ಭಾರತದಲ್ಲಿರುವ ಸ್ವಿಟ್ಝರಲ್ಯಾಂಡ ರಾಯಭಾರಿಗೆ ತಿಳುವಳಿಕೆ ನೀಡಲಾಯಿತು !

ಜಿನೇವಾದಲ್ಲಿ ಭಾರತವಿರೋಧಿ ಫ್ಲೆಕ್ಸ್ ಗಳ ಪ್ರಕರಣ

ನವದೆಹಲಿ – ಸ್ವಿಟ್ಝರಲ್ಯಾಂಡ ರಾಜಧಾನಿ ಜಿನೇವಾದಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಕಚೇರಿಯ ಹೊರಗೆ ಭಾರತ ವಿರೋಧಿ ಫ್ಲೆಕ್ಸ್ ಗಳನ್ನು ಹಾಕಿರುವ ಪ್ರಕರಣದಲ್ಲಿ ಸ್ವಿಟ್ಝರಲ್ಯಾಂಡನ ಭಾರತದಲ್ಲಿರುವ ರಾಯಭಾರಿ ರಾಲ್ಫ ಹೆಕನರ ಇವರಿಗೆ ವಿದೇಶ ಸಚಿವಾಲಯಕ್ಕೆ ಕರೆಸಿ ಅವರಿಗೆ ತಿಳುವಳಿಕೆ ಹೇಳುತ್ತಾ, ವಿರೋಧವನ್ನು ವ್ಯಕ್ತಪಡಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ರಾಲ್ಫ ಹೆಕನರ ಇವರು ಮಾತನಾಡುತ್ತಾ ‘ಭಾರತದ ನಿಲುವು ಸ್ವಿಟ್ಝರಲ್ಯಾಂಡ ಸರಕಾರಕ್ಕೆ ತಿಳಿಸಲಾಗುವುದು’, ಎಂದು ಆಶ್ವಾಸನೆಯನ್ನು ನೀಡಿದ್ದಾರೆಂದೂ ಹೇಳಲಾಗಿದೆ. ಈ ಕುರಿತು ಸರಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಸಂಪಾದಕೀಯ ನಿಲುವು

ಈ ಹಿಂದೆ ಭಾರತದಲ್ಲಿ ಹೀಗೆ ಎಂದಿಗೂ ಆಗುತ್ತಿರಲಿಲ್ಲ. ಇದು ಒಳ್ಳೆಯ ಲಕ್ಷಣವಾಗಿದೆ. ಇದೇ ರೀತಿ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುವ ಹಲ್ಲೆಯ ಸಂದರ್ಭದಲ್ಲಿಯೂ ಇಂತಹ ಅಥವಾ ಅದಕ್ಕಿಂತ ಕಠಿಣ ಕೃತಿಯನ್ನು ಮಾಡಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಾಗಿದೆ !