‘ಹಿಂದೂ ರಾಷ್ಟ್ರ’ಕ್ಕೆ ಒತ್ತಾಯಿಸುವುದು ಎಂದರೆ ಕಾನೂನ ದ್ರೋಹ !’ (ವಂತೆ) – ಸೋಶಿಯಲ್ ಡೆಮೊಕ್ರಟಿಕ್ ಆಫ್ ಇಂಡಿಯಾದ ಮುಖಂಡ ರಿಯಾಝ ಫರಂಗಿಪೇಟೆ

ಸೋಶಿಯಲ್ ಡೆಮೊಕ್ರಟಿಕ್ ಆಫ್ ಇಂಡಿಯಾದ ಮುಖಂಡ ರಿಯಾಝ ಫರಂಗಿಪೇಟೆ ಇವರಿಂದ ಬೆಳ್ತಂಗಡಿಯಲ್ಲಿನ ‘ಹಿಂದೂ ರಾಷ್ಟ್ರ ಜಾಗೃತಿ’ ಸಭೆಗೆ ವಿರೋಧ

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಸ್ಥಳದಲ್ಲಿ ಸನಾತನ ಸಂಸ್ಥೆಯಿಂದ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಹಿಂದೂ ರಾಷ್ಟ್ರ ಜನ ಜಾಗೃತಿ ಸಭೆ ಅಭಿಯಾನ ನಡೆಯುತ್ತಿದೆ. (ಹಿಂದೂ ಜನ ಜಾಗೃತಿ ಸಮಿತಿ ವಿವಿಧ ಸ್ಥಳದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ’ ಸಭೆ ಆಯೋಜನೆ ಮಾಡುತ್ತಿದೆ. ಯಾರಿಗೆ ‘ಯಾವ ಸಂಘಟನೆ ಈ ಆಯೋಜನೆ ಮಾಡುತ್ತಿದೆ ?’, ಹಾಗೂ ಸಭೆಯ ಹೆಸರು ಕೂಡ ಸರಿಯಾಗಿ ತಿಳಿದಿಲ್ಲ, ಅವರು ಇದನ್ನು ವಿರೋಧಿಸುತ್ತಿದ್ದಾರೆ ! – ಸಂಪಾದಕರು) ಸನಾತನ ಸಂಸ್ಥೆಯು ಮಾರ್ಚ್ ೫ ರಂದು ಬೆಳ್ತಂಗಡಿಯಲ್ಲಿ ಇಂತಹ ಒಂದು ಕಾರ್ಯಕ್ರಮದ ಆಯೋಜನೆ ಮಾಡಿ ಪ್ರಚೋದನಾಕಾರಿ ಭಾಷಣ ಮಾಡಿ ಧರ್ಮದಲ್ಲಿ ಬಿರುಕು ನಿರ್ಮಿಸುವ ಕೆಲಸ ಮಾಡಿದೆ, ಎಂದು ಮಂಗಳೂರಿನಲ್ಲಿನ ಸೋಶಿಯಲ್ ಡೆಮೊಕ್ರಟಿಕ್ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನ ನಾಯಕ ರಿಯಾಝ ಫರಂಗಿಪೇಟೆ ಇವರು ಆರೋಪಿಸಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. (ಹೀಗಿದ್ದರೆ, ಈಗಾಗಲೇ ಪೊಲೀಸರಲ್ಲಿ ದೂರು ದಾಖಲಿಸಿ ಅಥವಾ ಪೊಲೀಸರು ಆರೋಪ ದಾಖಲಿಸುತ್ತಿದ್ದರು; ಆದರೆ ಹೀಗೆ ಏನು ನಡೆದಿಲ್ಲ, ಇದರ ಅರ್ಥ ರಿಯಾಝ ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದು ಸ್ಪಷ್ಟವಾಗುತ್ತದೆ !- ಸಂಪಾದಕರು)

(ಸೌಜನ್ಯ : V4news)

ರಿಯಾಝ ಫರಂಗಿಪೇಟೆ ಇವರ ಹಿಂದೂ ದ್ವೇಷಿ ಹೇಳಿಕೆ !

೧. ಜಾತ್ಯತೀತವಾಗಿರುವ ಈ ದೇಶದಲ್ಲಿ ಈ ರೀತಿ ಒಂದು ಧರ್ಮದ ರಾಷ್ಟ್ರ ಸ್ಥಾಪನೆ ಮಾಡಲು ಒತ್ತಾಯಿಸುವ ಸಭೆ ಸಂವಿಧಾನವಿರೋಧಿಯಾಗಿದೆ. ಕಾನೂನುಬಾಹಿರ ಕೃತಿಯಾಗಿದೆ. (ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ಈ ರೀತಿಯ ಸಭೆ ಅನೇಕ ಸ್ಥಳಗಳಲ್ಲಿ ತೆಗೆದುಕೊಳ್ಳುತ್ತಿದೆ. ಈ ಸಭೆಯಿಂದ ಎಲ್ಲಿಯೂ ಸಂವಿಧಾನವಿರೋಧಿ ಕೃತಿಗಳು ನಡೆದಿಲ್ಲ. ಹೀಗೆ ಇರುವಾಗ ಕೇವಲ ಹಿಂದೂದ್ವೇಷಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ, ಇದು ಸ್ಪಷ್ಟವಾಗುತ್ತದೆ ! – ಸಂಪಾದಕರು) ಆದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಹಿಂದೂ ಜನಜಾಗೃತಿ ಸಭೆ ಯೋಜನೆ ಮಾಡುತ್ತಿರುವ ಸನಾತನ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಂಘಟಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತಿದ್ದಾರೆ.

೨. ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಭಾರತದಲ್ಲಿ ಈ ರೀತಿಯ ದುಷ್ಕೃತ್ಯ ನಡೆಸುವವರ ವಿರುದ್ಧ ರಾಷ್ಟ್ರೀಯ ತನಿಖಾ ದಳವೂ ಸಹ ಹಸ್ತಕ್ಷೇಪ ಮಾಡಿ ಸನಾತನ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದೇಶದ್ರೋಹದ ದೂರು, ಹಿಂದೂ ರಾಷ್ಟ್ರಸ್ಥ ಸ್ಥಾಪನೆಯ ಹಿಂದೆ ಇರುವ ವ್ಯಕ್ತಿಗಳನ್ನು ಹುಡುಕಿ, ದೇಶದಲ್ಲಿ ಶಾಂತತೆ ಕಾಪಾಡಬೇಕು ಎಂದು ವಿನಂತಿಸುತ್ತೇನೆ. (ಬಿಹಾರದಲ್ಲಿ ಪ್ರಧಾನ ಮಂತ್ರಿ ಮೋದಿ ಇವರ ಹತ್ಯೆ ನಡೆಸಲು ಪ್ರಯತ್ನಿಸಿರುವ ಬಾಂಬ್ ಸ್ಫೋಟ ದ ಪ್ರಕರಣದಲ್ಲಿ ಸ್ವತಃ ರಿಯಾಝ ಇವರನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ಮಾಡಿದ್ದಾರೆ. ಇಂತಹವರು ಈ ರೀತಿಯ ಆರೋಪ ಮಾಡುವುದು ಹಾಸ್ಯಸ್ಪದವಾಗಿದೆ ! – ಸಂಪಾದಕರು)

೩. ಜಿಲ್ಲಾಡಳಿತ ಮತ್ತು ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಎಸ್.ಡಿ.ಪಿ.ಐ. ರಸ್ತೆಗೆಳಿದು ಪ್ರತಿಭಟನೆ ಮಾಡುವರು. ನಾವು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ. ಎಲ್ಲಾ ಧರ್ಮದ ಜನರು ಒಟ್ಟಾಗಿ ಇರುವುದು, ಇದೇ ಈ ದೇಶದ ಸೌಂದರ್ಯವಾಗಿದೆ. (ಹಾಗಿದ್ದರೆ ಮೊದಲು ಫರಂಗಿಪೇಟೆ ಇವರನ್ನು ಜೈಲಿಗಟ್ಟಬೇಕು; ಕಾರಣ ಅವರು ಯಾವ ಪಕ್ಷಕ್ಕೆ ಸಂಬಂಧಪಟ್ಟವರಿದ್ದಾರೆ, ಅದು ನಿಷೇಧಿತ ಪಿ.ಎಫ್.ಐ. ಜೊತೆ ಸಂಬಂಧ ಇದೆ ಮತ್ತು ಈ ಸಂಘಟನೆ ಭಾರತವನ್ನು ಇಸ್ಲಾಮಿ ದೇಶ ಮಾಡಲು ಬಯಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುವುದು, ಇದು ಸಂವಿಧಾನದಿಂದ ನೀಡಿರುವ ಅಧಿಕಾರವಾಗಿದೆ, ಅದಕ್ಕೆ ಕಾನೂನು ದ್ರೋಹ ಎನ್ನುವುದೇ ಕಾನೂನ ದ್ರೋಹ ಆಗಿದೆ !