ಇನ್ನುಮುಂದೆ ಚರ್ಚಿನ ಪಾದ್ರಿಗಳು ಮದುವೆಯಾಗಬಹುದು ! – ಪೋಪ ಫ್ರಾನ್ಸಿಸ

ಪಾದ್ರಿಗಳಿಗಾಗಿ ನಿರ್ಮಿಸಿದ್ದ 11ನೇ ಶತಮಾನದ ನಿಯಮಗಳ ಬದಲಾವಣೆಯ ಸುತ್ತೋಲೆ !

ಪೋಪ ಫ್ರಾನ್ಸಿಸ

ವ್ಯಾಟಿಕನ್ ಸಿಟಿ – ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸರವರು ಚರ್ಚಿನಲ್ಲಿ ಪಾದ್ರಿಗಳಿಗಾಗಿ ರಚಿಸಲಾದ ದೈಹಿಕ ಸಂಬಂಧಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಅವರ ಅನುಸಾರ, ಚರ್ಚಿನ ಪಾದ್ರಿಗಳು ಮದುವೆಯಾಗುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ಸಂದರ್ಭದಲ್ಲಿನ ವಾರ್ತೆಯು ಆಂಗ್ಲ ದಿನಪತ್ರಿಕೆಯಾದ ‘ಡೈಲಿ ಮೇಲ್’ನಲ್ಲಿ ಪ್ರಕಟವಾಗಿದೆ. ಈ ದಿನಪತ್ರಿಕೆಯಲ್ಲಿ ‘ಅರ್ಜೆಂಟೀನಾದ ದಿನಪತ್ರಿಕೆಯಾದ ‘ಇಂಫೊಬೆ’ಗೆ ನೀಡಿದ ಸಂದರ್ಶನದಲ್ಲಿ ಪೋಪ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ, ಎಂದು ಹೇಳಲಾಗಿದೆ. ಈ ಸಂದರ್ಶನದಲ್ಲಿ ಪೋಪರಿಗೆ ಜರ್ಮನಿಯಲ್ಲಿ ಸಲಿಂಗ ವಿವಾಹಕ್ಕೆ ಕ್ಯಾಥೋಲಿಕ್ ಚರ್ಚಿನಿಂದ ನೀಡಲಾದ ಅನುಮತಿ ಮತ್ತು ಚರ್ಚಿನಲ್ಲಿ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ಬಗ್ಗೆ ಪ್ರಶ್ನಿಸಲಾಯಿತು.

1. ಪೊಪ ಫ್ರಾನ್ಸಿಸರವರು, ಪಾದ್ರಿಗಳು ದೈಹಿಕ ಸಂಬಂಧ ಹೊಂದಿರುವ ಬಗ್ಗೆ ಚರ್ಚಿನ ಹಳೆಯ ನಿಯಮಗಳನ್ನು ಪರಿಶೀಲಿಸಲಾಗುವುದು. ಚರ್ಚಿನ ನಿಯಮಗಳ ಬದಲಾವಣೆಯ ಚರ್ಚೆಯನ್ನು ಸಾರ್ವಜನಿಕರು ಸ್ವಾಗತಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಚರ್ಚಿನ ಪಾದ್ರಿಗಳಿಂದ ಅಪ್ರಾಪ್ತರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಪೋಪರವರು ನಿಯಮವನ್ನು ಬದಲಾವಣೆಯಾಗುತ್ತಿದೆ ಎಂದು ಹೇಳಿದ್ದಾರೆ.

2. ಪೋಪರವರು, ಪಾದ್ರಿಗಳಿಗಾಗಿ 11 ನೇ ಶತಮಾನದಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ಮಾಡಿದ ನಿಯಮಗಳು ಅನಂತ ಕಾಲದ ವರೆಗೆ ಆಗಿರಲಿಲ್ಲ. ಆ ಕಾಲದ ಆರ್ಥಿಕ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿತ್ತು. ದೈಹಿಕ ಸಂಬಂಧಗಳ ನಿಷೇಧವು ಶಿಸ್ತಿನ ಒಂದು ಭಾಗವಾಗಿದೆ. ಆ ಕಾಲದಲ್ಲಿ ಪಾದ್ರಿಗಳು ಚರ್ಚನ ಹಿತದೆಡೆಗೆ ಹೆಚ್ಚಿನ ಗಮನ ನೀಡಬೇಕು ಎಂಬ ವಿಚಾರವಿತ್ತು. ಹಿಂದಿನ ಚರ್ಚ್‌ಗಳಲ್ಲಿ ಹೆಚ್ಚಿನ ಪಾದ್ರಿಗಳು ವಿವಾಹಿತರಾಗಿದ್ದರು. ಒಬ್ಬ ಪಾದ್ರಿಯಾಗಿ ದೀಕ್ಷೆ ಪಡೆಯುವ ಮೊದಲು ಮದುವೆಯಾಗುವ ಅಥವಾ ಒಂಟಿಯಾಗಿರುವ ಆಯ್ಕೆಯನ್ನು ನೀಡಲಾಗುತ್ತದೆ.

3. ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳ ಬಗ್ಗೆ ಪೋಪರವರು ಮಾತನಾಡುತ್ತ ಯುವಕರ ಮದುವೆಯ ಬಗೆಗಿನ ಆತುರದ ನಿರ್ಧಾರಗಳು ಮತ್ತಷ್ಟು ವಿಚ್ಛೇದನಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದರು.