ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ ಶರೀಫರು ಹೋಳಿಯ ಶುಭಾಶಯಗಳನ್ನು ನೀಡುವಾಗ ಹಣತೆಯ ಚಿತ್ರ ಟ್ವೀಟ !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ ಶರೀಫ

ಲಂಡನ (ಬ್ರಿಟನ) – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ ಶರೀಫರು ಟ್ವೀಟ ಮಾಡಿ ಹೋಳಿಯ ಶುಭಾಶಯಗಳನ್ನು ನೀಡಿದ್ದರು. ಅವರು ‘ಹ್ಯಾಪಿ ಹೋಲಿ’ ಎಂದು ಬರೆದಿದ್ದರು. ಅದರೊಂದಿಗೆ ಹಣತೆಯ ಚಿತ್ರವನ್ನು ಪೋಸ್ಟ ಮಾಡಿದ್ದಾರೆ. ‘ದೀಪಾವಳಿಯ ಸಮಯದಲ್ಲಿ ಹಣತೆಯನ್ನು ಹಚ್ಚಲಾಗುತ್ತದೆ, ಹೋಳಿಯ ಸಮಯದಲ್ಲಿ ಅಲ್ಲ’, ಎನ್ನುವ ಕಾರಣದಿಂದ ಅವರನ್ನು ಟೀಕಿಸಲಾಗುತ್ತಿದೆ.

ಸಿಂಧ್ ನ ಮುಖ್ಯಮಂತ್ರಿಗಳಿಂದಲೂ ತಪ್ಪು

ಈ ಹಿಂದೆ 2021 ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆಗಿನ ಮುಖ್ಯಮಂತ್ರಿ ಸಯ್ಯದ ಮುರಾದ ಅಲಿ ಶಾಹ ಇವರು ದೀಪಾವಳಿಯ ನಿಮಿತ್ತದಿಂದ ಹೋಳಿಯ ಶುಭಾಶಯಗಳನ್ನು ನೀಡಿದ್ದರು. ಆಗಲೂ ಅವರನ್ನು ಪಾಕಿಸ್ತಾನಿ ಜನರು ಟೀಕಿಸಿದ್ದರು. ತದನಂತರ ಅವರು ಆ ಟ್ವೀಟ್ ತೆಗೆದು ಹಾಕಿದ್ದರು.