾಲ್ಟಿಸ್ತಾನದಲ್ಲಿನ ಮುಖಂಡರು ಮತ್ತು ವಿಚಾರವಂತರೊಂದಿಗೆ ವಿಚಾರವಿನಿಮಯ ಮಾಡಿ ಈ ಪ್ರದೇಶ ಮತ್ತು ಈ ಪ್ರದೇಶದ ಜನರು ಭಾರತದಲ್ಲಿ ಸಮಾವೇಶವಾಗಲು ಸಿದ್ಧರಿದ್ದಾರೆ, ಎಂಬುದನ್ನು ತೋರಿಸುವ ಕಾರ್ಯಕ್ರಮವೂ ನಡೆದಿದೆ. ಒಟ್ಟಾರೆ ಅನುಕೂಲ ವಾತಾವರಣವನ್ನು ಬಿಂಬಿಸಲಾಗುತ್ತಿದೆ. ಇದು ಭಾರತದ ವಿದೇಶಕ್ಕೆ ಸಂಬಂಧಿತ ಕೂಟನೀತಿ ಹಾಗೂ ಮುತ್ಸದ್ದಿತನದ ಒಂದು ಭಾಗವಾಗಿದೆ. ಒಟ್ಟಾರೆ ಪಾಕ್‌ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್ ಬಾಲ್ಟಿಸ್ತಾನವನ್ನು ಭಾರತವು ವಾಪಾಸು ಪಡೆಯುವ ಸಿಹಿ ಸುದ್ಧಿ ಬೇಗನೆ ಪೂರ್ಣವಾಗಲಿದೆ, ಎಂದು ಆಶಿಸೋಣ.
– ಶ್ರೀ. ಸಚಿನ್ ಢೋಕ್, ಪುಣೆ.
(ಆಧಾರ : ಸಾಮಾಜಿಕ ಜಾಲತಾಣ)