ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸಿರುವುದು ಅನಿವಾರ್ಯ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮೇಲೆ ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ)

ಮುಜಫ್ಫರಾಬಾದ – ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರಕಾರದಿಂದ ಇತ್ತೀಚೆಗೆ ಜಾರಿಗೊಳಿಸಿದ ಒಂದು ಆದೇಶದಲ್ಲಿ ಇಲ್ಲಿಯ ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸುವುದು ಅನಿವಾರ್ಯಮಾಡಿದೆ. ಸರಕಾರದ ಈ ಆದೇಶದ ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಎಚ್ಚರಿಕೆ ನೀಡಿದೆ. ಈ ಆದೇಶದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ನಡೆಯುತ್ತಿವೆ. ಕೆಲವರು ಈ ಆದೇಶವನ್ನು ಅಪಘಾನಿಸ್ತಾನದ ಫತ್ವಾಗೆ ಹೋಲಿಸಿದ್ದಾರೆ. ಅಪಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪಡೆಯಲು ನಿಷೇಧ ಹೇರುವ ಫತ್ವಾ ತೆಗೆದಿದ್ದಾರೆ.