ನನ್ನ ಬಳಿ ಭಾರತದ ಆಧಾರ ಕಾರ್ಡ ಇದೆ !

ಪಾಕಿಸ್ತಾನದ ಮಾಜಿ ಕ್ರಿಕೆಟ ಪಟು ಶೋಯೆಬ ಅಖ್ತರ ಇವರ ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ನನಗೆ ಭಾರತ ಬಹಳ ಇಷ್ಟ ಮತ್ತು ನಾನು ಯಾವಾಗಲೂ ದೆಹಲಿಗೆ ಹೋಗುತ್ತಿರುತ್ತೇನೆ. ಇಷ್ಟೇ ಅಲ್ಲ ನಾನು ಆಧಾರ ಕಾರ್ಡ ಕೂಡ ಮಾಡಿಸಿಕೊಂಡಿದ್ದೇನೆ. ಇದರಿಂದ ನಾನು ಭಾರತದವನೇ ಎಂದು ಸಿದ್ಧಗೊಳಿಸುವಲ್ಲಿ ಏನೂ ಬಾಕಿ ಉಳಿದಿಲ್ಲ, ಎಂದು ಪಾಕಿಸ್ತಾನಿ ಮಾಜಿ ಕ್ರಿಕೆಟ ಪಟು ಶೋಯೆಬ ಅಖ್ತರ ಹೇಳಿದ್ದಾರೆ.

ಸಂಪಾದಕರ ನಿಲುವು

* ಭಾರತದಲ್ಲಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ಬಳಿ ಆಧಾರಕಾರ್ಡ ಸಿಕ್ಕಿರುವ ಸಾವಿರಾರು ಪ್ರಕರಣಗಳು ಕಂಡು ಬಂದಿದ್ದರಿಂದ ಒಂದು ವೇಳೆ ಶೋಯೆಬ್ ಅಖ್ತರ ಅವರು ಈ ರೀತಿ ದಾವೆ ಮಾಡುತ್ತಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ ! ಭಾರತದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಭ್ರಷ್ಟಾಚಾರಿ ಭಾರತವನ್ನೂ ಮಾರಲೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಜನರಿಗೆ ಅನಿಸುತ್ತದೆ !