ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ !
ಹೈದರಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಧರ್ಮದೇವ ರಾಠಿ (ವಯಸ್ಸು 60 ವರ್ಷ) ಈ ಹಿಂದೂ ವೈದ್ಯನ ಹತ್ಯೆ ಮಾಡಲಾಗಿದೆ. ಅವರ ವಾಹನಚಾಲಕ ಹನೀಫ ಲಘಾರಿ ಈ ಹತ್ಯೆ ಮಾಡಿದ್ದಾನೆ. ಈ ಹತ್ಯೆಯ ಸಮಯದಲ್ಲಿ ರಾಠಿಯವರ ಅಡುಗೆಯವ ದಿಲೀಪ ಠಾಕೂಕ ಕೂಡ ಗಾಯಗೊಂಡಿದ್ದಾನೆ. ಅವನೇ ಹತ್ಯೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದನು. ಡಾ. ರಾಠಿ ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಅವರು ಮತ್ತು ಚಾಲಕನ ನಡುವೆ ಮಾತಿನ ಚಕಮಕಿ ನಡೆಯಿತು. ಮನೆ ತಲುಪಿದ ಬಳಿಕ ಹನೀಫ ರಾಠಿಯವರ ಹತ್ಯೆ ಮಾಡಿದನು. ಡಾ. ರಾಠಿಯವರ ಕುಟುಂಬದವರು ಅಮೇರಿಕಾದಲ್ಲಿ ವಾಸಿಸುತ್ತಾರೆ.
Another Hindu doctor murdered in Pakistan, this time on Holi eve. Dermatologist Dr. Dharamdev Rathee’s throat was slit by his driver Md. Hanif Leghari in Hyderabad, Sindh. Accused is missing with the doctor’s car. pic.twitter.com/2YOmmHQwKW
— HinduPost (@hindupost) March 8, 2023
1. ಈ ಘಟನೆಯ ಬಗ್ಗೆ ‘ಯಂಗ್ ಕನ್ಸಲ್ಟೆಂಟ್ಸ ಅಸೋಸಿಯೇಶನ ಸಿಂಧ’ ದುಃಖವನ್ನು ವ್ಯಕ್ತಪಡಿಸಿದೆ. ಈ ಘಟನೆಯ ಬಗ್ಗೆ ಸೂಕ್ತ ವಿಚಾರಣೆ ನಡೆದು ಸತ್ಯ ಬೆಳಕಿಗೆ ಬರಬೇಕು. ಹಾಗೆಯೇ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂಘಟನೆ ಹೇಳಿದೆ.
2. ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜ್ಞಾನಚಂದ ಇಸ್ರಾಣಿಯವರು, ಆರೋಪಿಗೆ ಆದಷ್ಟು ಬೇಗನೆ ಬಂಧಿಸುವಂತೆ ಆದೇಶಿಸಲಾಗಿದೆಯೆಂದು ಹೇಳಿದ್ದಾರೆ.
3. ಪಾಕಿಸ್ತಾನಿ ಶಾಸಕ ಖಿಯಲ ದಾಸ ಕೊಹಿಸ್ತಾನಿಯವರೂ ಈ ಹತ್ಯೆಯನ್ನು ಖಂಡಿಸಿದ್ದಾರೆ.