ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಆಗುತ್ತಿರುವ ವಿರೋಧ ಮತ್ತು ಶಸ್ತ್ರರೂಪಿ ಶುದ್ಧೀಕರಣ ಚಳುವಳಿ

ಶ್ರೀ. ದುರ್ಗೇಶ ಪರೂಳಕರ

ಸ್ವಾತಂತ್ರ್ಯವೀರ ಸಾವರಕರರು ಶುದ್ಧೀಕರಣ ಚಳುವಳಿಗೆ ತುಂಬಾ ಒತ್ತು ನೀಡಿದ್ದರು. ಮುಸಲ್ಮಾನ ಮತ್ತು ಕ್ರೈಸ್ತ ಧರ್ಮದ ಧರ್ಮಪ್ರಚಾರಕರು ಹಿಂದೂಗಳನ್ನು ದೊಡ್ಡಪ್ರಮಾಣದಲ್ಲಿ ಮತಾಂತರಿಸಿ ಹಿಂದೂಗಳ ಸಂಖ್ಯಾಬಲ ಕುಗ್ಗಿಸಲು ಪ್ರಯತ್ನಿಸುತ್ತಿದ್ದರು.ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಲು ಮತ್ತು ಪೂರ್ಣ ಜಗತ್ತನ್ನು ಇಸ್ಲಾಂಮಯ ಮತ್ತು ಕ್ರೈಸ್ತಮಯಗೊಳಿಸಲು ಹಿಂದೂಗಳನ್ನು ಮತಾಂತರಿಸಲಾಗುತ್ತದೆ. ಅವರ ಈ ಕುಕೃತ್ಯವನ್ನು ತಡೆಗಟ್ಟಲು ಸಾವರಕರರು ಶುದ್ಧೀಕರಣ ಚಳುವಳಿಯನ್ನು ಆರಂಭಿಸಿ ದರು. ಈ ಚಳುವಳಿಯೆಂದರೆ ಹಿಂದೂಗಳ ಸಂಖ್ಯಾಬಲವನ್ನು ಉಳಿಸಿಕೊಳ್ಳಲು ಉಪಯೋಗಿಸಿದ ಒಂದು ದೊಡ್ಡ ಶಸ್ತ್ರವಾಗಿದೆ. ಸ್ವಾಮಿ ಶ್ರದ್ಧಾನಂದರು ಇದನ್ನೇ ಉಪಯೋಗಿಸಿ ಹಿಂದೂಗಳ ಸಂಖ್ಯಾಬಲ ಕಡಿಮೆಯಾಗದಂತೆ ಕಾಳಜಿ ವಹಿಸಿದರು. ಅದರ ಪರಿಣಾಮದಿಂದ ಅವರ ಹತ್ಯೆಯಾಯಿತು.

೧. ಮತಾಂತರವಾದವರನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿದರೆ ಅದನ್ನು ಅಪರಾಧವೆಂದು ನಿರ್ಧರಿಸಲಾಗುತ್ತದೆ

ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳನ್ನು ಮೋಸದಿಂದ, ಆಮಿಷ ತೋರಿಸಿ, ಪ್ರಸಂಗ ಬಂದಾಗ ಬಲವಂತವಾಗಿ ಮತ್ತು ಹಿಂಸೆಕೊಟ್ಟು ಮತಾಂತರಿಸಿದರು. ಜಗತ್ತಿನ ದೃಷ್ಟಿಯಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರ ಈ ಕುಕೃತ್ಯವನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗಿದೆ. ‘ಹಿಂದೂಗಳು ಮತಾಂತರವಾದ ತಮ್ಮ ಬಾಂಧವರನ್ನು ಪುನಃ ಶುದ್ಧಗೊಳಿಸಿ ತಮ್ಮ ಧರ್ಮಕ್ಕೆ ಸೇರಿಸಿ ಕೊಂಡರೆ ಮಾತ್ರ ಅದು ಅಪರಾಧವಾಗುತ್ತದೆ, ಇಂತಹ ವಿರುದ್ಧ ನ್ಯಾಯ ಇಂದು ಜಗತ್ತಿನಲ್ಲಿ ಪ್ರತಿಷ್ಠೆಯನ್ನು ಪಡೆದಿದೆ.

ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹಿಂದೂಗಳನ್ನು ಎಲ್ಲ ದಿಕ್ಕುಗಳಿಂದ ಇಕ್ಕಟ್ಟಿಗೆ ಸಿಲುಕಿಸುವುದು, ಅವರ ಮೇಲೆ ಅನ್ಯಾಯ ಮಾಡುವುದು, ಅವರ ಶ್ರದ್ಧಾಸ್ಥಾನಗಳ ಮೇಲೆ ಹಲ್ಲೆ ಗಳನ್ನು ಮಾಡುವುದು ಮತ್ತು ಅವರು ಅದನ್ನು ವಿರೋಧಿಸಿ ತಮ್ಮನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ, ‘ಹಿಂದೂಗಳು ಅಸಹಿಷ್ಣುಗಳಾಗಿದ್ದಾರೆ ಎಂದು ಬೊಬ್ಬೆ ಹೊಡೆಯುವುದು ಮತ್ತು ಅದೇ ನ್ಯಾಯವಾಗಿದೆ ಎಂದು ನಿರ್ಧರಿಸುವುದು. ಇದು ಹಿಂದೂಗಳನ್ನು ನಾಶ ಮಾಡುವ ಷಡ್ಯಂತ್ರವಾಗಿದೆ, ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ನಮ್ಮ ದೇಶದಲ್ಲಿನ ನಮ್ಮ ಹಿಂದೂ ಬಾಂಧವರೇ ನಮ್ಮ ವಿರುದ್ಧ ವಾದ ಮಾಡುತ್ತಾರೆ. ಇದು ನಿಜವಾದ ದುರಂತವಾಗಿದೆ.

೨. ಉತ್ತರಾಖಂಡದಲ್ಲಿ ಕ್ರೈಸ್ತರಿಂದ ನಡೆಯುತ್ತಿರುವ ಮತಾಂತರ ಮತ್ತು ಮುಖ್ಯಮಂತ್ರಿಗಳ ಅವಲೋಕನ

೨೪ ಡಿಸೆಂಬರ್ ೨೦೨೨ ರಂದು ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಛಿವಾಲಾ ಊರಲ್ಲಿ ಕ್ರೈಸ್ತರು ೩೫ ಹಿಂದೂಗಳನ್ನು ಮತಾಂತರಿಸಿದರು, ಅದಕ್ಕಾಗಿ ಒಂದು ಪ್ರಾರ್ಥನಾಸಭೆಯನ್ನು ಆಯೋಜಿಸಲಾಗಿತ್ತು. ಈ ಪ್ರಾರ್ಥನಾಸಭೆಗೆ ಮಸೂರಿಯ ಚರ್ಚ್‌ನ ಪಾದ್ರಿ ಜೆಜಾರಸ್ ಕೊರ್ನಿಲಿಯಸ್ ಮತ್ತು ಅವರ ಪತ್ನಿ ಪುಷ್ಪಾ ಕೊರ್ನಿಲಿಯಸ್ ಇವರನ್ನು ಆಮಂತ್ರಿಸಲಾಗಿತ್ತು. ಈ ದಂಪತಿ ಕಳೆದ ಅನೇಕ ವರ್ಷಗಳಿಂದ ಮತಾಂತರವನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಈಗ ಅವರ ತನಿಖೆಯನ್ನು ಮಾಡುತ್ತಿದ್ದಾರೆ. ಇಂತಹ ಪ್ರಾರ್ಥನಾಸಭೆಗಳನ್ನು ಆಯೋಜಿಸಿ ಸುತ್ತಮುತ್ತಲಿನ ಹಳ್ಳಿಗಳಿಂದ ಹಿಂದೂಗಳನ್ನು ಅಲ್ಲಿ ಕರೆಯಲಾಗುತ್ತದೆ. ವಿವಿಧ ಆಮಿಷಗಳನ್ನೊಡ್ಡಿ ಅವರಿಗೆ ಕ್ರೈಸ್ತ ಪಂಥವನ್ನು ಸ್ವೀಕರಿಸಲು ಪ್ರೋತ್ಸಾಹಿಸಲಾಗುತ್ತದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮೀ ಇವರು ಪೊಲೀಸ್ ಮಹಾನಿರ್ದೇಶಕರಿಗೆ ಈ ವಿಷಯದಲ್ಲಿ ಗಮನ ಹರಿಸಿ ಘಟನೆಯನ್ನು ಗಾಂಭೀರ್ಯದಿಂದ ನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ .

೩. ಇತರ ಪಂಥೀಯರ ಇಸ್ಲಾಮೀ ಮತ್ತು ಕ್ರೈಸ್ತ ರಾಷ್ಟ್ರದ ಕನಸು ಮಣ್ಣುಪಾಲಾಗಿದೆ

ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಹಿಂದೂಗಳ ಮತಾಂತರದ ಘಟನೆಗಳಿಗೆ ಕಡಿವಾಣ ಹಾಕಲು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಮತಾಂತರವಾದ ನಮ್ಮ ಬಾಂಧವ ರನ್ನು ಶುದ್ಧೀಕರಿಸಿ ಪುನಃ ಸ್ವಧರ್ಮಕ್ಕೆ ಸ್ವೀಕರಿಸಿರುವುದು ತಿಳಿದಾಗ ಹಿಂದೂಗಳ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುವವರೆಲ್ಲರಿಗೂ ತುಂಬಾ ಕೋಪ ಬಂದಿತು, ಅವರ ಮೇಲೆ ಆಕಾಶವೇ ಕಳಚಿ ಬಿದ್ದಿತು. ಮುಸಲ್ಮಾನ ಮತ್ತು ಕ್ರೈಸ್ತ ಈ ಎರಡೂ ಧರ್ಮಗಳು (ಪಂಥಗಳು) ಒಂದೇ ಸಮಯದಲ್ಲಿ ಅಪಾಯಕ್ಕೀಡಾದವು. ಸಹಿಷ್ಣುತೆ ನಾಶವಾಯಿತು. ‘ಸಂವಿಧಾನಕ್ಕೆ ತಿಲಾಂಜಲಿಯನ್ನು ನೀಡಲಾಯಿತು, ಎಂದು ಎಲ್ಲರಿಗೂ ಅನಿಸತೊಡಗಿತು; ಏಕೆಂದರೆ ಹಿಂದೂಗಳು ಜಾಗೃತ ರಾಗಿದ್ದಾರೆ. ಅವರು ಈಗ ಅನ್ಯಾಯವನ್ನು ಸಹಿಸುವುದಿಲ್ಲ. ಹಿಂದೂಗಳಲ್ಲಿನ ಪ್ರತಿಕಾರಶಕ್ತಿ ಕಾರ್ಯನಿರತವಾಗಿದೆ. ಇದರಿಂದಲೇ ಈಗ ಎಲ್ಲರಿಗೂ ತೊಂದರೆಯಾಗುತ್ತಿದೆ; ಏಕೆಂದರೆ ಹಿಂದೂಸ್ಥಾನವನ್ನು ಇಸ್ಲಾಮ್ ಮತ್ತು ಕ್ರೈಸ್ತ ರಾಷ್ಟ್ರವನ್ನಾಗಿ ಪರಿವರ್ತಿಸುವ ಅವರ ಕನಸು ನಾಶವಾಗಿದೆ.

೪. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ವಿರೋಧಿಸುವುದರ ಹಿಂದಿನ ಕಾರಣ

ಕ್ರೈಸ್ತರ ಮತ್ತು ಮುಸಲ್ಮಾನರ ಶ್ರದ್ಧಾಸ್ಥಾನದ ಮೇಲೆ ಆಘಾತ ಮಾಡಿದರೆ, ಅದು ಧರ್ಮನಿಂದನೆ ಆಗುತ್ತದೆ. ಅದಕ್ಕೆ ಮೃತ್ಯುದಂಡವೇ ಏಕೈಕ ಶಿಕ್ಷೆಯಿದೆ; ಆದರೆ ಹಿಂದೂಗಳ ಶ್ರದ್ಧಾಸ್ಥಾನಗಳಿಗೆ ಆಘಾತ ಮಾಡಿದರೆ ಅದು ವೈಜ್ಞಾನಿಕ ದೃಷ್ಟಿ ಆಗುತ್ತದೆ. ಅದು ಧರ್ಮನಿಂದನೆ ಆಗುವುದಿಲ್ಲ, ಹೀಗೆ ಘೋಷಣೆ ಮಾಡುವವರಿಗೆ ಹಿಂದೂಗಳು ತಕ್ಕ ಪ್ರತ್ಯುತ್ತರ ಕೊಡುತ್ತಿರುವುದರಿಂದ ‘ಈ ದೇಶದಲ್ಲಿನ ಕ್ರೈಸ್ತ ಮತ್ತು ಮುಸಲ್ಮಾನರು ಹೆದರಿದ್ದಾರೆ, ಎಂಬ ವದಂತಿಯನ್ನು ಹರಡಲಾಗುತ್ತದೆ. ಅದು ವದಂತಿ ಅಲ್ಲ ಸತ್ಯವಾಗಿದೆ; ಏಕೆಂದರೆ ಹಿಂದೂ ಧರ್ಮವನ್ನು ನಾಶಗೊಳಿಸುವ ಅವರ ಕಾರ್ಯಕ್ಕೆ ದೊಡ್ಡ ಅಡಚಣೆ ನಿರ್ಮಾಣವಾಗಿದೆ. ಈಗ ಅವರಿಗೆ ಅವರ ಧ್ಯೇಯವನ್ನು ತಲುಪಲು ಸಾಧ್ಯವಾಗಲಿಕ್ಕಿಲ್ಲ ಎಂಬ ಭಯ ಕಾಡುತ್ತಿದೆ; ಆದ್ದರಿಂದಲೆ ‘ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ವಿರೋಧಿಸುವ ಯೋಜನೆ ತಯಾರಾಗುತ್ತಿದೆ, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿಲ್ಲ್ಲ.

– ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರ ಮತ್ತು ಲೇಖಕರು, ಡೊಂಬಿವಿಲಿ, ಮಹಾರಾಷ್ಟ್ರ. (೨೫.೧.೨೦೨೩)