ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೃತ ವಚನಗಳು ಮತ್ತು ಅವರಿಂದ ಕಲಿಯಲು ಸಿಕ್ಕಿದ ಅಂಶಗಳು

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ‘ಸಪ್ತರ್ಷಿ ಜೀವನಾಡಿ ಪಟ್ಟಿಯಲ್ಲಿ ಈವರೆಗೆ ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನ ಸಂಸ್ಥೆಯ ಕಾರ್ಯದ ಬಗ್ಗೆ ಏನು ಹೇಳಿದ್ದಾರೆಯೋ, ಅದನ್ನು ಹೇಳಲು ಹೋದರೆ, ಅದು ಒಂದು ‘ಮಹರ್ಷಿಗೀತೆಯೇ ಆಗಬಹುದು. ದೇವರ ಮೇಲೆ ಶ್ರದ್ಧೆಯನ್ನಿಟ್ಟು ಮಾಡುವ ಜೀವನಪ್ರವಾಸವು ಮನುಷ್ಯನಿಗೆ ಒಂದು ರೀತಿಯ ಆಂತರಿಕ ಸ್ಥಿರತೆಯನ್ನು ಕೊಡುತ್ತದೆ, ಅಂತಹ ಸ್ಥಿರತೆಯನ್ನು ಬ್ಯಾಂಕ್‌ನಲ್ಲಿರುವ ಅವನ ಹಣ ಅವನಿಗೆ ಕೊಡಲು ಸಾಧ್ಯವಿಲ್ಲ ಮತ್ತು ದೇವರ ಬೆಂಬಲ ದಿಂದ ನಡೆಯುತ್ತಿರುವ ಜೀವನದಲ್ಲಿ ಹಣ ಬಂದರೇನು ಹೋದರೇನು, ಅದರ ಬಗ್ಗೆ ಏನೂ ಅನಿಸುವುದೇ ಇಲ್ಲ ಮನುಷ್ಯನು ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟು ಬ್ಯಾಂಕಿನಲ್ಲಿ ಅವನ ಜೀವನದ ಸುರಕ್ಷತೆಗಾಗಿ ಹಣವನ್ನು ಸಂಗ್ರಹಿಸಿಡುತ್ತಾನೆ. ಹಾಗೆಯೇ ಅಧ್ಯಾತ್ಮದಲ್ಲಿ ಸಾಧಕನು ಸಾಧನೆಯನ್ನು ಮಾಡಿ ದೇವರ ಬ್ಯಾಂಕಿನಲ್ಲಿ ಸಾಧನೆಯ ಬಲವನ್ನು ಸಂಗ್ರಹಿಸುತ್ತಾನೆ. ಈ ಸಾಧನೆಯ ಉರ್ಜೆಯ ಬಲದಿಂದ ಅವನು ಜೀವನದ ಕಠಿಣ ಪ್ರವಾಸವನ್ನು ಆನಂದದಿಂದ ಪೂರ್ಣಗೊಳಿಸುತ್ತಾನೆ. ‘ಜೀವನದಲ್ಲಿ ಎಷ್ಟೇ ಹಣ ಗಳಿಸಿದರೂ ಈ ಪ್ರವಾಸವು ಯಶಸ್ವೀ ಆಗುವುದು, ಎಂಬುದರ ಖಾತ್ರಿಯನ್ನು ಕೊಡಲು ಆಗುವುದಿಲ್ಲ; ಆದರೆ ದೇವರ ಮೇಲೆ ಶ್ರದ್ಧೆಯನ್ನಿಟ್ಟು ಮಾಡುವ ಜೀವನಪ್ರವಾಸವು ಮನುಷ್ಯನಿಗೆ ಒಂದು ರೀತಿಯ ಆಂತರಿಕ ಸ್ಥಿರತೆಯನ್ನು ಕೊಡುತ್ತದೆ. ಇಂತಹ ಸ್ಥಿರತೆಯನ್ನು ಬ್ಯಾಂಕಿನಲ್ಲಿರುವ ಅವನ ಹಣ ಅವನಿಗೆ ಕೊಡಲಾರದು. ಬದಲಾಗಿ ‘ಹೆಚ್ಚು ಹಣವನ್ನು ಸಂಗ್ರಹಿಸಿದರೆ, ಅದನ್ನು ರಕ್ಷಿಸುವ ಭಾರವೂ ಹೆಚ್ಚುತ್ತದೆ ಮತ್ತು ಕಡಿಮೆ ಸಂಗ್ರಹಿಸಿದರೆ, ‘ಅದನ್ನು ಹೇಗೆ ಹೆಚ್ಚು ಮಾಡುವುದು ?, ಇದಕ್ಕಾಗಿ ಜೀವನಸಂಘರ್ಷ ಪ್ರಾರಂಭವಾಗುತ್ತದೆ, ಅಂದರೆ ದುಡ್ಡು ಹೆಚ್ಚಿದ್ದರೂ, ಸಂಕಟ ಮತ್ತು ಕಡಿಮೆ ಇದ್ದರೂ ಸಂಕಟ ! ಆದರೆ ಸಾಧನೆಯಲ್ಲಿ ಹೀಗಿರುವುದಿಲ್ಲ. ದೇವರ ಬೆಂಬಲದಿಂದ ನಡೆಯುವ ಜೀವನದಲ್ಲಿ ಹಣ ಬಂದರೇನು ಹೋದರೇನು, ಅದರ ಬಗ್ಗೆ ಏನೂ ಅನಿಸುವುದಿಲ್ಲ. ಅದರ ಬದಲು  ಸ್ಥಿರವಾಗಿರಲು ಬರುತ್ತದೆ; ಆದುದರಿಂದ ಜೀವನದಲ್ಲಿ ಸಾಧನೆಯ ಮಹತ್ವ ಬಹಳ ಹೆಚ್ಚಿದೆ.

೨. ಆಧ್ಯಾತ್ಮಿಕ ಮಟ್ಟ ಒಳ್ಳೆಯದಿರುವುದು, ಎಂದರೆ ದೇವರ ಬ್ಯಾಂಕ್‌ನಲ್ಲಿ ಬಹಳಷ್ಟು ಹಣ ಇರುವುದು ಮತ್ತು ‘ಅಧ್ಯಾತ್ಮವನ್ನು ಜೀವಿಸುವುದು ಇದು ಜೀವನದಲ್ಲಿ ಎಲ್ಲಕ್ಕಿಂತ ಸುಖಕರ ಸಂಗತಿಯಾಗಿರುವುದು ಈಗಿನ ಕಾಲವನ್ನು ನೋಡಿದರೆ ಬ್ಯಾಂಕಿನಲ್ಲಿರುವ ಹಣದ ಭರವಸೆಯೂ ಉಳಿದಿಲ್ಲ. ಈ ‘ಹಣ ಕೇವಲ ಈ ಜನ್ಮಕ್ಕಷ್ಟೇ ಬರುತ್ತವೆ; ಆದರೆ ಸಾಧನೆಯಿಂದ ಗಳಿಸಿದ ಪುಣ್ಯದ ಬಲವು, ನಮಗೆ ಜನ್ಮ ಜನ್ಮಾಂತರಗಳ ವರೆಗೆ, ಅಂದರೆ ಮೃತ್ಯುವಿನ ನಂತರವೂ ಸಹಾಯಕ್ಕೆ ಬರುತ್ತದೆ. ಇದೇ ಅಧ್ಯಾತ್ಮದ ವಿಶೇಷತೆಯಾಗಿದೆ; ಆದುದರಿಂದ ‘ಆಧ್ಯಾತ್ಮಿಕ ಮಟ್ಟ ಒಳ್ಳೆಯದಿರುವುದು, ಎಂದರೆ ದೇವರ ಬ್ಯಾಂಕಿನಲ್ಲಿ ಬಹಳಷ್ಟು ಹಣ ಇದ್ದಂತಾಗಿದೆ. ಈ ಸಂಪತ್ತನ್ನು ಯಾರೂ ಕದಿಯುವ ಭೀತಿಯಿಲ್ಲ ಮತ್ತು ‘ಅದು ಹೆಚ್ಚಾಯಿತೆಂದು ಅದನ್ನು ಈಗ ಹೇಗೆ ರಕ್ಷಿಸಬೇಕು ?, ಇಂತಹ ಒತ್ತಡದ ವಿಚಾರಗಳೂ ಇಲ್ಲ. ‘ಅಧ್ಯಾತ್ಮವನ್ನು ಜೀವಿಸುವುದು ಇದು ಜೀವನದಲ್ಲಿ ಎಲ್ಲಕ್ಕಿಂತಲೂ ಸುಖಕರ ಸಂಗತಿಯಾಗಿದೆ.

೩. ದೇವರು ನಿರ್ಧರಿಸಿದ ನಿಯೋಜನೆಯಂತೆ ನಡೆದುಕೊಳ್ಳುವುದು, ಅಂದರೆ ಸಾಧನೆಯನ್ನು ಮಾಡುವುದು ಮತ್ತು ಸಾಧನೆಯನ್ನು ಮಾಡಿದರೆ, ನಾವು ದೇವರು ನಿಯೋಜನೆ ಮಾಡಿಕೊಟ್ಟ ಸಾತ್ತ್ವಿಕ ಕರ್ಮದ ಪ್ರವಾಹದಲ್ಲಿ ತಾನಾಗಿಯೇ ಮುಂದೆ ಮುಂದೆ ಹೋಗಿ ಅದರಲ್ಲಿನ ಜೀವನದ ಆನಂದವನ್ನು ಪಡೆಯುವುದು. ನಮ್ಮ ನಿತ್ಯದ ಕೆಲಸವನ್ನು (ಕರ್ಮಗಳನ್ನು) ಭಗವಂತನೇ ನಿರ್ಧರಿಸಿರುತ್ತಾನೆ. ಅವನ ನಿಯೋಜನೆಯಂತೆ ನಡೆದು ಕೊಳ್ಳುವುದು, ಅಂದರೆ ಸಾಧನೆ ! ಅದರಲ್ಲಿ ಹಸ್ತಕ್ಷೇಪ ಮಾಡಿ ಉದ್ದೇಶಪೂರ್ವಕವಾಗಿ ಏನಾದರೂ ಮಾಡಲು ಹೋದರೆ, ನಮ್ಮ ಸಮಯ ವ್ಯರ್ಥವಾಗುತ್ತದೆ; ಏಕೆಂದರೆ ಹೀಗೆ ಮಾಡುವುದು ದೇವರಿಗೆ ಅಪೇಕ್ಷಿತ ಇರುವುದಿಲ್ಲ. ‘ಬಹಳಷ್ಟು ಜನರು ‘ದೇವರಿಗೆ ಏನು ಅಪೇಕ್ಷಿತವಾಗಿದೆ ಎಂಬುದು ನಮಗೆ ಹೇಗೆ ತಿಳಿಯುವುದು ? ಎಂದು ಕೇಳುತ್ತಾರೆ. ಅದರ ಉತ್ತರವು ಸುಲಭವಾಗಿದೆ, ‘ಸಾಧನೆಯನ್ನು ಹೆಚ್ಚಿಸಿದರೆ ತಾನಾಗಿ ತಿಳಿಯುತ್ತದೆ. ಸಾಧನೆಯನ್ನು ಮಾಡಿದರೆ, ನಾವು ದೇವರು ಆಯೋಜನೆ ಮಾಡಿಕೊಟ್ಟ ಸಾತ್ತ್ವಿಕ ಕರ್ಮಗಳ ಪ್ರವಾಹದಲ್ಲಿ ತಾವಾಗಿಯೇ ಮುಂದೆ ಮುಂದೆ ಹೋಗುತ್ತಿರುತ್ತೇವೆ ಮತ್ತು ಅದರಲ್ಲಿನ ಜೀವನದ ಆನಂದವನ್ನು ಪಡೆಯಬಹುದು. ಇಲ್ಲದಿದ್ದರೆ ಸ್ವಂತ ಮನಸ್ಸಿನಿಂದ ಜೀವಿಸುವ ಮನುಷ್ಯನಿಗೆ ಜೀವನವು ಬೇಡವಾಗಿರುತ್ತದೆ; ಏಕೆಂದರೆ ಅವನ ಜೀವನದಲ್ಲಿ ಆನಂದದ ಸಂಗ್ರಹವನ್ನು ಮಾಡಿಕೊಡುವ ಈಶ್ವರನಿಗಾಗಿ ಸ್ಥಾನವಿರುವುದಿಲ್ಲ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೧೭.೪.೨೦೨೦)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು