ಕತ್ತಲಿನಲ್ಲಿ ಸಂಚಾರವಾಣಿಯ ಬಳಸುವವರೇ, ಎಚ್ಚರ !
ಕಡಿಮೆ ಬೆಳಕಿನಲ್ಲಿ ಸಂಚಾರವಾಣಿಯಲ್ಲಿ ಸಂಭಾಷಣೆ ನಡೆಸಿದರೆ ದೃಷ್ಟಿಯ ಕೋನ ಹೆಚ್ಚಾಗಿರುತ್ತದೆ. ಮಂಚದ ಮೇಲೆ ಮಲಗಿದ್ದಲ್ಲೇ ಕತ್ತಲಿನಲ್ಲಿ ಸಂಚಾರವಾಣಿಯಲ್ಲಿ ವಾಟ್ಸ್‌ಆಪ್ ಅಪ್ಲಿಕೇಶನ್ ಮತ್ತು ಫೇಸ್ಬುಕ್ ಅಪಡೇಟಗಳನ್ನು ನೋಡುವುದು ಇದು ದೃಷ್ಟಿಯನ್ನು ದುರ್ಬಲವಾಗಿಸಲು ಆಮಂತ್ರಣ ನೀಡುವ ಹಾಗೆ ಆಗಬಹುದು. ಕತ್ತಲಿನಲ್ಲಿ ಸಂಚಾರವಾಣಿಯಲ್ಲಿ ಸಕ್ರಿಯವಾಗಿ ಇರುವುದರಿಂದ ಕಣ್ಣು ಗುಡ್ಡೆ ಸಂಕುಚಿತವಾಗುತ್ತದೆ. ಸಂಕುಚಿತವಾಗಿರುವ ಕಣ್ಣು ಗುಡ್ಡೆಯನ್ನು ಅಕಸ್ಮಾತ್ತಾಗಿ ತೆರೆಯುವಾಗ ಅದು ಮೊದಲಿನಂತೆ ಆಗುವ ತನಕ ಕಣ್ಣಿಗೆ ಕತ್ತಲೆ ಬರುತ್ತದೆ. ಸ್ವಲ್ಪ ಸಮಯದ ನಂತರ ಅದು ಮೊದಲಿನಂತೆ ಆಗುತ್ತದೆ. ಆದ್ದರಿಂದ ಕತ್ತಲಿನಲ್ಲಿ ಸಂಚಾರವಾಣಿ ನೋಡಬಾರದೆಂದು ಜೆ.ಜೆ. ಆಸ್ಪತ್ರೆಯ ನೇತ್ರ ಸರ್ಜನ್ ಮತ್ತು ಸಂಸ್ಥಾಪಕರು ಡಾ. ತಾತ್ಯಾರಾವ್ ಲಹಾನೆ ಇವರು ಹೇಳಿದ್ದಾರೆ.