ಸನಾತನದ ೧೦೨ ನೇ ಸಂತರಾದ ಪೂ. ಶಿವಾಜಿ ವಟಕರ ಇವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಸಂಗದ ವಿಷಯದಲ್ಲಿ ಕಲಿಯಲು ಸಿಕ್ಕಿದ ಅಂಶಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಡಾ. ಆಠವಲೆ ಪೂ. ಶಿವಾಜಿ ವಟಕರ ಇವರ ಈ ಲೇಖನದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಂಗದ ಅದ್ವಿತೀಯತೆ ಕಲಿಯಲು ಸಿಕ್ಕಿದೆ. ಎಲ್ಲಾ ಸಾಧಕರಿಗೆ ಈ ಭಕ್ತಿಸತ್ಸಂಗದ ಲಾಭ ಪಡೆಯುವ ಪ್ರೇರಣೆ ಸಿಗಲಿ, ಎಂದು ನಾನು ನನ್ನ ಗುರುಗಳಾದ ಪರಮ ಪೂಜ್ಯ ಭಕ್ತರಾಜ ಮಹಾರಾಜ ಇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೭.೨.೨೦೨೩)

ಪೂ. ಶಿವಾಜಿ ವಟಕರ

೧.೨.೨೦೨೩ ರಂದು ಸನಾತನದ ದೇವದ (ಪನವೇಲ) ಇಲ್ಲಿಯ ಆಶ್ರಮದಲ್ಲಿ ನನಗೆ ಗುರುಕೃಪೆಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಸತ್ಸಂಗ ಲಭಿಸಿತು. ಆ ಸತ್ಸಂಗದ ಸಮಯದಲ್ಲಿ ನನಗೆ ಅವರು ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಂಗದ ವಿಷಯವನ್ನು ತಿಳಿದುಕೊಳ್ಳುವ ಇಚ್ಛೆಯಾಯಿತು; ಆದ್ದರಿಂದ ನಾನು ಅವರಲ್ಲಿ ಕೇಳಿದೆ, ೨೦೧೬ ರಿಂದ ಪ್ರತಿಯೊಂದು ಗುರುವಾರ ಭಕ್ತಿ ಸತ್ಸಂಗ ನಡೆಯುತ್ತದೆ. ಅದರಲ್ಲಿ ನೀವು ಸತತ ೨ ಗಂಟೆಕಾಲ ಮಾರ್ಗದರ್ಶನ ಮಾಡುತ್ತೀರಿ, ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಕೃಪೆಯಿಂದ ನಡೆಯುತ್ತಿರುವ ಈ ಭಕ್ತಿ ಸತ್ಸಂಗವನ್ನು ನೀವು ಯಾವ ರೀತಿ ತೆಗೆದುಕೊಳ್ಳುತ್ತೀರಿ ? ಇದನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆ ನನಗಿದೆ. ಅದರ ಬಗ್ಗೆ ನೀವು ಹೇಳಬಹುದೇನು? ಆ ಸಮಯದಲ್ಲಿ ಅವರು ಮುಂದಿನ ಮಾರ್ಗ ದರ್ಶನ ಮಾಡಿದರು. ಆ ಮಾರ್ಗದರ್ಶನದ ಅಂಶಗಳು, ಆ ಅಂಶಗಳ ಬಗ್ಗೆ ಗುರುಕೃಪೆಯಿಂದ ನನ್ನಲ್ಲಾದ ಚಿಂತನೆ ಮತ್ತು ನನಗೆ ಕಲಿಯಲು ಸಿಕ್ಕಿರುವ ಮತ್ತು ತಿಳಿದಿರುವ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿರುವ ಅಂಶಗಳು

ಭಕ್ತಿ ಸತ್ಸಂಗ ಇದು ನನಗಾಗಿ ಇದೆ, ಎಂದು ನನಗೆ ಅನಿಸುತ್ತದೆ. ಆ ದೃಷ್ಟಿಯಿಂದ ನಾನು ಸತ್ಸಂಗ ತೆಗೆದುಕೊಳ್ಳುತ್ತೇನೆ.

೧ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಉಚ್ಚ ಆಧ್ಯಾತ್ಮಿಕ ಮಟ್ಟದಲ್ಲಿದ್ದರೂ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಗೆ ಈ ಸತ್ಸಂಗ ತಮಗಾಗಿ ಇದೆ ಎಂದು ಅನಿಸುತ್ತದೆ, ಎಂದಾದರೆ ಸಾಮಾನ್ಯ ಸಾಧಕರಿಗೂ ಈ ಸತ್ಸಂಗ ಬಹಳ ಮಹತ್ವಪೂರ್ಣವೆನಿಸಿ ಅವರಿಗೂ ಆ ಅಂಶಗಳನ್ನು ಕೃತಿಯಲ್ಲಿ ತರಬೇಕು, ಎಂದು ಅನಿಸುವುದು : ಪರಾತ್ಪರ ಗುರು ಡಾಕ್ಟರರ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ) ಕೃಪೆಯಿಂದ ನಡೆಯುತ್ತಿರುವ ಈ ಭಕ್ತಿಸತ್ಸಂಗ ನನ್ನಂತಹ ಸರ್ವಸಾಮಾನ್ಯ ಸಾಧಕರಿಗಾಗಿದೆ. ಆದರೂ ಸತ್ಸಂಗ ತೆಗೆದು ಕೊಳ್ಳುವ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಗೆ ಈ ಸತ್ಸಂಗ ತನಗಾಗಿಯೇ ಇದೆ ಎಂದು ಅನಿಸುತ್ತದೆ. ಇಂತಹ ಸಮಯದಲ್ಲಿ ನನ್ನಂತಹ ಸಾಧಕನಿಗೆ ಅದರ ಮಹತ್ವ ಎಷ್ಟು ಅನಿಸಬೇಕು ? ಇದನ್ನು ಅರ್ಥ ಮಾಡಿಕೊಂಡು ಸತ್ಸಂಗವನ್ನು ತಳಮಳದಿಂದ ಕೇಳಬೇಕು ಮತ್ತು ಅದರಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಕೃತಿಯಲ್ಲಿ ತರಬೇಕು, ಎಂದು ನನಗೆ ಅರಿವಾಯಿತು.

೨. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿರುವ ಅಂಶ

ಸತ್ಸಂಗದಲ್ಲಿನ ಪ್ರಸಂಗ ಸತ್ಯಯುಗದ್ದಾಗಿದ್ದರೆ, ಆಗ ನಾನು ಸೂಕ್ಷ್ಮದಿಂದ ಸತ್ಯಯುಗಕ್ಕೆ ಹೋಗಿ ಪ್ರಸಂಗದ ಸ್ಥಳದ ಬಗ್ಗೆ ಸತ್ಸಂಗದಲ್ಲಿ ವರ್ಣಿಸಲಾಗುವ ಆ ಸ್ಥಳವನ್ನು ಅನುಭವಿಸುತ್ತೇನೆ.

೨ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಪ್ರಕಾರ ಸತ್ಸಂಗದೊಂದಿಗೆ ಸಂಪೂರ್ಣ ಏಕರೂಪವಾದರೆ ಸಾಧಕರಿಗೆ ಸತ್ಸಂಗದಲ್ಲಿ ಹೇಳಿರುವ ಕಥೆಯಿಂದ ಲಾಭ ಸಿಗುತ್ತದೆ : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಸತ್ಸಂಗದ ಜೊತೆ ಏಕರೂಪವಾಗಿರುತ್ತಾರೆ; ಆದರೆ  ಸತ್ಸಂಗ ಕೇಳುವ ಸಾಧಕರನ್ನು ಸಹ ಈ ಸತ್ಸಂಗದಲ್ಲಿ ವರ್ಣಿಸಿದ ಯುಗಕ್ಕೆ ಮತ್ತು ಆ ಸ್ಥಳಕ್ಕೆ ಸೂಕ್ಷ್ಮದಿಂದ ಕರೆದೊಯ್ಯುತ್ತಾರೆ, ಅರ್ಥಾತ್ ಸಾಧಕರು ಮನಸ್ಸಿನಿಂದ ಮತ್ತು ಆತ್ಮೀಯತೆಯಿಂದ ಭಕ್ತಿ ಸತ್ಸಂಗದಲ್ಲಿ ಸಹಭಾಗಿಯಾಗಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಹಾಗೆ ಭಾವ ಇಟ್ಟರೆ, ಆಗ ಅವರಿಗೆ ಅದರ ಲಾಭವಾಗಬಲ್ಲದು ಎಂದು ನನಗೆ ಕಲಿಯಲು ಸಿಕ್ಕಿತು.

೩. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶ

ಸತ್ಸಂಗದಲ್ಲಿ ಹೇಳುತ್ತಿರುವ ಪ್ರಸಂಗ ಪ್ರತ್ಯಕ್ಷವಾಗಿ ಘಟಿಸುತ್ತಿದೆ, ಎಂದು ನನಗೆ ಅನಿಸುತ್ತದೆ. ನಾನು ಆ ಪ್ರಸಂಗವನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತೇನೆ. ನಾನು ಸತ್ಸಂಗದಲ್ಲಿ ಹೇಳಲಾಗುವ ಪ್ರಸಂಗದಲ್ಲಿನ ಪಾತ್ರಗಳ ಜೊತೆಗೆ ಏಕರೂಪವಾಗುತ್ತೇನೆ. ಉದಾ. ಗುರು ಚರಿತ್ರೆಯಲ್ಲಿನ ಪ್ರಸಂಗದಲ್ಲಿ ಆ ಭಕ್ತನು ಸೇವೆ ಹೇಗೆ ಮಾಡಿದನು ? ಭಾವ ಹೇಗೆ ಇಟ್ಟಿದ್ದನು ? ಇದನ್ನು ನಾನು ಸ್ವತಃ ಅನುಭವಿಸುತ್ತೇನೆ.

೩ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಪ್ರಕಾರ ಸಾಧಕರು ಸಹ ಭಕ್ತಿ ಸತ್ಸಂಗದ ಸಮಯದಲ್ಲಿ ಮತ್ತು ಇತರ ಸಮಯದಲ್ಲಿ ಆಯಾ ಪಾತ್ರಗಳ ಜೊತೆಗೆ ಏಕರೂಪವಾದರೆ ಸಾಧಕರಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಭಕ್ತಿ ಸತ್ಸಂಗದಲ್ಲಿ ವರ್ಣಿಸಲಾಗುವ ಪ್ರಸಂಗದಲ್ಲಿನ ಪಾತ್ರಗಳ ಜೊತೆಗೆ ಏಕರೂಪವಾಗುತ್ತಾರೆ. ಅವರು ಸತ್ಸಂಗದಲ್ಲಿನ ಆ ಪ್ರಸಂಗವನ್ನು ಎಷ್ಟು ಎಷ್ಟು ಸುಂದರವಾಗಿ ವರ್ಣಿಸುತ್ತಾರೆ ಎಂದರೆ, ಆ ಪ್ರಸಂಗವನ್ನು ಪ್ರತ್ಯಕ್ಷ ಅನುಭವಿಸಬಹುದಾಗಿದೆ. ಸಾಧಕರು ಕೂಡ ಭಕ್ತಿ ಸತ್ಸಂಗದ ಸಮಯದಲ್ಲಿ ಮತ್ತು ಸೇವೆ ಮಾಡುವಾಗ ಆಯಾ ಪಾತ್ರಗಳ ಜೊತೆ ಏಕರೂಪವಾದರೆ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಅದರಿಂದ ಲಾಭವಾಗಿ ಖಂಡಿತವಾಗಿ ಅವರ ಆಧ್ಯಾತ್ಮಿಕ ಪ್ರಗತಿ ಆಗಬಹುದು, ಎಂಬುದು ನನ್ನ ಗಮನಕ್ಕೆ ಬಂದಿತು.

೪. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶ

ರಾಮನಾಥಿ ಆಶ್ರಮದಲ್ಲಿ ನಾನು ನಿತ್ಯ ಸೇವೆ ಮಾಡುವ ಕೋಣೆಯಲ್ಲಿ ಕುಳಿತು ಭಕ್ತಿ ಸತ್ಸಂಗ ತೆಗೆದುಕೊಳ್ಳುತ್ತೇನೆ. ಆ ಸ್ಥಳದಲ್ಲಿ ಅನಿಷ್ಟ ಶಕ್ತಿಗಳಿಂದ ದೊಡ್ಡ ಆಕ್ರಮಣಗಳಾಗುತ್ತವೆ. ಪರಮಪೂಜ್ಯರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಪ್ರಾಣಶಕ್ತಿ ಕಡಿಮೆಯಾಗಿದ್ದು ಅವರು ಸಾಮಾನ್ಯವಾಗಿ ಕೋಣೆಯಿಂದ ಹೊರಗೆ ಹೋಗುವುದಿಲ್ಲ. ಆದರೂ ಅವರು ಒಂದು ದಿನ ನಾನು ಸೇವೆ ಮಾಡುವ ಕೋಣೆಗೆ ಬಂದು ಕೋಣೆಯ ನಿರೀಕ್ಷಣೆ ಮಾಡಿದರು. ಅವರು ಕೋಣೆಗೆ ಬಂದ ಕಾರಣ ಕೋಣೆಯಲ್ಲಿನ ಚೈತನ್ಯ ಹೆಚ್ಚಾಗಿ ಭಕ್ತಿ ಸತ್ಸಂಗಕ್ಕೆ ಅದರ ಲಾಭ ಸಿಕ್ಕಿತು.

೪ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಭಕ್ತಿ ಸತ್ಸಂಗಕ್ಕೆ ಸೂಕ್ಷ್ಮದಲ್ಲಿ ಕೆಟ್ಟ ಶಕ್ತಿಗಳಿಂದ ತೀವ್ರ ವಿರೋಧ ಆಗುತ್ತಿರುವುದರಿಂದ ಸಾಧಕರು ಆಧ್ಯಾತ್ಮಿಕ ಮಟ್ಟದ ಉಪಾಯ, ಪ್ರಾರ್ಥನೆ ಮತ್ತು ಕೃತಜ್ಞತಾ ಭಾವ ಹೆಚ್ಚಿಸುವುದು ಅವಶ್ಯಕ : ಭಕ್ತಿ ಸತ್ಸಂಗಕ್ಕೆ ಸೂಕ್ಷ್ಮದಲ್ಲಿ ಕೆಟ್ಟ ಶಕ್ತಿಗಳಿಂದ ತೀವ್ರ ವಿರೋಧವಾಗುತ್ತಿರುವುದರಿಂದ ಆ ಶಕ್ತಿಗಳು ಸಾಧಕರ ಮೇಲೆ ಆಕ್ರಮಣ ಮಾಡುತ್ತದೆ. ಆದ್ದರಿಂದ ಸಾಧಕರಿಗೆ ತೊಂದರೆಯಾಗಿ ಭಕ್ತಿ ಸತ್ಸಂಗದಲ್ಲಿ ಮನಸ್ಸು ಏಕಾಗ್ರವಾಗಲು ಅಡಚಣೆ ಬರಬಹುದು, ಅದಕ್ಕಾಗಿ ಸಾಧಕರು ಆಧ್ಯಾತ್ಮಿಕ ಉಪಾಯ, ಪ್ರಾರ್ಥನೆ ಮತ್ತು ಕೃತಜ್ಞತಾ ಭಾವ ಇವುಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ, ಎಂದು ನನಗೆ ಅನಿಸುತ್ತದೆ.

೫. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶ

ಸತ್ಸಂಗ ಗುರುವಾರ ಇರುತ್ತದೆ. ಅದು ಗುರುಗಳ ವಾರವಾಗಿದೆ, ಆ ದಿನದಂದು ಗುರುತತ್ತ್ವ ಕಾರ್ಯನಿರತವಾಗಿರುತ್ತದೆ.

೫ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಭಕ್ತಿ ಸತ್ಸಂಗದ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರಲ್ಲಿ ಇರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಕುರಿತಾದ ಉಚ್ಚಸ್ತರದ ಭಾವ ಪ್ರಕಟವಾಗುತ್ತದೆ. ನಾವೆಲ್ಲ ಸಾಧಕರು ಶ್ರೀ ಗುರುಗಳಲ್ಲಿ ಅವರಲ್ಲಿದ್ದಂತದ್ದೇ ಭಾವ ಇಡಬೇಕು, ಆಗ ನಮಗೂ ಭಾವದ ಸ್ಥಿತಿಯಲ್ಲಿರಲು ಸಾಧ್ಯವಾಗುತ್ತದೆ, ಎಂದು ನನಗೆ ಅನಿಸುತ್ತದೆ.

೬. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶ

ಸತ್ಸಂಗದಲ್ಲಿ ಈಶ್ವರನ ಎಂದರೆ ಗುರುತತ್ವದ ಅಧಿಷ್ಠಾನವಿರುತ್ತದೆ. ಆದ್ದರಿಂದ ಈ ಸತ್ಸಂಗವನ್ನು ಯಾರು ತೆಗೆದು ಕೊಂಡರೂ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ.

೬ ಅ. (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಅಹಂಶೂನ್ಯರಾಗಿರುವ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಭಕ್ತಿ ಸತ್ಸಂಗದ ಕರ್ತೃತ್ವವನ್ನು ತಮ್ಮಲ್ಲಿ ತೆಗೆದುಕೊಳ್ಳದಿರುವುದು ಮತ್ತು ಭಕ್ತಿ ಸತ್ಸಂಗಕ್ಕಾಗಿ ಪರಾತ್ಪರ ಗುರು ಡಾಕ್ಟರ ಮತ್ತು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಸಂಕಲ್ಪ ಕಾರ್ಯ ನಿರತ ವಾಗಿರುವುದರಿಂದ ಭಕ್ತಿ ಸತ್ಸಂಗ ಪ್ರಭಾವಿಯಾಗುತ್ತಿರುವುದು :

ಶ್ರೀಸತ್‌ಶಕ್ತಿ (ಸೌ.) ಇವರ ಮಾತಿನಿಂದ ಅವರು ಭಕ್ತಿ ಸತ್ಸಂಗದ ಕರ್ತೃತ್ವ ತೆಗೆದುಕೊಳ್ಳುವುದಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿತು. ಸ್ವತಃ ಕರ್ತೃತ್ವ ತೆಗೆದುಕೊಳ್ಳದಿರುವುದು ಮತ್ತು ಅಹಂಶೂನ್ಯವಾಗಿರುವುದರಿಂದ ಭಕ್ತಿ ಸತ್ಸಂಗ ದೈವಿ ಮತ್ತು ಪ್ರಭಾವಿಯಾಗುತ್ತದೆ. ಪ್ರಸಂಗವಶಾತ್ ಕೆಲವೊಮ್ಮೆ ಇತರ ಸಾಧಕಿಯರು (ಕು. ವೈಷ್ಣವಿ ವೆಸ್ಣೆಕರ (ಆಧ್ಯಾತ್ಮಿಕ ಮಟ್ಟ ಶೇಕಡಾ ೬೫) ಮತ್ತು ಕು. ಯೋಗಿತಾ ಪಾಲನ) ಭಕ್ತಿ ಸತ್ಸಂಗ ತೆಗೆದುಕೊಳ್ಳುತ್ತಾರೆ. ಇತರ ಸಾಧಕಿಯರು ತೆಗೆದುಕೊಂಡಿರುವ ಸತ್ಸಂಗ ಕೂಡ ಪ್ರಭಾವಿ ಆಗಿರುತ್ತದೆ; ಏಕೆಂದರೆ ಅವರ ಭಕ್ತಿ ಸತ್ಸಂಗದಲ್ಲಿ ಈಶ್ವರನ ಅಧಿಷ್ಠಾನ ಇರುತ್ತದೆ, ಪರಾತ್ಪರ ಗುರು ಡಾಕ್ಟರ ಮತ್ತು ಶ್ರೀ ಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಸಂಕಲ್ಪ ಕಾರ್ಯನಿರತವಾಗಿರುತ್ತದೆ, ಎಂದು ನನಗೆ ಸತ್ಸಂಗ ಕೇಳುವಾಗ ಗಮನಕ್ಕೆ ಬರುತ್ತದೆ.

೭. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶ

ಭಕ್ತಿ ಸತ್ಸಂಗ ಇದು ದೈವಿ ಸತ್ಸಂಗವಾಗಿದೆ. ಅದು ದೈವಿ ಆಯೋಜನೆಗನುಸಾರ ನಡೆಯುತ್ತದೆ.

೭ ಅ.(ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಸಾಧಕರಲ್ಲಿ ಭಾವ ಹೆಚ್ಚಾಗಬೇಕು ಮತ್ತು ಅವರ ಸಾಧನೆ ಮಾಡಿ ಆನಂದ ಪಡೆಯಬೇಕು ಎಂಬುದಕ್ಕಾಗಿ ಪರಾತ್ಪರ ಗುರು ಡಾ.ಆಠವಲೆ ಇವರು ಈ ದೈವಿ ಭಕ್ತಿ ಸತ್ಸಂಗ ಆರಂಭಿಸಿರುವುದರಿಂದ ಸಾಧಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಅನಿಸುವುದು : ೩.೨.೨೦೨೩ ರಂದು ದೈನಿಕ ಸನಾತನ ಪ್ರಭಾತದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಇವರು ತಮ್ಮ ಮಾರ್ಗದರ್ಶನದಲ್ಲಿ ಹೇಳಿದ್ದಾರೆ, ಈಗ ಆಪತ್ಕಾಲವು ಸೂಕ್ಷ್ಮ ದಿಂದ ಬರುತ್ತಿರುವುದರಿಂದ ಸಾಧಕರ ಮನಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತವೆ. ಬಹಳಷ್ಟು ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ. ಆದ್ದರಿಂದ ಆಧ್ಯಾತ್ಮಿಕ ಮಟ್ಟದ ಉಪಾಯ ಮಾಡುವಾಗ ನಾವು ದೇವರು ಮತ್ತು ಗುರುಗಳ ಕುರಿತಾದ ಭಾವವನ್ನು ಹೆಚ್ಚಿಸಬೇಕು.

ಪರಾತ್ಪರ  ಗುರು ಡಾ. ಆಠವಲೆಯವರು ಹೇಳಿರುವ ತೊಂದರೆಗಳನ್ನು ನಾನು ಸ್ವತಃ ಅನುಭವಿಸಿದ್ದೇನೆ. ಅವರು ತ್ರಿಕಾಲ ಜ್ಞಾನಿ ಮತ್ತು ದಾರ್ಶನಿಕರಾಗಿದ್ದಾರೆ. ಅವರಿಗೆ ಮುಂದೆ ಬರುವ ಆಪತ್ಕಾಲ ತಿಳಿದಿರುವುದರಿಂದ ಅವರು ಸಾಧಕರಿಗೆ ತೊಂದರೆ ಆಗಬಾರದು ಮತ್ತು ಅವರು ಸಾಧನೆ ಮಾಡಿ ಆನಂದ ಪಡೆಯಬೇಕು ಮತ್ತು ಸಾಧಕರಲ್ಲಿ ಭಕ್ತಿಭಾವ ಹೆಚ್ಚಾಗಬೇಕು, ಎಂಬುದಕ್ಕಾಗಿ ಈ ಭಕ್ತಿ ಸತ್ಸಂಗವನ್ನು ಆರಂಭಿಸಿದ್ದಾರೆ, ಆದಕಾರಣ ಸಾಧಕರು ದೈವಿ ಆಯೋಜನೆಯ ಪ್ರಕಾರ ಆರಂಭವಾಗಿರುವ ಈ ದೈವಿ ಸತ್ಸಂಗದ ಲಾಭ ಪಡೆದು ಕೊಳ್ಳಬೇಕು, ಎಂದು ನನಗೆ ಕಲಿಯಲು ಸಿಕ್ಕಿತು.

೮. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದ ಅಂಶಗಳು

ಭಕ್ತಿ ಸತ್ಸಂಗದ ಸಮಯದಲ್ಲಿ ವಾತಾವರಣವು ಚೈತನ್ಯಮಯ ವಾಗಿ ಪಕ್ಷಿ ಮತ್ತು ಚಿಟ್ಟೆಗಳು ಬರುತ್ತವೆ.

೮ ಅ (ಪೂ.) ಶಿವಾಜಿ ವಟಕರ ಇವರಲ್ಲಾದ ಚಿಂತನೆ – ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಲ್ಲಿನ ಭಕ್ತಿ ಭಾವದಿಂದ ಭಕ್ತಿ ಸತ್ಸಂಗದ ಸಮಯದಲ್ಲಿ ವಾತಾವರಣವು ಚೈತನ್ಯಮಯವಾಗಿ ಸಂಪೂರ್ಣ ಸೃಷ್ಟಿ ಆನಂದದಿಂದ ಪುಲಕಿತವಾಗಿರುತ್ತದೆ. ಸತ್ಸಂಗದ ಲಾಭ ಪಡೆಯಲು ಪಕ್ಷಿಗಳು ಮತ್ತು ಚಿಟ್ಟೆಗಳು ಕೂಡ ಸತ್ಸಂಗದ ಸ್ಥಳಕ್ಕೆ ಬರುತ್ತವೆ.

ಪ್ರತಿ ಗುರುವಾರ ೨ ಗಂಟೆ ಕಾಲ ಭಕ್ತಿ ಸತ್ಸಂಗದ ಮಾಧ್ಯಮದಿಂದ ಸಾವಿರಾರು ಸಾಧಕರನ್ನು ಭಾವ ವಿಶ್ವಕ್ಕೆ ಕರೆದುಕೊಂಡು ಹೋಗುವ ಮತ್ತು ಸಾಧಕರ ಪ್ರಗತಿ ಮಾಡಿಸಿಕೊಳ್ಳುವ ಮಹಾನ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಮತು

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಚರಣಗಳಲ್ಲಿ ನಾನು ಶರಣಾಗತ ಭಾವದಿಂದ ಕೋಟಿ ಕೋಟಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

– (ಪೂ.) ಶಿವಾಜಿ ವಟಕರ (ವಯಸ್ಸು ೭೬ ವರ್ಷ), ಸನಾತನ ಆಶ್ರಮ, ದೇವದ, ಪನವೆಲ್ (೪.೨.೨೦೨೩)

ಭಕ್ತಿಸತ್ಸಂಗದ ಬಗ್ಗೆ ಅರಿವಾದ ಇತರ ಅಂಶಗಳು !

ಅ. ನಾನು ಕಥಾವಾಚಕರು, ಪ್ರವಚನಕಾರರು ಮತ್ತು ಕೀರ್ತನಕಾರರ ಸತ್ಸಂಗ ಕೇಳಿದ್ದೇನೆ, ಅದರಿಂದಲೂ ನನಗೆ ಬಹಳ ಕಲಿಯಲು ಸಿಕ್ಕಿದೆ. ಆದರೆ ನಾನು ಭಾವಸ್ಥಿತಿ ಅನುಭವಿಸಿ ಕೃತಿ ರೂಪದಲ್ಲಿ ತರಲು ಕಡಿಮೆ ಬಿದ್ದಿದ್ದೇನೆ. ಸನಾತನದ ಭಕ್ತಿ ಸತ್ಸಂಗದಿಂದ ಆ ಕೊರತೆ ನೀಗಿದೆ, ಎಂದು ನನಗೆ ಅನಿಸುತ್ತದೆ.

ಆ. ಭಕ್ತಿ ಸತ್ಸಂಗವನ್ನು ಆನ್‌ಲೈನ್ ಅಂದರೆ ಗಣಕೀಯ ತಂತ್ರಾಂಶ ಮೂಲಕ ಆಯೋಜಿಸಲಾಗುತ್ತದೆ. ಆದರೂ ಅದರಲ್ಲಿ ಜೀವಂತಿಕೆಯ ಅರಿವಾಗುತ್ತದೆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಪ್ರತ್ಯಕ್ಷ ಎದುರು ಕುಳಿತು ಸತ್ಸಂಗ ತೆಗೆದುಕೊಳ್ಳುತ್ತಿದ್ದಾರೆ ಹಾಗೂ ಅವರು ಸಾಧಕರನ್ನು ಭಾವ ವಿಶ್ವಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ, ಎಂದು ನನಗೆ ಅನಿಸುತ್ತದೆ.

ಇ. ಭಕ್ತಿ ಸತ್ಸಂಗ ಎಷ್ಟು ದಿನ ನಡೆಯುವುದು ? ಅಥವಾ ಎಷ್ಟು ದಿನ ಸತ್ಸಂಗ ಕೇಳುವ ಅವಕಾಶ ಸಿಗುವುದು ? ಇದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಸಿಕ್ಕಿರುವ ಸುವರ್ಣಾವಕಾಶವನ್ನು ಎಂದರೆ ಸತ್ಸಂಗದಿಂದ ಹೆಚ್ಚು ಹೆಚ್ಚು ಲಾಭ ಪಡೆಯುವುದಷ್ಟೇ ನನ್ನ ಸಾಧನೆಯಾಗಿದೆ.

ಈ. ಭಕ್ತಿಸತ್ಸಂಗದ ಪೂರ್ಣ ಲಾಭ ಪಡೆಯುಲು ಸಾಧಕರು ಏಕಾಗ್ರತೆಯಿಂದ ಸತ್ಸಂಗ ಕೇಳಿ ಭಾವಭಕ್ತಿಯನ್ನು ಮನಸ್ಸಿನಲ್ಲಿ ಬಿಂಬಿಸಲು ಪ್ರಯತ್ನಿಸಬೇಕು, ಆಗ ಸಾಧಕರ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆಗೆ ವೇಗ ಸಿಗಬಹುದು. ಭಕ್ತಿ ಸತ್ಸಂಗದಿಂದ ಸಾವಿರಾರು ಸಾಧಕರಿಗೆ ಪ್ರೇರಣೆ ಮತ್ತು ಉತ್ಸಾಹ ದೊರೆಯು ವುದರಿಂದ ಅವರು ಒಳ್ಳೆಯ ರೀತಿಯಲ್ಲಿ ಸಾಧನೆ ಮತ್ತು ಹೆಚ್ಚೆಚ್ಚು ಸೇವೆ ಮಾಡುತ್ತಿದ್ದಾರೆ. ಅವರು ತಮ್ಮ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆಗೆ ವೇಗ ಸಿಕ್ಕಿರುವ ಅನುಭೂತಿ ಪಡೆಯುತ್ತಿದ್ದಾರೆ.

ಉ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಸತ್ಸಂಗದಲ್ಲಿ ಆತ್ಮೀಯತೆ ಯಿಂದ ಮತ್ತು ಭಾವಸ್ಥಿತಿಯಲ್ಲಿ ಮಾತನಾಡುತ್ತಾರೆ. ಆದ್ದರಿಂದ ಅವರ ಆತ್ಮವು ಶ್ರವಣ ಮಾಡುವ ಸಾಧಕರ ಆತ್ಮದ ಜೊತೆಗೆ ಆತ್ಮೀಯತೆಯಿಂದ ಸಂವಾದ ನಡೆಸುತ್ತದೆ. ಆದ್ದರಿಂದ ಮನಸ್ಸಿಟ್ಟು ಸತ್ಸಂಗ ಕೇಳಿಸಿಕೊಳ್ಳುವುದು ಇದೇ ಶ್ರವಣ ಭಕ್ತಿಯಾಗುತ್ತದೆ.

– (ಪೂ.) ಶಿವಾಜಿ ವಟಕರ (೪.೨.೨೦೨೩)

 

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.