ಛತ್ತೀಸ್ ಗಡದಲ್ಲಿ ನಕ್ಸಲರ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮ !

ಕಳೆದ ವಾರದಲ್ಲಿ ಒಟ್ಟು ೬ ಪೊಲೀಸರು ಅಥವಾ ಸೈನಿಕರ ಹತ್ಯೆ !

ರಾಯಪುರ (ಛತ್ತಿಸ್ ಗಢ) – ರಾಜ್ಯದಲ್ಲಿ ನಕ್ಸಲರಿಂದ ಪೋಲಿಸ್ ಮತ್ತು ಸೈನಿಕರ ಹತ್ಯೆಯ ಸರಣಿ ಮುಂದುವರೆದಿದೆ. ಫೆಬ್ರವರಿ ೨೫ ರಂದು ನಕ್ಸಲರು ಕಾಂಕೇರ್ ದಲ್ಲಿ ಒಂದು ಜಾತ್ರೆಗೆ ಬಂದಿದ್ದ ಓರ್ವ ಸೈನಿಕನ ಮೇಲೆ ಮಾರುಕಟ್ಟೆಯಲ್ಲಿಲೇ ಗುಂಡು ಹಾರಿಸಿ ಹತ್ಯೆ ಮಾಡಿದರು. ಈ ಸೈನಿಕ ರಜೆಗಾಗಿ ಬಡೇ ತೆವಡ ಇಲ್ಲಿ ಅವರ ಮನೆಗೆ ಹೋಗುತ್ತಿದ್ದರು. ಅಸ್ಸಾಂನಲ್ಲಿ ಅವರನ್ನು ನೇಮಿಸಲಾಗಿತ್ತು. ಈ ಘಟನೆಯಿಂದ ಈ ವಾರದಲ್ಲಿ ನಕ್ಸಲರಿಂದ ಹತ್ಯೆಗೀಡಾಗಿರುವ ಪೊಲೀಸ ಅಥವಾ ಸೈನಿಕರ ಸಂಖ್ಯೆ ಈಗ ೬ ಕ್ಕೆ ಏರಿದೆ. ಫೆಬ್ರವರಿ ೨೫ ರಂದು ರಾಜ್ಯದಲ್ಲಿನ ಸುಕಮಾ ಜಿಲ್ಲೆಯಲ್ಲಿರುವ ಕುಂದೆಡ ಬಳಿ ಮಾವೋವಾದಿಗಳು ನಡೆಸಿರುವ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದರು.

ಸಂಪಾದಕರ ನಿಲುವು

* ಕಾಂಗ್ರೆಸ್ ಸರಕಾರದ ಆಡಳಿತದಲ್ಲಿರುವ ಛತ್ತೀಸ್ ಗಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಎಲ್ಲಿ ಸೈನಿಕ ಮತ್ತು ಪೊಲೀಸರ ಭದ್ರತೆಯ ಸ್ಥಿತಿ ಇದೆ, ಅಲ್ಲಿ ಸಾಮಾನ್ಯ ಜನರ ಪಾಡ ಏನು ?