ಬ್ರಿಸ್ಬೆನ್ (ಆಸ್ಟ್ರೇಲಿಯಾ) – ಇಲ್ಲಿನ ಭಾರತಿಯ ರಾಯಭಾರಿ ಕಛೇರಿಯ ಪ್ರವೇಶದ್ವಾರದಲ್ಲಿ ೨೦ ರಿಂದ ೨೫ ಖಲಿಸ್ತಾನಿಯವರು ಮಾರ್ಚ ೧೪ ರಂದು ಸಂಜೆ ಆಂದೋಲನ ಮಾಡುತ್ತಾ ಪ್ರವೇಶದ್ವಾರವನ್ನು ಮುಚ್ಚಿದರು. ಅವರ ಕೈಯಲ್ಲಿ ಖಲಿಸ್ತಾನಿನ ಧ್ವಜ, ಬಟ್ಟೆ ಫಲಕ ಹಾಗೂ ಭಿತ್ತಿಪತ್ರಕಗಳು ಇದ್ದವು. ಅವರು ಘೋಷಣೆಗಳು ಹಾಕುತಿದ್ದರು. ಹಾಗಾಗಿ ಒಬ್ಬ ನಾಗರಿಕನೂ ರಾಯಭಾರಿ ಕಛೇರಿಯಲ್ಲಿ ಪ್ರವೇಶ ಮಾಡಲು ಆಗಲಿಲ್ಲ. ಇದರ ಪರಿಣಾಮವಾಗಿ ರಾಯಭಾರಿ ಕಛೇರಿಯಲ್ಲಿ ಕೇಲಸ ಮಾಡಲು ಸಾಧ್ಯವಾಗಲಿಲ್ಲ.
(ಸೌಜನ್ಯ – Hindustan Times)
ಕಳೇದ ವಾರ ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅಂಥೋನಿ ಅಲ್ಬನಿಸ್ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ‘ಆಸ್ಟ್ರೇಲಿಯಾದಲ್ಲಿ ದೇವಸ್ಥಾನಗಳು ಹಾಗು ಭಾರತೀಯರ ರಕ್ಷಣೆ ಮಾಡಲಾಗುವುದು’, ಹೀಗೆ ಆಶ್ವಾಸನೆ ನೀಡಿದ್ದರು.
ಸಂಪಾದಕೀಯ ನಿಲುವುಆಸ್ಟ್ರೇಲಿಯಾದ ಪ್ರಧಾನಮಂತ್ರಿಯು ಭಾರತಿಯರ ಸಂರಕ್ಷಣೆ ಮಾಡುವ ಭರವಸೆ ನೀಡಿಯು ಇಂತಹ ಘಟನೆಗಳು ನಡಿಯುತ್ತಿದ್ದರೆ, ಈಗ ಭಾರತ ಸರಕಾರವು ಆಸ್ಟ್ರೇಲಿಯಾದ ಮೇಲೆ ಒತ್ತಡ ಹಾಕಿ ಅಲ್ಲಿನ ಭಾರತಿಯರ ರಕ್ಷಣೆ ಮಾಡಲು ಮುಂದಾಗಬೇಕು ! |