ಸನಾತನ ವಿಚಾರ ಮತ್ತು ಅದರ ಸದ್ಯದ ಸ್ಥಿತಿ !

ಗುರುದೇವ ಡಾ. ಕಾಟೇಸ್ವಾಮೀಜಿ

ಯಾವುದು ನನಗೆ ತಿಳಿಯುವುದಿಲ್ಲವೊ, ಅದೆಲ್ಲವೂ ಮೂರ್ಖತನವಾಗಿದೆ, ಎಂಬಂತಹ ಹೀನಬುದ್ಧಿ, ಹೃದಯ ದೌರ್ಬಲ್ಯವನ್ನು ದೂರಗೊಳಿಸಿ ಶಾಸ್ತ್ರನಿಷ್ಠೆ, ವಿಜಿಗೀಷುವೃತ್ತಿಯನ್ನು ಜೋಪಾನ ಮಾಡುವುದು, ಇದೇ ನಮ್ಮ ಭೂಮಿಕೆ ಆಗಿದೆ.’ – ಗುರುದೇವ ಡಾ. ಕಾಟೇಸ್ವಾಮೀಜಿ

(ಆಧಾರ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೨೧)

೧. ಸನಾತನದ ವಿಚಾರಗಳ ಮೇಲೆ ಅಧಿಕಾರದ ದಬ್ಬಾಳಿಕೆಯ ರುಬ್ಬುಗಲ್ಲನ್ನು ತಿರುವಲಾಯಿತು

‘ಶಾಸ್ತ್ರವಿದೆ, ಇದರಲ್ಲೆಂತಹ ಪಕ್ಷಪಾತ ? ಎಂತಹ ಅತ್ಯಾಚಾರ ? ಸನಾತನದ ಶ್ರದ್ಧೆಗೆ ಸಂಬಂಧಿಸಿದಚಿಂತನೆಯನ್ನು ಯಾರೂ ಮುದ್ರಿಸುವುದಿಲ್ಲ. ಅದರ ಧ್ವನಿ ಎಲ್ಲಿಯೂ ಹೋಗುವುದಿಲ್ಲ. ಅಲ್ಲ ಸನಾತನದ ಶೈಲಿಯಲೇಖನಗಳು ಸ್ವಲ್ಪವೂ ಪ್ರಸಿದ್ಧವಾಗಲೇಬಾರದು, ಅವುಗಳನ್ನು ಹತ್ತಿಕ್ಕಲು ಬಂದರೆ ಒಳ್ಳೆಯದೇ ಆಯಿತು, ಇಂತಹ ಕೆಟ್ಟ ಮತ್ತು ಮತ್ಸರದ ವಿಚಾರ ಪದ್ಧತಿ ಇಂದು ಎಲ್ಲೆಡೆ ಪ್ರಚಲಿತವಾಗಿದೆ. ಸನಾತನ ವಿಚಾರಗಳ ಮೇಲೆ ಅಧಿಕಾರದ ದಬ್ಬಾಳಿಕೆಯ ರುಬ್ಬುಗಲ್ಲನ್ನು ತಿರುವಲಾಗುತ್ತದೆ. ಆದರೆ ಅದು ಅನೇಕ ರೀತಿಯ ಗಂಡಾಂತರಗಳಿಂದ ಉಳಿದು, ಇಂದಲ್ಲ ನಾಳೆ ಸನಾತನ ವಿಚಾರಗಳು ಸಂಪೂರ್ಣ ರಾಷ್ಟ್ರದ ಶಿರೋಮಣಿ ಆಗುವುದೇ ಇದೆ. ಇದು ನಿಜವಾಗಿದೆ,

೨. ಸನಾತನದ ವಿಚಾರಗಳನ್ನು ಶಾಸ್ತ್ರೀಯ ದೃಷ್ಟಿಕೋನದಿಂದ ತಿಳಿದುಕೊಳ್ಳದೆ ಅವುಗಳನ್ನು ದುರಾಗ್ರಹ ಮತ್ತು ದುರದೃಷ್ಟಿಯಿಂದ ನಿರಾಕರಿಸುವುದು ಮಹಾಪಾಪವಾಗಿದೆ

ಇಂದಿನ ಮೂಲಭೂತ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಮೂಲ ಸನಾತನದ ವಿಚಾರಗಳು ಏನಿವೆ ? ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಅವುಗಳನ್ನು ತಿಳಿದುಕೊಂಡರೆ, ಇಂದು ನಡೆಯುತ್ತಿರುವ ಆಧುನಿಕ ಮೌಲ್ಯಗಳ ಮಂಥನದಲ್ಲಿನ ಅವಗುಣಗಳನ್ನು ದೂರ ಮಾಡಬಹುದು. ಶುದ್ಧ ಮತ್ತು ಶಾಸ್ತ್ರೀಯ ದೃಷ್ಟಿಕೋನವನ್ನಿಡಿ. ಯಾವುದೇ ದುರಾಗ್ರಹದ ಅಧೀನರಾಗಬೇಡಿ. ಪ್ರತಿಯೊಂದು ಸಮಸ್ಯೆಯ ಬಗ್ಗೆ ಸನಾತನ ಹಿಂದೂಗಳ ವಿಚಾರ ಏನಿದೆ ? ಅದನ್ನು ತಿಳಿದುಕೊಳ್ಳಿ. ಕೇವಲ ಶಾಸ್ತ್ರದೃಷ್ಟಿಯನ್ನು ಇಟ್ಟುಕೊಂಡು ನಮ್ಮ ಸನಾತನ ಪರಂಪರೆಯ ಅಧ್ಯಯನವನ್ನು ಮಾಡಿರಿ. ಯತಾರ್ಥ ಜ್ಞಾನವನ್ನು ಜನರ ಮುಂದಿಡಿ. ದುರಾಗ್ರಹದಿಂದ ಮತ್ತು ದುರದೃಷ್ಟಿಯಿಂದ ನಿರಾಕರಿಸುವುದು, ಇದು ಮಹಾಪಾಪಿ ಮತ್ತು ಮೋಹಪೀಡಿತ ಪಾಶ್ಚಾತ್ಯರ ಬಾಯಿಯಲ್ಲಿ ಶೋಭಿಸುತ್ತದೆ; ಆದರೆ ಯಾವ ಹಿಂದೂಗಳು ತಾಯಿಯ ಹಾಲಿನೊಂದಿಗೆ ಸನಾತನ ಧರ್ಮವನ್ನು ಗ್ರಹಣ ಮಾಡಿದ್ದಾರೆಯೋ, ಆ ಹಿಂದೂಗಳ ತುಟಿಗಳಿಗೆ ಅವರ (ದುರಾಗ್ರಹಿ ಮತ್ತು ದುರದೃಷ್ಟಿಯಿಂದ ನಿರಾಕರಿಸುವುದು) ಸ್ಪರ್ಶವು ಅತ್ಯಂತ ದುಃಖದಾಯಕವಾಗಿದೆ.

೩. ಆಂಗ್ಲರ ಶಿಕ್ಷಣವು ಸನಾತನ ಧರ್ಮಮತ್ತು ಸನಾತನ ಸಂಸ್ಕೃತಿಯನ್ನು ನಾಶಮಾಡಿತು

ನಿರುಪಯುಕ್ತ ಆಂಗ್ಲರ ಶಿಕ್ಷಣವು ಪರಿಣಾಮಕಾರಿ ರೀತಿಯಲ್ಲಿ ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿಯ ವಿರುದ್ಧ ನೆಟ್ಟಿರುವ ವಿಷವಲ್ಲಿ (ವಿಷದ ಬಳ್ಳಿಯು) ನಮ್ಮ ಸನಾತನ ವೃಕ್ಷವನ್ನು ಎಲ್ಲ ಬದಿಗಳಿಂದ ಆವರಿಸಿಕೊಂಡಿದೆ. ಅಧಿಕಾರಕ್ಕಾಗಿ ಮತಪೆಟ್ಟಿಗೆಗಾಗಿ (ವೋಟ್‌ ಬ್ಯಾಂಕ್) ಆಸೆಪಡುವ  ಈ ದುಷ್ಟ ರಾಜಕಾರಣಿಗಳು ನಮ್ಮ ಭೂತಕಾಲ, ಸನಾತನ ಧರ್ಮ ಮತ್ತು ಅದರ ಹೊಕ್ಕಳಬಳ್ಳಿಯನ್ನೇ ನಮ್ಮ ಪೀಳಿಗೆಯಿಂದ ತುಂಡರಿಸಿದರು. ನಮ್ಮ ದೇವಸ್ಥಾನಗಳನ್ನು ಮುಸಲ್ಮಾನರು  ಒಡೆದರು. ನಮ್ಮ ಸ್ವಾಭಿಮಾನವು ಸಿಂಹದಂತಿತ್ತು. ನಾವು ಪುನಃ ಹೊಸ ದೇವಸ್ಥಾನಗಳನ್ನು ಕಟ್ಟಿದೆವು. ನಮ್ಮ ಶಾಸ್ತ್ರಗಳನ್ನು ನಾವು ಬಾಯಿಪಾಠ ಮಾಡಿ ರಕ್ಷಿಸಿದೆವು. ಆಂಗ್ಲರು ದೇವಸ್ಥಾನಗಳನ್ನು ಒಡೆಯಲಿಲ್ಲ. ಶಾಸ್ತ್ರಗಳನ್ನು ಸುಡಲಿಲ್ಲ; ಆದರೆ ಆಂಗ್ಲ ಶಿಕ್ಷಣವನ್ನು ಕೊಟ್ಟು ನಮ್ಮನ್ನು ಪ್ರಜ್ಞಾಹೀನರನ್ನಾಗಿ ಮಾಡಿದರು. ಇದರಿಂದ ದೇವಸ್ಥಾನಕ್ಕೆ ಹೋಗುವ ನಮ್ಮ ಶ್ರದ್ಧೆಯೇ ಇಲ್ಲವಾಯಿತು. ನಮ್ಮ ಶ್ರುತಿ, ಸ್ಮೃತಿ, ಪುರಾಣಾದಿ ಪ್ರಾಚೀನ ವಿದ್ಯಾವೈಭವಗಳು ನಮಗೆ ತುಚ್ಛವೆಂದು ಅನಿಸತೊಡಗಿದವು. ನಾವು ಪಶ್ಚಿಮದ ಕಡೆಗೆ ತಿರುಗಿದೆವು ಮತ್ತು ಇಂದು ಇಂತಹ ಶಿಕ್ಷಣದ ಭ್ರಷ್ಟಪರ್ಯಾಯ ಸ್ವೀಕರಿಸಿ ಪೌರುಷಹೀನ ಮತ್ತು ಪ್ರಜ್ಞಾಹೀನರಾಗಿದ್ದೇವೆ.’

ಗುರುದೇವ ಡಾ. ಕಾಟೇಸ್ವಾಮೀಜಿ

(ಆಧಾರ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೨೨)