ಪರಮಾಣು ದಾಳಿಗಾಗಿ ಸಿದ್ಧತೆ ನಡೆಸಿ ! – ಕಿಮ್ ಜೊಂಗ್‌ನಿಂದ ಸೈನ್ಯ ಪಡೆಗೆ ಆದೇಶ

ಸೆಉಲ್ – ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಒಟ್ಟಿಗೆ ಯುದ್ಧಾಭ್ಯಾಸ ಮಾಡುತ್ತಿವೆ. ಈ ಹಿನ್ನಲೆಯಲ್ಲಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ತನ್ನ ಸೈನ್ಯಪಡೆಗೆ ಪರಮಾಣು ದಾಳಿಯ ಸಿದ್ಧತೆಯನ್ನು ಮಾಡಲು ಆದೇಶಿಸಿದ್ದಾರೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಿನ ಯುದ್ಧದ ಅಭ್ಯಾಸಕ್ಕೆ ಉತ್ತರವಾಗಿ ಉತ್ತರ ಕೊರಿಯಾವು ಸೇನಾ ಅಭ್ಯಾಸ ನಡೆಸಿದೆ. ಅದೇ ಸಮಯದಲ್ಲಿ ನಕಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಉತ್ತರ ಕೊರಿಯಾ ಹಲವು ಕ್ಷಿಪಣಿಗಳನ್ನು ಒಂದರಹಿಂದೆ ಒಂದು ಪರೀಕ್ಷಿಸಿದೆ.

ಸೇನೆಯಲ್ಲಿ ೮ ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ! – ಉತ್ತರ ಕೊರಿಯಾ

ಅಮೆರಿಕದ ವಿರುದ್ಧದ ಯುದ್ಧಕ್ಕಾಗಿ ಉತ್ತರ ಕೊರಿಯದಲ್ಲಿನ ೮ ಲಕ್ಷ ಜನರಿಗೆ ಸೇನೆಯಲ್ಲಿ ಸೇರಬೇಕಾಗಿದೆ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸೇವಕರು ಸೇರಿದ್ದಾರೆ. ಉತ್ತರ ಕೊರಿಯಾದ ‘ರೊಡೊಂಗ್ ಸಿನ್ಮುನ್’ ಪತ್ರಿಕೆಯಲ್ಲಿ ದಾವೆ ಮಾಡಿದೆ.