ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ

ಶ್ರೀ. ವಿಠೋಬಾ ಮ್ಹಾಳಸೆಕರ

ಸನಾತನ ಸಾಧಕ ಶ್ರೀ. ವಿಠೋಭಾ ಮ್ಹಾಳಸೆಕರ ಅವರ ೪೦ ವರ್ಷ ಗಳ ಸಮಾಜ, ದೇಶ ಮತ್ತು ಧರ್ಮ ಸೇವೆಯನ್ನು ಗುರುತಿಸಿ ಶ್ರೀ ಪರಮಾತ್ಮ ಪೀಠಾಧೀಶ್ವರ ಸದ್ಗುರು ಭಗವಾನ್ ಬ್ರಹ್ಮರ್ಷಿ ಶ್ರೀ ಶ್ರೀ ಶ್ರೀ ಡಾ. ಪರಮಾತ್ಮಜಿ ಮಹಾರಾಜರು ‘ಆತ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿದರು. ಹಳಿಯಾಳದಲ್ಲಿ ದಿನಾಂಕ. ೧೪.೨.೨೦೨೩ ರಂದು ನಡೆದ ‘ಹಳಿಯಾಳ ಕಲ್ಯಾಣ ಹೋಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಶ್ರೀ. ವಿಠೋಬಾ ಮ್ಹಾಳಸೆಕರ್ ಅವರು ಈ ಗೌರವವನ್ನು ಸನಾತನ ಸಂಸ್ಥೆಯ ಸಂಸ್ಥಾಪಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಕೃಪೆಯ ಪ್ರಸಾದ ಎಂದು ಸ್ವೀಕರಿಸಿ ಗುರುಚರಣಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಶ್ರೀ ಪರಮಾತ್ಮ ಪೀಠಾಧೀಶ್ವರರ ಚರಣಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.