ಯುಗಾದಿಯಂದು ಬಿಡಿಸಬೇಕಾದ ಸಾತ್ವಿಕ ರಂಗೋಲಿ

ಹಬ್ಬದ ಒಂದೆರಡು ದಿನಗಳ ಮೊದಲು ಮನೆಯ ಸ್ವಚ್ಛತೆ, ಬಣ್ಣ ಬಳಿಯುವುದು ಮಾಡಬೇಕು. ಮನೆಯ ಪ್ರವೇಶದ್ವಾರದ ಮೇಲೆ ಶ್ರೀ ಗಣಪತಿಯ ಚಿತ್ರ ಸ್ಥಾಪಿಸಬೇಕು. ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.