ಕೇರಳದಲ್ಲಿ ಭಾಜಪ ಇಬ್ಬರು ಕಾರ್ಯಕರ್ತರ ಮೇಲೆ ಸಶಸ್ತ್ರ ದಾಳಿ!

ಪಲಕ್ಕಡ (ಕೇರಳ) – ನಗರದಲ್ಲಿ ಭಾಜಪದ ದಿನೇಶ ಮತ್ತು ವಿಷ್ಣು ಈ ಇಬ್ಬರು ಕಾರ್ಯಕರ್ತರ ಮೇಲೆ ಸಶಸ್ತ್ರ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಮಯದಲ್ಲಿ ವಿಷ್ಣು ಇವರ ತಾಯಿಯವರು ವಿಷ್ಣು ಇವರನ್ನು ರಕ್ಷಿಸಲು ಮುಂದಾದಾಗ ಆರೋಪಿಗಳು ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಈ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಿಡಿಸಿದ್ದಾರೆ! – ಭಾಜಪದ ಆರೋಪ

ಕೇರಳದ ಭಾಜಪದ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಟ್ವೀಟ್ ಮಾಡಿ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಗೂಂಡಾಗಳು ಪಲಕ್ಕಡ್‌ನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಭಾಜಪ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಗೂಂಡಾಗಳು ಕಳೆದ ವರ್ಷ ಇದೇ ಪ್ರದೇಶದಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಕೇರಳ ಮುಖ್ಯಮಂತ್ರಿಯವರಿಗೆ ನಾಚಿಕೆಯಾಗಬೇಕು. ನಾವು ಇದನ್ನು ಮೂಕ ಪ್ರೇಕ್ಷಕರಂತೆ ನೋಡುವುದಿಲ್ಲ, ಎಂದು ಎಚ್ಚರಿಸಿದರು.

ಸಂಪಾದಕರ ನಿಲುವು

* ಸಾಮ್ಯವಾದಿಗಳ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಭಾಜಪದ ರಾಜ್ಯದಲ್ಲಿ ಸಾಮ್ಯವಾದಿಗಳ ವಿಷಯದಲ್ಲಿ ಇಂತಹ ಘಟನೆ ನಡೆದಿದ್ದರೆ, ಸಾಮ್ಯವಾದಿಗಳು ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡುತ್ತಿದ್ದರು !