ಸಪ್ತರ್ಷಿಗಳ ಆಜ್ಞೆಯಂತೆ ಸಾಧಕರು ಸಂಚಾರಿವಾಣಿಯಲ್ಲಿ ಮಾತನಾಡುವಾಗ ‘ನಮಸ್ಕಾರದ ಬದಲು ‘ಹರಿ ಓಂ ಎಂದು ಹೇಳಿ ಮಾತನ್ನು ಆರಂಭಿಸಿ !

ಎಲ್ಲ ಸಾಧಕರಿಗೆ ಮಹತ್ವದ ಸೂಚನೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸಂಚಾರವಾಣಿಯಲ್ಲಿ ಮಾತ ನಾಡುವಾಗ ಸಾಧಕರು ‘ನಮಸ್ಕಾರ ಈ ಮಾತಿನಿಂದ ಮಾತನಾಡಲು ಆರಂಭಿಸುತ್ತಾರೆ. ಇನ್ನು ಮುಂದೆ ಸಪ್ತರ್ಷಿಗಳ ಆಜ್ಞೆಯಂತೆ ಸಂಚಾರಿವಾಣಿಯಲ್ಲಿ ಮಾತನಾಡುವಾಗ ಎಲ್ಲ ಸಾಧಕರು ‘ಹರಿ ಓಂ ಎಂದು ಹೇಳಿ ಪರಸ್ಪರ ಮಾತನ್ನು ಆರಂಭಿಸಿರಿ. ಸಾಧಕರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿ ಅವರೊಂದಿಗೆ ಮಾತನಾಡುವಾಗ ಮಾತ್ರ ‘ನಮಸ್ಕಾರ ಎಂದು ಹೇಳಬೇಕು.

ಪ.ಪೂ. ಭಕ್ತರಾಜ ಮಹಾರಾಜರು ‘ಹರಿ ಓಂ ತತ್ಸತ್ ಈ ಜಪವನ್ನು ಮಾಡುತ್ತಿದ್ದರು. ‘ಹರಿ ಓಂ ಎಂದು ಹೇಳಿದ್ದರಿಂದ ಎಲ್ಲ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಸ್ಮರಣೆಯಾಗುವುದು, ಅದೇರೀತಿ ಅವರ ಆಶೀರ್ವಾದ ಹಾಗೂ ಚೈತನ್ಯವೂ ಸಿಗಲಿದೆ.

ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳನ್ನು ಪ್ರತ್ಯಕ್ಷ ಭೇಟಿಯಾದಾಗ, ಅದೇರೀತಿ ಅವರೊಂದಿಗೆ ಸಂಚಾರವಾಣಿಯಲ್ಲಿ ಮಾತನಾಡುವಾಗ ಎಂದಿನಂತೆ ‘ನಮಸ್ಕಾರ ಎಂದು ಹೇಳಿ ಮಾತನಾಡಲು ಆರಂಭಿಸಿರಿ.

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೩.೨೦೨೦)