ಸನಾತನದ ‘ಮನೆಮನೆಯಲ್ಲಿ ಕೈತೋಟ ಅಭಿಯಾನ
‘ರಾಸಾಯನಿಕ ಪದ್ಧತಿಯ ಹೊಲದ ಬೆಳೆಗಳು ಮಾನವನ ಆರೋಗ್ಯಕ್ಕೆ ಹಾನಿಕರವಾಗಿವೆ. ಆದರೆ ಈ ರಾಸಾಯನಿಕಗಳು ಹೊಲದ ಅನೇಕ ಸೂಕ್ಷ್ಮ ಹುಳ-ಹುಪ್ಪಟೆಗಳು, ನೀರು ಮತ್ತು ಹವೆಯ ಹಾನಿಯನ್ನೂ ಮಾಡುತ್ತವೆ. ಸತತವಾಗಿ ರಸಾಯನಿಕವನ್ನು ಬಳಸುವುದರಿಂದ ಮಣ್ಣಲ್ಲಿರುವ ಸೂಕ್ಷ್ಮ ಜೀವಾಣುಗಳು ಸಾಯುತ್ತವೆ ಮತ್ತು ಭೂಮಿಯ ಫಲವತ್ತತೆಯು ಕಡಿಮೆ ಯಾಗುತ್ತಾ ಹೋಗಿ ಅದು ಬಂಜರು ಭೂಮಿಯಾಗುತ್ತದೆ. ರಾಸಾಯನಿಕವನ್ನು ಸಿಂಪಡಿಸುವುದರಿಂದ ಶತ್ರು ಕೀಟಗಳ ಜೊತೆಗೆ ಮಿತ್ರ ಕೀಟಗಳೂ ಸಾಯುತ್ತವೆ ಮತ್ತು ನಿಸರ್ಗದ ಜೈವಿಕ ವಿವಿಧತೆಯ ದೊಡ್ಡ ಹಾನಿಯಾಗುತ್ತದೆ. ರಾಸಾಯನಿಕ ಗೊಬ್ಬರಗಳು ಮತ್ತು ವಿಷಕಾರಿ ಕೀಟನಾಶಕಗಳನ್ನು ನೀರಲ್ಲಿ ಬೆರಸಿ ಅದನ್ನು ಹೊಲದಲ್ಲಿ ಹರಿಯುವ ನೀರಿನ ಮುಖ್ಯ ಮೂಲಕ್ಕೆ ಬೆರೆಸುತ್ತಾರೆ. ಇದರಿಂದ ಜಲಪ್ರದೂಷಣವಾಗುತ್ತದೆ. ರಾಸಾಯನಿಕ ಗೊಬ್ಬರಗಳು ಹೊಲದಲ್ಲಿ ಹರಡಿದ ಮೇಲೆ ಅದು ಹವೆಯ ಸಂಪರ್ಕಕ್ಕೆ ಬಂದು ದೊಡ್ಡ ಪ್ರಮಾಣದಲ್ಲಿ ಅದರೊಳಗಿನ ಕಾರ್ಬನ್ ಬಿಡುಗಡೆಯಾಗಿ ಹವೆಯೊಳಗೆ ಬೆರೆಯುತ್ತದೆ ಮತ್ತು ವಾಯಮಾಲಿನ್ಯವಾಗುತ್ತದೆ. ಈ ರೀತಿಯಾಗಿ ರಾಸಾಯನಿಕ ಕೃಷಿಯು ಎಲ್ಲ ರೀತಿಯಿಂದಲೂ ಹಾನಿಕರವೇ ಆಗಿದೆ.
– ಸೌ. ರಾಘವೀ ಮಯೂರೇಶ ಕೊನೆಕರ, ಢವಳೀ, ಫೊಂಡಾ, ಗೋವಾ. (೯.೨.೨೦೨೩)
ನಿಮಗೆ ಈ ಲೇಖನಮಾಲೆ ಹೇಗೆನಿಸಿತು, ಇದನ್ನು ಮುಂದಿನ ವಿ-ಅಂಚೆ ವಿಳಾಸದಲ್ಲಿ ನಮಗೆ ತಿಳಿಸಿ ! –
ಮಾನಸಿಕ ಆರೋಗ್ಯ ರಕ್ಷಣೆಗೆ ತೋಟಗಾರಿಕೆ !‘ಅಮೇರಿಕನ್ ಅರ್ಬುದರೋಗ ಸೊಸೈಟಿ’ ಮತ್ತು ‘ಬಾರ್ಸಿಲೋನಾ ಇನ್ಸ್ಟೂಟ್ ಫಾರ್ ಗ್ಲೋಬಲ್ ಹೆಲ್ತ್’, ಈ ಸಂಸ್ಥೆಯ ಒಂದು ಸಂಶೋಧನೆಯಿಂದ ‘ತೋಟಗಾರಿಕೆ ಮಾಡುವವರ ಒತ್ತಡ ಮತ್ತು ಚಿಂತೆಯ ಪ್ರಮಾಣವು ಕಡಿಮೆಯಾಗಿರುವುದು ಸ್ಪಷ್ಟವಾಯಿತು’, ಎಂಬ ನಿಷ್ಕರ್ಷವನ್ನು ಮಾಡಲಾಯಿತು. ‘ಮನೆಯಲ್ಲಿಯೇ ತರಕಾರಿ ಸೊಪ್ಪುಗಳನ್ನು ಬೆಳೆಸುವುದರಿಂದ ಹೆಚ್ಚು ನಾರು ಇರುವ ಪದಾರ್ಥ ತಿನ್ನಲು ಸಿಗುತ್ತದೆ ಮತ್ತು ದೇಹದ ಶ್ರಮವೂ ಹೆಚ್ಚಾಗುತ್ತದೆ ಇದರ ಪರಿಣಾಮವಾಗಿ ಅರ್ಬುದ ರೋಗ ಮತ್ತು ದೀರ್ಘ ಕಾಲೀನ ಅನಾರೋಗ್ಯದ ಅಪಾಯವು ಕಡಿಮೆಯಾಗಿ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ’, ಎಂದು ಈ ಸಂಶೋಧಕರು ಹೇಳುತ್ತಾರೆ. ಜನವರಿ ೨೦೨೩ ರ ‘ಲ್ಯಾನ್ಸೆಟ್ ಪ್ಲ್ಯಾನೆಟರಿ ಹೆಲ್ತ್ ಜರ್ನಲ್’ ಎಂಬ ಸಂಚಿಕೆಯಲ್ಲಿ ಈ ಸಂಶೋಧನೆಯು ಪ್ರಕಟವಾಗಿದೆ. ಸದ್ಯದ ಒತ್ತಡದ ದಿನಚರಿಯಲ್ಲಿ ಸ್ವಲ್ಪ ಸಮಯವಾದರೂ ಗಿಡಗಳೊಂದಿಗೆ ಕಳೆದು ತನ್ನ ಒತ್ತಡ ನಿವಾರಣೆಗೆ ಕೈದೋಟದ ಲಾಭವನ್ನು ಮಾಡಿಕೊಳ್ಳಬೇಕು.’ – ಸೌ. ರಾಘವಿ ಕೊನೆಕರ (೨೨.೨.೨೦೨೩) |