‘ಯುಪಿಐ ಆಪ್ಸನ  ಮಾಧ್ಯಮದಿಂದ ತಪ್ಪು ಖಾತೆಗೆ ಹಣ ಕಳಿಸಿದ್ದರೆ ಏನು ಮಾಡಬೇಕು?

(ಯುಪಿಐ. ಎಂದರೆ ಯುನಿಫೈಡ್ ಪೇಮೆಂಟ್ಸ ಇಂಟರ್ ಫೇಸ – ಯಾವುದರಿಂದ ಅನೇಕ ಬ್ಯಾಂಕುಗಳ ಅನೇಕ ಖಾತೆ ಗಳಿಗೆ ಸಂಚಾರವಾಣಿಯ (ಮೊಬೈಲ್) ಒಂದು ‘ಆನ್‌ಲೈನ್ ಆಪ್ಸನ ಮೂಲಕ ಹಣವನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ. ಸರಕಾರ ಇದನ್ನು ಎಲ್ಲರಿಗೂ ಲಭ್ಯ ಮಾಡಿಕೊಟ್ಟಿದೆ.)

ಶ್ರೀ ಅಭಿಷೇಕ ಮುರಕಟೆ

೧. ‘ಯುಪಿಐ ಆಪ್ಸನ ಮಾಧ್ಯಮದಿಂದ ‘ಆನಲೈನ್ ವ್ಯವಹಾರವನ್ನು ಮಾಡುವಾಗ ಜಾಗರೂಕತೆಯನ್ನು ವಹಿಸುವುದು ಆವಶ್ಯಕವಾಗಿದೆ

‘ಕಳೆದ ೧೦ ವರ್ಷಗಳಿಂದ ‘ಆನ್‌ಲೈನ್ ವ್ಯವಹಾರ ಮಾಡುವುದು ಸ್ವಲ್ಪ ಪ್ರಮಾಣದಲ್ಲಿ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಇಂತಹ ವ್ಯವಹಾರವನ್ನು ತಂತ್ರಜ್ಞಾನದ ಮಾಹಿತಿ ಇರುವವರೇ ಮಾಡುತ್ತಿದ್ದರು. ಈ ‘ಆನ್‌ಲೈನ್ ವ್ಯವಹಾರಕ್ಕಾಗಿ ಬ್ಯಾಂಕಿನಿಂದ ‘ಇಂಟರನೆಟ್ ಸೌಲಭ್ಯವನ್ನು ಮಾಡಿಕೊಳ್ಳುವುದು, ಅದರ ‘ಐ.ಡಿ. ತಯಾರಿಸುವುದು, ‘ಬೆನಿಫಿಷಿಯರಿ ಅಂದರೆ ಫಲಾನುಭವಿಯ ಮಾಹಿತಿಯನ್ನು ಹಾಕುವುದು ‘ಟ್ರಾಂಜೆಕ್ಶನ್ ಪಾಸವರ್ಡ (ವ್ಯವಹಾರ ಮಾಡಲು ಬೇಕಾದ ಸಂಕೇತ ಸಂಖ್ಯೆ) ಹಾಕುವುದು ಮತ್ತು ಕೊನೆಯಲ್ಲಿ ‘ಒಟಿಪಿಯ (ವನ್ ಟೈಮ್ ಪಾಸವರ್ಡ- ಒಂದು ಸಲ ವ್ಯವಹಾರಕ್ಕಾಗಿ ಕಳುಹಿಸುವ ಸಂಕೇತಾಂಕ) ಮಾಧ್ಯಮದಿಂದ ವ್ಯವಹಾರ ಅಧಿಕೃತಗೊಳಿಸುವುದು ಈ ಎಲ್ಲ ವಿಷಯಗಳನ್ನು ಮಾಡಬೇಕಾಗುತ್ತಿತ್ತು. ಈ ಎಲ್ಲ ಪ್ರಕ್ರಿಯೆ ಮಾಡುವವರು ತಂತ್ರಜ್ಞಾನದ ಮಾಹಿತಿಯಿರುವವರು ಆಗಿರುತ್ತಿದ್ದರು ಮತ್ತು ಅವರ ಪ್ರಮಾಣ ಬಹಳ ಕಡಿಮೆಯಿತ್ತು;

ಈಗ ‘ಯುಪಿಐ. ಈ ಎಲ್ಲ ಆಟವನ್ನೇ  ಬದಲಾಯಿಸಿದೆ. ರಸ್ತೆಯ  ಪಕ್ಕದಲ್ಲಿ ತರಕಾರಿ ಮಾರುವವರು, ಚಹಾ ಮಾರುವವರು, ವಡಾಪಾವ ಮಾರುವವರಿಂದ ಹಿಡಿದು ಸೆವೆನ್ ಸ್ಟಾರ್ ಹೊಟೆಲ್ ವರೆಗೆ ಎಲ್ಲರೂ ‘ಯು.ಪಿ.ಐ ಉಪಯೋಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ‘ಯುಪಿಐ ಉಪಯೋಗಿಸುವವರ ಸಂಖ್ಯೆಯಲ್ಲಿ ರಾಕೆಟ್ ವೇಗದಲ್ಲಿ ಹೆಚ್ಚಳವಾಯಿತು. ಇವತ್ತು ಜನರು ‘ಗೂಗಲ ಪೇ, ‘ಫೋನ ಪೇ, ‘ಪೇಟಿಎಂ ಮುಂತಾದ ಅನೇಕ ‘ಯುಪಿಐ ಆಪ್ಸ್‌ಗಳ ಮಾಧ್ಯಮದಿಂದ ಸಹಜವಾಗಿ ಹಣವನ್ನು ಹಸ್ತಾಂತರಿಸಬಹುದಾಗಿದೆ.

ಈ ತಂತ್ರಜ್ಞಾನವನ್ನು ಉಪಯೋಗಿಸಲು ಎಷ್ಟೇ ಸುಲಭವಾಗಿದ್ದರೂ, ಅದನ್ನು ಉಪಯೋಗಿಸುವಾಗ ಯಾವುದಾದರೂ ತಪ್ಪಾಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವುದು ಆವಶ್ಯಕವಾಗಿದೆ. ಗಡಿಬಿಡಿಯಿಂದ ತಪ್ಪು ‘ಯುಪಿಐ ಐಡಿ ಅಥವಾ ಸಂಖ್ಯೆಯನ್ನು ಬೆರಳಚ್ಚು ಮಾಡಿರುವುದು ಗಮನಕ್ಕೆ ಬರುತ್ತದೆ. ಹಾಗೆಯೇ ಅನೇಕ ಮೋಸದ ಪ್ರಕರಣಗಳೂ ಕಂಡು ಬಂದಿವೆ. ಆದುದರಿಂದ ‘ಯುಪಿಐ ಮೂಲಕ ತಪ್ಪು ಖಾತೆಗೆ ಹಣ ಕಳುಹಿಸಿದರೆ ಏನು ಮಾಡಬೇಕು ? ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಇಂತಹ ಸಮಯದಲ್ಲಿ ಹಣವನ್ನು ಮರಳಿ ಪಡೆಯಲು ಕೆಳಗಿನ ಪರ್ಯಾಯಗಳನ್ನು ಉಪಯೋಗಿಸಬಹುದು.

೨.‘ಯುಪಿಐ ಮೂಲಕ ತಪ್ಪು ಖಾತೆಗೆ ಹಣ ಕಳಿಸಿದ್ದರೆ ಏನು ಮಾಡಬೇಕು?

ಅ. ಒಂದು ವೇಳೆ ನೀವು ‘ಗೂಗಲ ಪೇ, ‘ಫೋನ ಪೇ, ‘ಪೇಟಿಎಂಗಳಂತಹ ‘ಯುಪಿಐ ಎಪ್‌ಗಳ ಮಾಧ್ಯಮದಿಂದ ಹಣ ಹಸ್ತಾಂತರ ಮಾಡುವಾಗ ತಪ್ಪು ಖಾತೆಗೆ ಹಣ ಕಳಿಸಿದ್ದರೆ, ಎಲ್ಲಕ್ಕಿಂತ ಮೊದಲು ಆ  ಆಪ್ ನ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಸಹಾಯವನ್ನು ಕೋರಬೇಕು. ಅದೇ ಕಾಲಾವಧಿಯಲ್ಲಿ ನಿಮ್ಮ ಬ್ಯಾಂಕಿನ ‘ಹೆಲ್ಪಲೈನನ್ನು ಸಂಪರ್ಕಿಸಿ ನೀವು ಮಾಡಿದ ವ್ಯವಹಾರದ ಮಾಹಿತಿಯನ್ನು ತಿಳಿಸಬೇಕು.

ಆ. ಎಲ್ಲಕ್ಕಿಂತ ಮೊದಲು ನಿಮ್ಮ ಸಂಚಾರವಾಣಿಯ ಮೇಲೆ ಆ ತಪ್ಪು ವ್ಯವಹಾರದಿಂದ ಹಣ ಖಾತೆಯಿಂದ ವಜಾ ಆಗಿರುವ ಬಗ್ಗೆ ಬ್ಯಾಂಕಿನಿಂದ ಬಂದಿರುವ ಸಂದೇಶವನ್ನು ಸಂಗ್ರಹಿಸಿಟ್ಟುಕೊಳ್ಳ ಬೇಕು. (ಸೇವ್) ಮಾಡಿಕೊಳ್ಳಬೇಕು. ಈ ಸಂದೇಶದಲ್ಲಿರುವ ವಿವರಗಳು ಹಣ ಮರಳಿಸಲು ಆವಶ್ಯಕವಾಗಿರುತ್ತವೆ.

ಇ. ‘ಭಾರತೀಯ ರಿಸರ್ವ ಬ್ಯಾಂಕ್ ನ ಮಾರ್ಗದರ್ಶಕ ತತ್ತ್ವಗಳಲ್ಲಿ ಹೇಳಿದಂತೆ ತಪ್ಪು ಖಾತೆಗೆ ಹಣ ಕಳುಹಿಸಿದ್ದರೆ, ‘ನೀವು  ‘bankingombudsman.Rbi.org.in ಈ ‘ಬ್ಯಾಂಕಿಂಗ್ ಲೋಕಾಯುಕ್ತ ಜಾಲತಾಣದಲ್ಲಿಯೂ ದೂರು ಸಲ್ಲಿಸಬಹುದು.

ಈ. ರಿಸರ್ವ ಬ್ಯಾಂಕಿನ ನಿಯಮಗಳಿಗನುಸಾರ ತಪ್ಪು ಖಾತೆಗೆ ಹಣ ವರ್ಗಾವಣೆಯಾಗಿರುವ ದೂರು ಸಿಕ್ಕ ಬಳಿಕ ಬ್ಯಾಂಕುಗಳು ೭ ರಿಂದ ೧೫ ದಿನಗಳ ಒಳಗೆ ದೂರಿನ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕಾಗುತ್ತದೆ.

ಉ. ಇದರೊಂದಿಗೆ ಬ್ಯಾಂಕಿನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಬಹುದು. ಅರ್ಜಿಯಲ್ಲಿ ನಿಮ್ಮ ಬ್ಯಾಂಕಿನ ವಿವರಗಳೊಂದಿಗೆ ತಪ್ಪಾಗಿ ಯಾವ ಖಾತೆಗೆ  ಹಣ ವರ್ಗಾವಣೆಯಾಗಿದೆಯೋ, ಆ ಖಾತೆಯ ಕ್ರಮಾಂಕವನ್ನೂ ಬರೆಯಬೇಕಾಗುತ್ತದೆ.

ಊ. ಒಂದು ವೇಳೆ ನಿಮಗೆ ಈ ವ್ಯವಹಾರದಲ್ಲಿ ಹಣ ತಪ್ಪಾಗಿ ವರ್ಗಾವಣೆಯಾಗಿರುವ ಫಲಾನುಭವಿ ಯಾರು ಎಂದು ತಿಳಿದಿದ್ದರೆ ಮತ್ತು ಹಣವನ್ನು ಮರಳಿಸಲು ವಿನಂತಿಸಿದರೂ ಆ ವ್ಯಕ್ತಿ ನಿಮ್ಮ ಹಣವನ್ನು ಮರಳಿಸಲು ನಿರಾಕರಿಸುತ್ತಿದ್ದರೆ, ನೀವು ‘ಎನ್.ಪಿ.ಸಿ.ಐ. (ನ್ಯಾಶನಲ್ ಪೇಮೆಂಟ ಕಾರ್ಪೊರೇಶನ ಆಫ್ ಇಂಡಿಯಾ)ದ ಜಾಲತಾಣದಲ್ಲಿಯೂ ಆ ವ್ಯಕ್ತಿಯ ವಿರುದ್ಧ ಕಾನೂನುರೀತ್ಯಾ ದೂರು ದಾಖಲಿಸಬಹುದಾಗಿದೆ.

೩.‘ಎನ್.ಪಿ.ಸಿ.ಐ ಈ ಜಾಲತಾಣದಲ್ಲಿ ದೂರನ್ನು ಹೇಗೆ ದಾಖಲಿಸಬೇಕು ?

ಅ. ಮೊದಲು ‘ಎನ್.ಪಿ.ಸಿ.ಐ.ನ www.npci.org.in ಜಾಲತಾಣಕ್ಕೆ ಭೇಟಿ ನೀಡಬೇಕು.

ಆ. ಅಲ್ಲಿ ಎಲ್ಲಕ್ಕಿಂತ ಮೇಲಿರುವ ಆಯ್ಕೆಗಳಲ್ಲಿ ಬಲಗಡೆಯ ಮೂಲೆಯಲ್ಲಿನ ‘ಗೆಟ್ ಇನ್ ಟಚ್ ಈ ಟ್ಯಾಬದ ಮೇಲೆ ಗಣಕಯಂತ್ರದ ಮೌಸ್‌ನ ‘ಕರ್ಸರ ತೆಗೆದುಕೊಂಡು ಹೋದಾಗ ಅಲ್ಲಿ ‘ಯುಪಿಐ ಕಂಪ್ಲೇಂಟ್ ಈ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ‘ಕ್ಲಿಕ್ ಮಾಡಬೇಕು.

ಇ. ತದನಂತರ ಮುಂದೆ ಕಾಣಿಸುವ ಅನೇಕ ಆಯ್ಕೆಗಳ ಪೈಕಿ ‘ಟ್ರಾನ್ಝಕ್ಶನ್ಸ ಈ ಪರ್ಯಾಯವನ್ನು ಆಯ್ಕೆ ಮಾಡಬೇಕು. ತದನಂತರ ನಿಮಗೆ ‘ಟ್ರಾನ್ಝಕ್ಶನ್ಸ ನೇಚರ (ವ್ಯವಹಾರದ ಸ್ವರೂಪ) ಇಶ್ಯೂ (ನಿರ್ಧಿಷ್ಟ ಕಾರಣ), ‘ಟ್ರಾನ್ಝಕ್ಶನ್ಸ ಐ.ಡಿ.(ವ್ಯವಹಾರದ ಕ್ರಮಾಂಕ) ಬ್ಯಾಂಕ, ಮೊತ್ತ, ‘ಟ್ರಾನ್ಝಕ್ಶನ್ಸ (ವ್ಯವಹಾರದ) ದಿನಾಂಕ,

ನಿಮ್ಮ ಇ-ಮೇಲ್ ವಿಳಾಸ (ಐ.ಡಿ.) ಮತ್ತು ಸಂಚಾರವಾಣಿ ಕ್ರಮಾಂಕ ಮುಂತಾದ ವಿವರಗಳನ್ನು ಕೊಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಬ್ಯಾಂಕಿನ ಖಾತೆಯ ವಿವರಣೆ ಅಂದರೆ ‘ಅಕೌಂಟ ಸ್ಟೇಟಮೆಂಟ ಜೋಡಿಸಿ ನಿಮ್ಮ ದೂರನ್ನು ದಾಖಲಿಸಬೇಕು.

– ಶ್ರೀ. ಅಭಿಷೇಕ ಮುರಕಟೆ, ವರ್ಲಿ, ಮುಂಬಯಿ (ಜನವರಿ ೨೦೨೩)