ಆಯುರ್ವೇದದ ದೃಷ್ಟಿಯಿಂದ ವಟವೃಕ್ಷದ (ಆಲದ ಮರದ) ಮಹತ್ವ

ವೈದ್ಯ ಸಮೀರ ಪರಾಂಜಪೆ

೧. ‘ಶರೀರದಲ್ಲಿ ಕಫ ದೋಷ ಹೆಚ್ಚಾಗಲು ಬಿಡದೆ ಶರೀರವನ್ನು ಸ್ಥಿರವಾಗಿಡುತ್ತದೆ, ಚರ್ಮದ ಆರೋಗ್ಯ ಸುಧಾರಣೆ ಆಗುವುದು, ರಕ್ತಶುದ್ಧಿ ಮಾಡುವುದು, ಎಲುಬುಗಳನ್ನು ಬಲಗೊಳಿಸುವುದು ಇತ್ಯಾದಿಗಳಲ್ಲಿ ವಟವೃಕ್ಷವು ಲಾಭದಾಯಕವಾಗಿದೆ.

೨. ಕೆಲವು ವಿಧದ ಚರ್ಮ ರೋಗಗಳಿಗೆ ವಟವೃಕ್ಷದ ಹಣ್ಣುಗಳ ಉಪಯುಕ್ತವಾಗಿವೆ.

೩. ಆಲದ ಕೊಂಬೆಗಳಲ್ಲಿ ಬರುವ ಬೇರಿನಿಂದ ‘ವಟಜಟಾದಿ ತೈಲ ತಯಾರಿಸಲಾಗುತ್ತದೆ, ಅದು ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

೪. ಅನೇಕ ಔಷಧಗಳ ತಯಾರಿ ಹಾಗೂ ಪಾದರಸದ ಶುದ್ಧಿಯಲ್ಲಿ ಆಲದ ಚಿಗುರು ಉಪಯೋಗವಾಗುತ್ತದೆ.

೫. ಆಲದ ಎಲೆಗಳನ್ನು ತುಂಡು ಮಾಡಿದಾಗ ಅಥವಾ ಅದರ ತೊಗಟೆಯಿಂದ ಒಂದು ಲೋಳೆ (ಅಂಟು) ಬರುತ್ತದೆ. ಅದು ಪುರುಷರ ಅಥವಾ ಸ್ತ್ರೀಯರ ಜನನೇಂದ್ರಿಯದ ರೋಗಗಳಿಗೆ ಉಪಯೋಗವಾಗುತ್ತದೆ.

೬. ಸ್ತ್ರೀಯರ ಬಿಳಿಸೆರಗು, ಮೊಣಕಾಲು ಸವೆಯುವುದು, ಸುಸ್ತಾಗುವುದು ಹಾಗೂ ಏಕಾಗ್ರತೆ ಇಲ್ಲದಿರುವುದು, ಇತ್ಯಾದಿ ರೋಗಗಳಿಗೆ ಆಲದ ಸಿಪ್ಪೆಯ ಕಷಾಯವನ್ನು ವಿವಿಧ ಪದ್ಧತಿಯಲ್ಲಿ ನೀಡಲಾಗುತ್ತದೆ.

೭. ಸ್ತ್ರೀ ಗರ್ಭವತಿಯಾದಾಗ ಗರ್ಭ ಚೆನ್ನಾಗಿ ಬೆಳೆದು ಅದು ಸ್ಥಿರವಾಗಬೇಕೆಂದು ಆಲದ ಕೋಮಲ ಚಿಗುರಿನ ರಸವನ್ನು ಅವಳ ಮೂಗಿಗೆ ಹಾಕಲಾಗುತ್ತದೆ.

೮. ವಸಂತ ಋತುವು ಆರಂಭವಾದಾಗ ಆಲದ ಮರ ಅಥವಾ ವಟದ ಎಲೆಗಳು ಬಿದ್ದುಹೋಗಿ ಅದಕ್ಕೆ ಹೊಸ ಚಿಗುರುಗಳು ಬರುತ್ತವೆ. ಇದು ಋತು ಬದಲಾವಣೆಯ ಮಹತ್ವದ ಲಕ್ಷಣವಾಗಿದೆ.

೯. ಆಲದ ಮರ ಮಹಾವೃಕ್ಷಗಳ ಸಾಲಿನಲ್ಲಿ ಅಂದರೆ ದೊಡ್ಡ ವೃಕ್ಷಗಳ ಸಾಲಿನಲ್ಲಿ ಬರುತ್ತದೆ ಹಾಗೂ ಅನೇಕರಿಗೆ ಶೀತಲವಾದ ನೆರಳನ್ನು ನೀಡುತ್ತದೆ. ಇದರ ಹೂವು ಮತ್ತು ಹಣ್ಣು ಅನೇಕ ಪಕ್ಷಿಗಳ ಆಹಾರವಾಗಿದೆ.

೧೦. ಆಲದ ಮರ ಕೇವಲ ಮಹಾವೃಕ್ಷ ಮಾತ್ರವಲ್ಲ, ಅದು ಮಹಾಔಷಧವಾಗಿದೆ. ಅದರ ಬೇರು, ತೊಗಟೆ, ಅಂಟು, ಚಿಗುರು, ಎಲೆಗಳು, ಹೂವು, ಹಣ್ಣು, ಕೊಂಬೆಯ ಬೇರು ಇತ್ಯಾದಿ ಕಲ್ಪತರುವಿನ ಹಾಗೆ ನಾನಾತರಹದ ಔಷಧಗಳಲ್ಲಿ ಉಪಯೋಗವಾಗುತ್ತದೆ; ಆದರೆ ಯೋಗ್ಯ ಪದ್ಧತಿಯಲ್ಲಿ ಹಾಗೂ ವೈದ್ಯರ ಸಲಹೆ ಪಡೆದು ಅದನ್ನು ಉಪಯೋಗಿಸಬೇಕು.

– ವೈದ್ಯ ಸಮೀರ ಮುಕುಂದ ಪರಾಂಜಪೆ, ಖೇರ್ಡಿ, ದಾಪೋಲಿ, ರತ್ನಾಗಿರಿ. (೨೭.೧೨.೨೦೨೨)

(ಸಂಪರ್ಕಕ್ಕಾಗಿ ವಿ-ಅಂಚೆ : [email protected])