‘ನಮ್ಮ ತಂತ್ರಜ್ಞಾನವು ಮಾನವೀಯತೆಯನ್ನು ಮೀರಿಸಿದೆ ಎಂಬ ಭೀಕರತೆಯು ಸ್ಪಷ್ಟವಾಗಿದೆ !’ ಸಾಪೇಕ್ಷ ಸಿದ್ಧಾಂತವನ್ನು ಪ್ರಸ್ತಾಪಿಸಿದ ಪ್ರತಿಭಾವಂತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರ ಈ ಹೇಳಿಕೆಯು ಇಂದು ಇನ್ನಷ್ಟು ಬಲವಾಗಿ ಅನುಭವವಾಗುತ್ತಿದೆ. ಜಗತ್ತು ಎರಡು ದಶಕಗಳ ಹಿಂದಿನವರೆಗೂ ಭೌಗೋಳಿಕ ಅಂತರದ ದೃಷ್ಟಿಯಲ್ಲಿ ಮಾನಸಿಕವಾಗಿ ದೂರವಿತ್ತು. ಇಂಟರನೆಟ್ ಅಂದರೆ ಮಾಹಿತಿಜಾಲದಿಂದಾಗಿ ಅದು ಹತ್ತಿರವಾಯಿತು. ಜಗತ್ತಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುವ ಮೂಲಕ ಗೂಗಲ್ ಮಾನವ ಜೀವನವನ್ನು ಅಕ್ಷರಶಃ ಬದಲಾಯಿಸಿದೆ. ‘ಫೋರ್ ಜಿ’ ತಂತ್ರಜ್ಞಾನದಿಂದಾಗಿ, ಇದು ವೇಗವಾಗಿ ಬದಲಾಗಿ ಜನರು ಈ ಮಾಹಿತಿಯನ್ನು ಅತ್ಯಂತ ವೇಗವಾಗಿ ಪಡೆಯಲಾರಂಭಿಸಿದರು. ಅಂತಹದ್ದರಲ್ಲಿಯೇ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎಐ) ತಂತ್ರಜ್ಞಾನಕ್ಕೆ, ಅಂದರೆ ‘ಕೃತಕ ಬುದ್ಧಿಮತ್ತೆ’ಯಿಂದಾಗಿ ‘ನೀವು ಏನು ಹುಡುಕುತ್ತೀರಿ ?’, ‘ನೀವು ಏನು ಅಧ್ಯಯನ ಮಾಡುತ್ತೀರಿ ?’, ‘ನಿಮ್ಮ ಆಸಕ್ತಿಗಳೇನು ?’ ಇತ್ಯಾದಿ ಅಂಶಗಳನ್ನು ಬಳಸಿಕೊಂಡು ನಿಮಗೆ ಯಾವುದು ಇಷ್ಟವಿದೆಯೋ ಅದೇ ರೀತಿಯ ವಾರ್ತೆಗಳು, ಲೇಖನ, ವೀಡಿಯೊ ಇತ್ಯಾದಿ ರೂಪದಲ್ಲಿ ಮಾಹಿತಿ ನೀಡಲಾರಂಭವಾಗಿದೆ. ಸಂಸ್ಥೆಗಳು ತಮ್ಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಜನರನ್ನು ತಮ್ಮ ಸಂಭಾವ್ಯ ಗ್ರಾಹಕರನ್ನಾಗಿ ಮಾಡಲು ಕೃತಕಬುದ್ಧಿಮತ್ತೆಯನ್ನು ಜಾಣ್ಮೆಯಿಂದ ಬಳಸಿಕೊಂಡಿವೆ. ಇದು ದೇಶಗಳ ರಾಜಕೀಯದಲ್ಲೂ ಅಲ್ಲೋಲಕಲ್ಲೋಲ ಪ್ರಾರಂಭಿಸಿತು.
‘ಚಾಟ್ ಜಿಪಿಟಿ’ ಎಂದರೇನು ?
ತಂತ್ರಜ್ಞಾನದ ಶಕ್ತಿಯು ಎಲ್ಲಿಯ ವರೆಗೆ ಕೆಲಸ ಮಾಡುತ್ತದೆ ? ಇದಕ್ಕೆ ಅತ್ಯುತ್ತಮ ಉದಾಹರಣೆ ‘ಎಐ’ ! ಈಗಂತೂ ಇದರಲ್ಲೂ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ‘ಎಐ’ ಇದು ಇತ್ತೀಚಿನ ಆವಿಷ್ಕಾರವಾಗಿದ್ದು, ಇದು ‘ಚಾಟ್ ಜಿಪಿಟಿ’ ಹೆಸರಿನಲ್ಲಿ ಜಗತ್ತಿನೆದುರು ಬಂದಿದೆ. ನವೆಂಬರ್ ೨೦೨೨ ರಲ್ಲಿ, ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ‘ಓಪನ್ ಎಐ’ ಕಂಪನಿಯು ಈ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತು ಮತ್ತು ನೋಡನೋಡುತ್ತಲೇ ಕೋಟಿಗಟ್ಟಲೆ ಜನರು ಇದನ್ನು ಬಳಸಲಾರಂಭಿಸಿದರು ! ಈ ತಂತ್ರಜ್ಞಾನಕ್ಕೆ ನೀವು ಯಾವುದೇ ಪ್ರಶ್ನೆಯನ್ನು ಕೇಳಿದರೂ, ಅದು ಚಿಟಿಕೆ ಹೊಡೆಯುವಷ್ಟರಲ್ಲಿ ಉತ್ತರಿಸುತ್ತದೆ. ನಾವು ವ್ಯಕ್ತಿಯೊಂದಿಗೆ ಮಾತನಾಡುವ (‘ಚಾಟ್’) ರೀತಿಯಲ್ಲಿಯೇ ಈ ವ್ಯವಸ್ಥೆಯು ನಮ್ಮೊಂದಿಗೆ ಮಾತನಾಡುತ್ತದೆ. ವಾಸ್ತವದಲ್ಲಿ ನಿಮ್ಮ ಪ್ರಶ್ನೆಗಳಿಗೆ ಬಹಳ ಬುದ್ಧಿವಂತಿಕೆಯಿಂದ, ಆಶ್ಚರ್ಯವುಂಟು ಮಾಡುವಂತೆ ಮತ್ತು ಕೆಲವೊಮ್ಮೆ ರಾಜತಾಂತ್ರಿಕವಾಗಿಯೂ ಉತ್ತರಿಸುತ್ತದೆ.
‘ಜಿಪಿಟಿ’ ಎಂದರೆ ‘ಜನರೇಟಿವ್ ಪ್ರಿ-ಟ್ರೈನ್ಡ್ ಟ್ರಾನ್ಸ್‌ಫಾರ್ಮರ್’ !
ಈ ‘ಬಾಟ್’ (ತಂತ್ರಾಂಶ) ಒಂದು ‘ಲಾರ್ಜ ಲ್ಯಾಂಗ್ವೇಜ್ ಮಾಡೆಲ್’ ಇದ್ದು ಮತ್ತು ಅದಕ್ಕೆ ಕೇಳಿದ ಪ್ರಶ್ನೆಗಳಿಗೆ ನಿಮಿಷದೊಳಗೇ ವಿವರವಾಗಿ ಉತ್ತರಿಸುತ್ತದೆ. ‘ಲಾಂಗ್ವೇಜ್ ಮಾಡ್ಯೂಲ್’ ತಂತ್ರಜ್ಞಾನವು ತನಗೆ ಬರುವ ಪ್ರಶ್ನೆಗಳಲ್ಲಿನ ಪದಗಳು ಮತ್ತು ವಾಕ್ಯಗಳ ಅನುಕ್ರಮದ ಅರ್ಥವನ್ನು ಸಾಧ್ಯತೆ-ಅಸಾಧ್ಯತೆಯ ತತ್ತ್ವದಲ್ಲಿ ಹೊಂದಿಸುವ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತದೆ. ‘ಮಷಿನ್ ಲರ್ನಿಂಗ್’ ಅಡಿಯಲ್ಲಿ ಕೆಲವು ಸುಧಾರಿತ ವ್ಯವಸ್ಥೆಗಳನ್ನು ಸೇರಿಸುವ ಮೂಲಕ ಚಾಟ್ ಜಿಪಿಟಿಯನ್ನು ಸಂಸ್ಕರಿಸಲಾಗಿದೆ.
ವರದಾನವೋ ಶಾಪವೋ?
ಜನಸಾಮಾನ್ಯರು ತಾಂತ್ರಿಕತೆ ಎಂದು ಸಂಕೀರ್ಣವಾಗಿ ಯೋಚಿಸುವುದಕ್ಕಿಂತ ‘ಚಾಟ್ ಜಿಪಿಟಿ’ಯ ಪ್ರಾಯೋಗಿಕ ಮಟ್ಟದ ಉಪಯೋಗಗಳು ಮತ್ತು ಅನಾನುಕೂಲಗಳನ್ನು ನೋಡಬೇಕಾಗಿದೆ. ನೀವು ಹುಡುಕುತ್ತಿರುವ ವಿಷಯದ ಕುರಿತು ಗೂಗಲ್ ನಿಖರವಾದ ಮಾಹಿತಿಯನ್ನು ಒದಗಿಸುವ ವಿವಿಧ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಒದಗಿಸಿದರೆ, ‘ಚಾಟ್ ಜಿಪಿಟಿ’ ಮಾತ್ರ ನಿಮಗೆ ಅಗತ್ಯವಿರುವ ಪದಗಳಲ್ಲಿ ಯಾವುದೇ ಪ್ರಶ್ನೆಗೆ ನೇರ ಮತ್ತು ತೃಪ್ತಿಕರ ಉತ್ತರಗಳನ್ನು ನೀಡುತ್ತದೆ. ಈ ವ್ಯವಸ್ಥೆಯು ೨೦೨೧ ರ ನಂತರದ ಹೆಚ್ಚಿನ ಮಾಹಿತಿಯನ್ನು ಹೊಂದಿರದಿದ್ದರೂ, ವಾಸ್ತವದಲ್ಲಿ ಒಂದು ವಿಷಯದ ಕುರಿತು ಪ್ರಬಂಧ, ಪತ್ರ, ಇಮೇಲ್ ಬರೆಯಲು ಇದರಿಂದ ತುಂಬಾ ಸುಲಭವಾಗುವುದು, ಅಷ್ಟೇ ಅಲ್ಲದೇ ಈಗ ಆಗುತ್ತಲೂ ಇದೆ. ಜಾಗತಿಕ ರಾಜಕಾರಣ, ಧರ್ಮ, ದೈನಂದಿನ ಜೀವನದಿಂದ ಹಿಡಿದು ‘ಕಾನೂನು ಖಟ್ಲೆಯನ್ನು ಹೇಗೆ ಹೋರಾಡುವುದು?’, ಇಲ್ಲಿಯ ವರೆಗೂ ಈ ತಂತ್ರಾಂಶ ಸಹಾಯ ಮಾಡುತ್ತಿದೆ. ‘ಮಾಂತ್ರಿಕದಂಡದಂತೆ ಈ ವ್ಯವಸ್ಥೆಯು ಯಾವುದೇ ವಿಷಯದ ಪ್ರಶ್ನೆಗೆ ಉತ್ತರದ ರೂಪದಲ್ಲಿ ಅಗತ್ಯವಿರುವ ಮಾಹಿತಿಯನ್ನು ಒದಗಿಸುತ್ತದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಶೇಕಡಾ ೧೭ ರಷ್ಟು ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಬಳಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದರು. ಇದರಿಂದ, ಈ ವ್ಯವಸ್ಥೆಯು ಮಾನವ ಭವಿಷ್ಯದಲ್ಲಿ ಏನು ಮಾಡಿಟ್ಟಿದೆ ಎಂಬುದರ ಕುರಿತು ಅಂದಾಜು ಬಂದಿರಬಹುದು. ಇತ್ತೀಚೆಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ‘ಚಾಟ್ ಜಿಪಿಟಿ’ಯನ್ನು ಇಂಟರ್ನೆಟ್ಗೆ ಹೋಲಿಸಿದರು ಮತ್ತು ‘ಈ ವ್ಯವಸ್ಥೆಯು ನಮ್ಮ ಜಗತ್ತನ್ನು ಬದಲಾಯಿಸುವುದು ಎಂದು ಹೇಳಿದರು. ಮೈಕ್ರೋಸಾಫ್ಟ್‌ನ ಸಹಾಯದಿಂದ ‘ಓಪನ್ ಎಐ ಕಂಪನಿಯು ‘ರೂಪಿಸಿರುವ ‘ಚಾಟ್ ಜಿಪಿಟಿ ಗೂಗಲ್’ ಅನ್ನು ಸಹ ಮೆಟ್ಟಿ ನಿಲ್ಲಬಹುದೇ ಎಂಬುವುದು ಊಹೆಗೆ ಬಿಟ್ಟಿದ್ದು; ಆದರೆ ಬಾಲ್ಯಾವಸ್ಥೆಯಲ್ಲಿರುವ ಈ ತಂತ್ರಾಂಶವು ಆಧುನಿಕ ಮಾನವ ಜೀವನದಲ್ಲಿ ಕ್ರಾಂತಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ‘ಗೂಗಲ್ ಈ ದೈತ್ಯ ಸಂಸ್ಥೆಗೂ ಈ ಭಯ ಎದುರಾಗಿದೆ ಮತ್ತು ೨೦೧೯ ರಲ್ಲಿ ಗೂಗಲ್ ಅನ್ನು ತೊರೆದ ತನ್ನ ಎರಡೂ ಸಹ-ಸಂಸ್ಥಾಪಕರನ್ನು ಸಂಪರ್ಕಿಸಿದೆ.
ಯಾವುದೇ ತಂತ್ರಾಂಶವನ್ನು ಅಂತಿಮವಾಗಿ ಮಾನವನೇ ನಿಯಂತ್ರಿಸುತ್ತಾನೆ, ಎಂಬ ಸತ್ಯವನ್ನು ಮರೆಯಬಾರದು. ಅದರಿಂದಾಗಿ ಆ ಮನುಷ್ಯನ ಮನಸ್ಥಿತಿ ಹೇಗಿದೆ ? ಎಂಬುದರ ಮೇಲೆ ಆ ತಂತ್ರಾಂಶದ ಕಾರ್ಯವು ಅವಲಂಬಿಸಿರುತ್ತದೆ. ‘ಚಾಟ್ ಜಿಪಿಟಿ’ಯು ಜಗತ್ತಿನ ಎಲ್ಲಾ ವಿಷಯಗಳೊಂದಿಗೆ ವ್ಯವಹರಿಸುವುದರಿಂದ, ಅದು ಪಡೆಯುವ ನಿರ್ದೇಶನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರರ ಮನಸ್ಸಿನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತದೆ. ಇಂದಿನ ಜಗತ್ತಿನಲ್ಲಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಹೊಸ ವಿಷಯವು ಮುಕ್ತಮನಸ್ಸಿನ ಯುವಕರನ್ನು ಮೂರ್ಖರನ್ನಾಗಿಸುತ್ತದೆ. ಆದ್ದರಿಂದ ‘ಚಾಟ್ ಜಿಪಿಟಿ’ ಅನ್ನು ವಿವೇಚನೆಯಿಂದ ಬಳಸುವುದು ಆವಶ್ಯಕ. ಅದರ ನೈತಿಕ ಮತ್ತು ನ್ಯಾಯಿಕ ಗಡಿಗಳನ್ನು ಖಚಿತಪಡಿಸಿಕೊಳ್ಳುವುದು ಜಾಗತಿಕ ಮಾನವ ಸಮುದಾಯದ ಜವಾಬ್ದಾರಿಯಾಗಿದೆ. ಆನ್‌ಲೈನ್ ವಿಶ್ವಕೋಶ ‘ವಿಕಿಪೀಡಿಯಾ’ ಅಥವಾ ಸಾಮಾಜಿಕ ಮಾಧ್ಯಮ ‘ಟ್ವಿಟರ್’ ಕಮ್ಯುನಿಸ್ಟರ ಕಪಿಮುಷ್ಠಿಗೆ ಒಳಗಾದ ರೀತಿಯಲ್ಲಿ ಇದು ನಡೆಯಬಾರದೆಂಬುದು ಈ ರೀತಿ ಹೇಳಲು ಕಾರಣ. ಅದು ಸಂಭವಿಸಿದಲ್ಲಿ, ಅದು ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂಬುದು ಖಚಿತ ! ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಇವರು ‘ತಂತ್ರಜ್ಞಾನದ ಮೇಲಿನ ನಂಬಿಕೆಗಿಂತ ಜನರಲ್ಲಿ ನಂಬಿಕೆ ಮುಖ್ಯ !’ ಎಂದಿದ್ದರು. ಹಾಗಾಗಿ ಕ್ರಾಂತಿಕಾರಿ ‘ಚಾಟ್ ಜಿಪಿಟಿ’ಯ ಅಬ್ಬರವು ಇದನ್ನು ನಿಜವಾಗಿಸಲಿದೆಯೇ ಎಂದು ನೋಡಬೇಕಾಗಿದೆ !