ಸನಾತನದ ‘ಮನೆಮನೆಯಲ್ಲಿ ಕೈತೋಟ ಅಭಿಯಾನ
ಮನೆಯಲ್ಲಿ (ಫ್ಲಾಟ್‌ನಲ್ಲಿ) ಬೇರೆ ಬೇರೆ ಕೋಣೆಗಳ ಕಿಟಕಿ ಗಳಲ್ಲಿ ದಿನವಿಡಿ ಬಿಸಿಲು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಬರುತ್ತದೆ. ಬೇರೆ ಬೇರೆ ಸಸಿಗಳಿಗೆ ಬೇಕಾಗುವ ಬಿಸಿಲಿನ ಅಗತ್ಯವನ್ನು ಗಮನದಲ್ಲಿಟ್ಟು ಕೊಂಡು ಕುಂಡಗಳ ರಚನೆ ಮಾಡಿದರೆ ಅದು ಹೆಚ್ಚು ಲಾಭದಾಯಕವಾಗುವುದು.
ಕಡಿಮೆ ಬಿಸಿಲಿನ ಆವಶ್ಯಕವಿರುವ ಸಸಿಗಳನ್ನು ಉರಿ ಬಿಸಿಲಿನಲ್ಲಿಟ್ಟರೆ ಬಾಡಿಹೋಗುತ್ತವೆ. ಯಾವ ತರಕಾರಿ ಸೊಪ್ಪುಗಳಿಗೆ ಎಷ್ಟು ಬಿಸಿಲಿನ ಅಗತ್ಯವಿದೆ, ಎಂಬುದರ ಬಗ್ಗೆ ವಿವರವಾದ ಲೇಖನವು ಸನಾತನದ ಜಾಲತಾಣದಲ್ಲಿ ಲಭ್ಯವಿದೆ. ಅದರ ಸಂಪರ್ಕಕೊಂಡಿ (ಲಿಂಕ್) ಕೆಳಗೆ ಕೊಡಲಾಗಿದೆ.’
– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೊಂಡಾ, ಗೋವಾ. (೩೦.೧.೨೦೨೩)
ತರಕಾರಿಗಳಿಗೆ ಬಿಸಿಲಿನ ಅಗತ್ಯವನ್ನು ತಿಳಿದುಕೊಳ್ಳಲು ಸಂಪರ್ಕಕೊಂಡಿ (ಲಿಂಕ್) : www.sanatan.org/kannada/94587.html
ತಮ್ಮ ಕೈದೋಟದ ಸಂದರ್ಭದಲ್ಲಿನ ಅನುಭವವನ್ನು ನಮಗೆ ತಿಳಿಸಿ !
ವಿ-ಅಂಚೆ : [email protected]