`ಐ.ಎಂ.ಎಫ್.’ ಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿಲ್ಲ ! – ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಇಸ್ಲಾಯಿಲ್

ಪಾಕಿಸ್ತಾನಕ್ಕೆ ಕಪಾಳ ಮೋಕ್ಷ

ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಇಸ್ಲಾಯಿಲ್

ಇಸ್ಲಾಮಾಬಾದ – ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐ.ಎಂ.ಎಫ್.’ ಗೆ) ಪಾಕಿಸ್ತಾನದ ಮೇಲಿನ ವಿಶ್ವಾಸವಿಲ್ಲ ಎಂದು ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮಿಫ್ತಾಹ ಇಸ್ಲಾಯಿಲ್ ಇವರು ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ಸಾಲ ನೀಡುವುದನ್ನು ನಿಲ್ಲಿಸಿತ್ತು. ಈ ಪ್ರಕ್ರಿಯೆ ನಡೆಸಲು ಇಸ್ಲಾಯಿಲ್ ಇವರು ಕೈಜೋಡಿಸಿದ್ದರು. ಇತ್ತೀಚೆಗೆ ಅವರು ಪಾಕಿಸ್ತಾನದ ಜಿಓ ವಾರ್ತಾ ವಾಹಿನಿಗೆ ಸಂದರ್ಶನ ನೀಡಿದರು. ಈ ಸಂದರ್ಭದಲ್ಲಿ ಅವರು, ಪಾಕಿಸ್ತಾನ ಸರಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ ಮಹತ್ವದ ಒಪ್ಪಂದವನ್ನು ರದ್ದುಗೊಳಿಸಿತು ಹಾಗೂ ದೇಶ ದೊಡ್ಡ ಆರ್ಧಿಕ ಸಂಕಟದಲ್ಲಿ ಸಿಲುಕಿತು. ಕಳೆದ ಒಂದೂವರೆ ವರ್ಷದಲ್ಲಿ ನಾವು ಮೂರು ಬಾರಿ ಆಶ್ವಾಸನೆಯನ್ನು ನೀಡಿದ್ದೇವೆ ಮತ್ತು ನಂತರ ಅದನ್ನು ಹಿಂದಕ್ಕೆ ಪಡೆದಿದ್ದೇವೆ. ಇಮ್ರಾನ ಖಾನ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿರುವಾಗ ಆಗಿನ ಹಣಕಾಸು ಸಚಿವ ಹಾಫೀಜ ಶೇಖ ಇವರು ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರು. `ಐ.ಎಂ.ಎಫ್.’ ಹಣ ನೀಡುತ್ತಲೇ ಶೇಖ ಇವರನ್ನು ಅವರ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಇದರಿಂದ `ಐ.ಎಂ.ಎಫ್.’ ಮೋಸ ಹೋಯಿತು. ತದನಂತರ ‘ಐ.ಎಮ್.ಎಫ್.’ ಹಣ ನೀಡುವುದನ್ನು ನಿಲ್ಲಿಸಿತು, ಎಂದೂ ಸಹ ಇಸ್ಮಾಯಿಲ್ ಹೇಳಿದ್ದಾರೆ.