ರಾಮನಾಥಿ ಆಶ್ರಮಕ್ಕೆ ಬಂದಾಗ ಪರಾತ್ಪರ ಗುರು ಡಾ. ಆಠವಲೆ ಇವರ ದರ್ಶನವಾಗಬೇಕೆಂಬ ತಳಮಳ ಇರುವುದರಿಂದ ಚರಾಚರಗಳಲ್ಲಿ ಅವರನ್ನು ನೋಡಲು ಪ್ರಯತ್ನಿಸುವಾಗ ಸಾಧಕನು ಅನುಭವಿಸಿದ ಭಾವಸ್ಥಿತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಎಲ್ಲೆಡೆಯೂ ಗುರುಗಳ ಸಮಷ್ಟಿ ರೂಪವಿರುತ್ತದೆ ಹೀಗೆ ಭಾವವಿಡಬೇಕೆಂದು ಅನೇಕರಿಗೆ ಬೋಧನೆ ಮಾಡಲಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಆ ರೀತಿ ಭಾವವಿಡಲು ಮತ್ತು ಅನುಭವಿಸಲು ಸಾಧ್ಯವಾಗುತ್ತದೆ. ದೆಹಲಿ ಸೇವಾಕೇಂದ್ರಕ್ಕೆ ಹೋಗಿರುವ ಶ್ರೀ. ಅಶೋಕ ಶಾಂತರಾಮ ದಹಾತೊಂಡೆ ಇವರು ನನಗೆ ತಿಳಿದಿರುವವರ ಪೈಕಿ ಅಂತಹ ಏಕೈಕ ಸಾಧಕರಾಗಿದ್ದಾರೆ. ಅವರು ಇದನ್ನು ಹೇಗೆ ಸಾಧಿಸಿದರು. ಅವರು ಅದಕ್ಕಾಗಿ ಏನು ಸಾಧನೆ ಮಾಡಿದರು ಮುಂತಾದ ಮಾಹಿತಿಗಳನ್ನು ಅವರು ಈ ಲೇಖನದಲ್ಲಿ ನೀಡಿದ್ದಾರೆ. ಈ ಅನುಭೂತಿಯ ಬಗ್ಗೆ ಅವರನ್ನು ಶ್ಲಾಘಿಸಿದ್ದಷ್ಟು ಕಡಿಮೆ ಇದೆ. ಅವರ ಈ ಅನುಭೂತಿ ಕೆಲವು ಸಾಧಕರಿಗಾದರೂ ಬರಲಿ, ಎಂಬುದಕ್ಕಾಗಿ ಸಾಧಕರಿಗೆ ಮಾರ್ಗದರ್ಶನ ಮಾಡಬೇಕು, ಅದರಿಂದಾಗಿ ಅವರ ಸಮಷ್ಟಿ ಸಾಧನೆಯೂ ವೇಗವಾಗಿ ಆಗುವುದು ಮತ್ತು ಅವರ ಆಧ್ಯಾತ್ಮಿಕ ಪ್ರಗತಿ ಕೂಡ ಬೇಗನೆ ಆಗುವುದು.

(ಪರಾತ್ಪರ ಗುರು) ಡಾ.ಆಠವಲೆ (೨೪.೩.೨೦೨೨)

ಶ್ರೀ. ಅಶೋಕ ದಹಾತೊಂಡೆ

೧. ಬಿಸಿಲಿನಲ್ಲಿ ಕುಳಿತು ನಾಮಜಪ ಮಾಡುವಾಗ ‘ಸೂರ್ಯನಾರಾಯಣನು ಪರಾತ್ಪರ ಗುರು ಡಾಕ್ಟರರ ಸಮಷ್ಟಿ ರೂಪವಾಗಿದ್ದಾನೆ, ಎಂಬ ಭಾವವಿಡುವುದು

೧ ಅ. ‘ಚರಾಚರಗಳಲ್ಲಿ ಗುರುದೇವರಿದ್ದಾರೆ, ಹೀಗೆ ಭಾವವಿಟ್ಟು ಬಿಸಿಲಿನ ಉಪಾಯ ಮಾಡುವಾಗ ಸೂರ್ಯನಾರಾಯಣನ ಸ್ಥಾನದಲ್ಲಿ ಪರಾತ್ಪರ ಗುರುದೇವರನ್ನು ಅನುಭವಿಸುವುದು ಮತ್ತು ಅದರಿಂದ ಆನಂದ ಸಿಗುವುದು : ‘ಭೂವೈಕುಂಠ ಸ್ವರೂಪ ರಾಮನಾಥಿ ಆಶ್ರಮಕ್ಕೆ ಬಂದು ನನಗೆ ೧ ತಿಂಗಳಾಗಿತ್ತು. ಆದರೆ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ದರ್ಶನವಾಗಿರಲಿಲ್ಲ. ನನಗೆ ವೈದೆ (ಕು.) ಅಪರ್ಣಾ ಮಹಾಂಗಡೆ ಇವರು ಪ್ರತಿದಿನ ಬಿಸಿಲಿನ ಉಪಾಯ (ಬಿಸಿಲಿನಲ್ಲಿ ಕುಳಿತುಕೊಳ್ಳುವುದು) ಮಾಡಲು ಹೇಳಿದ್ದರು. ನಾನು ರಾಮನಾಥಿ ಆಶ್ರಮಕ್ಕೆ ಬಂದಾಗಿನಿಂದ ಚರಾಚರಗಳಲ್ಲಿ ಗುರುದೇವರು ಇದ್ದಾರೆ, ಹೀಗೆ ಭಾವವಿಟ್ಟು ಬೆಳಗ್ಗೆ ಬಿಸಿಲಿನಲ್ಲಿ ಕುಳಿತು ನಾಮಜಪ ಉಪಾಯ ಮಾಡುತ್ತಿದ್ದೆ. ಆ ಸಮಯದಲ್ಲಿ ನಾನು ಸೂರ್ಯನಾರಾಯಣನ ಸ್ಥಾನದಲ್ಲಿ ಶ್ರೀ ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರುದೇವರನ್ನು ಅನುಭವಿಸುತ್ತಿದ್ದೆ. ಆಗ ಪರಾತ್ಪರ ಗುರುದೇವರ ದರ್ಶನವಾದಂತೆ ಆನಂದ ಸಿಗುತ್ತಿತ್ತು, ನಾನು ಹಾಗೆ ಆನಂದ ಅನುಭವಿಸುತ್ತಿದ್ದೆನು.

೧ ಆ. ಸೂರ್ಯನಾರಾಯಣನ ರೂಪದಲ್ಲಿ ಪರಾತ್ಪರ ಗುರುದೇವರ ದರ್ಶನವಾಗಿರುವುದರಿಂದ ದಿನವಿಡೀ ಸೇವೆಯಲ್ಲಿ ಆನಂದ ಮತ್ತು ಉತ್ಸಾಹವೆನಿಸುತ್ತಿತ್ತು : ಸೂರ್ಯನಾರಾಯಣನು ನಮ್ಮ ಗುರುದೇವರ ಸಮಷ್ಟಿ ರೂಪವಾಗಿದ್ದಾನೆ. ಅವರು ಈ ರೂಪದಲ್ಲಿ ಎಲ್ಲಾ ಸ್ಥಳದಲ್ಲಿರುವ ಸಾಧಕರಿಗೆ ದಿವ್ಯದರ್ಶನ ನೀಡಿ ಸಾಧಕರನ್ನು ಧನ್ಯ ಧನ್ಯಗೊಳಿಸುತ್ತಾರೆ, ಎಂಬ ಭಾವವಿಟ್ಟು ಬಿಸಿಲಿನ ಉಪಾಯ ಮಾಡಿದ ಮೇಲೆ ಸೂರ್ಯನಾರಾಯಣನ ಸ್ಥಾನದಲ್ಲಿ ನನಗೆ ಪ್ರತ್ಯಕ್ಷ ಗುರುದೇವರ ದರ್ಶನವಾಗಿ ಮನಸ್ಸಿನಲ್ಲಿ ಆನಂದವಾಗುತ್ತಿತ್ತು. ಆದ್ದರಿಂದ ನನಗೆ ದಿನವಿಡೀ ಸೇವೆಯಲ್ಲಿ ಆನಂದ ಮತ್ತು ಉತ್ಸಾಹ ಅನಿಸುತ್ತಿತ್ತು.

೨. ಪ್ರತಿಯೊಬ್ಬ ಸಾಧಕನು ಪರಾತ್ಪರ ಗುರು ಡಾಕ್ಟರರ ಸಮಷ್ಟಿ ರೂಪವಾಗಿರುವುದು, ಹೀಗೆ ಭಾವವಿಟ್ಟಿರುವುದರಿಂದ ಗುರುದೇವರು ಸತತ ಜೊತೆಗಿದ್ದಾರೆ, ಎಂದೆನಿಸಿ ಅವರನ್ನು ಪ್ರತ್ಯಕ್ಷ ಭೇಟಿ ಮಾಡುವ ವಿಚಾರ ಮತ್ತು ಆಸೆ ಕಡಿಮೆ ಆಗಿರುವುದು ಗಮನಕ್ಕೆ ಬಂದಿತು.

ಗುರುದೇವರು ಕಲಿಸಿದ ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ, ಈ ಆಧ್ಯಾತ್ಮಿಕ ತತ್ತ್ವವನ್ನು ಅನುಭವಿಸಿರುವುದರಿಂದ ನನ್ನಿಂದ ಪ್ರತಿಯೊಂದು ಸ್ಥಳದಲ್ಲಿ ಪರಾತ್ಪರ ಗುರುದೇವರನ್ನು ಅನುಭವಿಸುವ ಪ್ರಯತ್ನವಾಗುತ್ತಿತ್ತು. ನಾನು ಎಲ್ಲ ದೇವರು, ಸಾಧಕರು ಮತ್ತು ನಿಸರ್ಗದಲ್ಲಿ ಗುರುದೇವರನ್ನು ನೋಡುವುದು ಮತ್ತು ಅನುಭವಿಸುವುದು, ಹೀಗೆ ಪ್ರಯತ್ನಿಸುತ್ತಿದ್ದೆ. ಅನಂತರ ನನ್ನಲ್ಲಿ ಪ್ರತಿಯೊಬ್ಬ ಸಾಧಕನ ಕುರಿತು ಒಂದು ಬೇರೆ ಸಕಾರಾತ್ಮಕತೆ ನಿರ್ಮಾಣವಾಗಿ ಸಾಧಕರನ್ನು ನೋಡುವ ದೃಷ್ಟಿಕೋನ ಬದಲಾಯಿತು. ಸನಾತನದ ಪ್ರತಿಯೊಬ್ಬ ಸಾಧಕರೆಂದರೆ ಗುರುದೇವರ ಸಮಷ್ಟಿ ರೂಪ ಮತ್ತು ಪ್ರತ್ಯಕ್ಷ ಗುರುದೇವರೇ ಇದ್ದಾರೆ, ಎಂಬ ಅನುಭವವಾಗುತ್ತಿತ್ತು. ಪರಾತ್ಪರ ಗುರುದೇವರು ಸಮಷ್ಟಿ ರೂಪದಲ್ಲಿ ನನಗೆ ಸತತ ದರ್ಶನ ನೀಡುತ್ತಾರೆ, ಈ ಭಾವದಿಂದ ಅವರು ಸತತ ನನ್ನ ಜೊತೆಗಿದ್ದಾರೆ ಎಂದು ನನಗೆ ಅನಿಸುತ್ತದೆ. ಆದ್ದರಿಂದ ಗುರುದೇವರ ಪ್ರತ್ಯಕ್ಷ ಭೇಟಿಯ ಬಗ್ಗೆ ನನ್ನ ವಿಚಾರ ಮತ್ತು ಆಸೆ ಕಡಿಮೆಯಾಗಿದೆ ಎಂದು ನನಗೆ ಅನಿಸಿತು.

೩. ಪರಾತ್ಪರ ಗುರು ಡಾಕ್ಟರರು ಸತತ ಸೇವೆಯಲ್ಲಿ ಸಹಾಯ ಮಾಡುತ್ತಿದ್ದಾರೆ ಇದರ ಅರಿವಾಗಿ ಭಾವಜಾಗೃತಿಯಾಗುವುದು

ಪರಾತ್ಪರ ಗುರು ಡಾಕ್ಟರರು ಸೇವೆಯಲ್ಲಿ ಸತತ ಸಹಾಯ ಮಾಡುತ್ತಾರೆ ಎಂದು ನನಗೆ ಅನಿಸುತ್ತದೆ. ಅವರು ನನಗೆ ಸೇವೆಯ ವಿಷಯಗಳ ಬಗ್ಗೆ ಒಮ್ಮೆ ಒಳಗಿನಿಂದ ಹಾಗೂ ಇನ್ನೊಮ್ಮೆ ಸಾಧಕರ ಮೂಲಕ ಸೂಚಿಸುತ್ತಾರೆ. ಅವರು ನನಗೆ ಯೋಗ್ಯ ಅಯೋಗ್ಯದ ಅರಿವು ಮಾಡಿಕೊಡುತ್ತಾರೆ. ಅದರ ಬಗ್ಗೆ ನನಗೆ ಬಹಳ ಕೃತಜ್ಞತೆ ಅನಿಸುತ್ತದೆ. ನಾನು ಏಕಾಂಗಿಯಾಗಿರುವಾಗ ನನ್ನ ಭಾವಜಾಗೃತಿಯಾಗಿ ನನ್ನ ಕಣ್ಣಲ್ಲಿ ಭಾವಾಶ್ರು ಬರುತ್ತದೆ. ಗುರುದೇವರ ಅಪಾರ ಕೃಪೆಯಿಂದ, ನನಗೆ ಇದೇ ಭಾವಸ್ಥಿತಿ ಯಲ್ಲಿದ್ದು ಸತತ ನನ್ನಿಂದ ಹರಿಯುತ್ತಿರುವ ಭಾವಾಶ್ರುವಿನಿಂದ ಗುರುಸ್ತುತಿ ರೂಪದ ಮಂತ್ರ ಮತ್ತು ಸ್ತೋತ್ರ ರೂಪದ ಶಬ್ದ ಉಚ್ಚರಿಸಿ ಅವರ ಪಾದ ಪೂಜೆ ಮಾಡಬೇಕೆಂದು ಅನಿಸುತ್ತದೆ.

ಹೇ ಸರ್ವವ್ಯಾಪಿ ಸಚ್ಚಿದಾನಂದ ಪರಬ್ರಹ್ಮ ಸ್ವರೂಪ ಪರಾತ್ಪರ ಗುರುದೇವರೇ ನಿಮ್ಮ ಶ್ರೀ ಚರಣಗಳಲ್ಲಿ ಏನು ಆತ್ಮನಿವೇದನೆ ಮಾಡಲಿ ? ನಿಮ್ಮ ಮಹಿಮೆ ಮತ್ತು ಕೃಪೆ ಅಪಾರವಾಗಿದೆ. ಈ ಕೃಪೆಗಾಗಿ ನಿಮ್ಮನ್ನು ಹೇಗೆ ಸ್ತುತಿಸಲಿ ? ಇದು ನನಗೆ ತಿಳಿಯುತ್ತಿಲ್ಲ, ಕೃತಜ್ಞತೆ, ಕೃತಜ್ಞತೆ ಮತ್ತು ಕೃತಜ್ಞತೆ ! ಈ ಲೇಖನ ಬರೆಸಿಕೊಳ್ಳುವಾಗ ಕೂಡ ನೀವು ನನ್ನಿಂದ ಭಾವಜಾಗೃತಿ ಮಾಡಿಸಿಕೊಂಡಿದ್ದೀರಿ. ಅದಕ್ಕಾಗಿ ಕೃತಜ್ಞತೆ !

– ನಿಮ್ಮ ಚರಣ ಸೇವಕನಾಗಲು ತಳಮಳಿಸುವ ಅಪಾತ್ರ ಜೀವ ಶ್ರೀ. ಅಶೋಕ ಶಾಂತರಾಮ ದಹಾತೊಂಡೆ, ದೆಹಲಿ ಸೇವಾಕೇಂದ್ರ