ಚತುರಂಗ ಪ್ರತಿಷ್ಠಾನದ ೧೦೦ ನೇ ಕಾರ್ಯಕ್ರಮದಲ್ಲಿ (೫.೧೧. ೧೯೮೯) ಪ.ಪೂ. ಡಾಕ್ಟರರ ಭಾಷಣದಿಂದ ಕೇಳುಗರು ಜೋರಾಗಿ ಚಪ್ಪಾಳೆಗಳನ್ನು ತಟ್ಟುವುದು ಮತ್ತು ಗಣ್ಯವ್ಯಕ್ತಿಗಳು ಅದಕ್ಕೆ ಸ್ವಯಂಪ್ರೇರಿತ ಮೆಚ್ಚುಗೆಯನ್ನು ನೀಡುವುದು : ಮುಂಬೈಯಲ್ಲಿ ‘ಚತುರಂಗ ಪ್ರತಿಷ್ಠಾನ’ ಹೆಸರಿನ ಒಂದು ಸಂಸ್ಥೆ ಇದೆ. ಅದು ಪ್ರತಿ ತಿಂಗಳಿಗೊಮ್ಮೆ ಯಾವುದಾದರೊಬ್ಬ ಖ್ಯಾತ ಲೇಖಕ ಸಾಹಿತಿ, ಕವಿ, ನಟನಟಿಯರು ಅಥವಾ ಕಲಾವಿದರ ಸತ್ಕಾರವನ್ನು ಮಾಡುತ್ತಿತ್ತು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ. ರಮೇಶ ಮಹಾಜನ ಇವರು ನನ್ನ ಶಾಲೆಯ ಸಹಪಾಠಿಯಾಗಿದ್ದರು. ನಾನು ಸಂಮ್ಮೋಹನ ಚಿಕಿತ್ಸಾಶಾಸ್ತ್ರದಲ್ಲಿ ಪ್ರಾವಿಣ್ಯವನ್ನು ಪಡೆದ ಭಾರತದ ಮೊದಲನೇ ಡಾಕ್ಟರನಾಗಿರುವುದರಿಂದ ಶ್ರೀ. ಮಹಾಜನ ಇವರು ನಾನು ಕಲಾವಿದನಾಗಿರದಿದ್ದರೂ ಒಂದು ತಿಂಗಳು ಚತುರಂಗ ಪ್ರತಿಷ್ಠಾನದ ವತಿಯಿಂದ ನನಗೆ ಸತ್ಕರಿಸಿದ್ದರು.
ಸಂಸ್ಥೆಯು ೧೦೦ ನೇ ಕಾರ್ಯಕ್ರಮವನ್ನು ‘ಕೊನೆಯ ಕಾರ್ಯಕ್ರಮ’ ಎಂದು ನಿರ್ಧರಿಸಿತ್ತು. ೧೦೦ ನೇ ಕಾರ್ಯಕ್ರಮದಲ್ಲಿ ಇದುವರೆಗಿನ ೯೯ ಕಾರ್ಯಕ್ರಮಗಳಲ್ಲಿ ಸತ್ಕರಿಸಲ್ಪಟ್ಟವರಿಗೆ ಒಂದು ಸ್ನೇಹಸಮ್ಮೇಳವನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಸತ್ಕಾರ ಮಾಡಿಸಿಕೊಂಡವರ ಪೈಕಿ ನಾನೊಬ್ಬನೇ ಯಾರಿಗೂ ಪರಿಚಿತನಿರಲಿಲ್ಲ. ಸತ್ಕಾರ ಮಾಡಿಸಿಕೊಂಡ ಪ್ರತಿಯೊಬ್ಬರೂ ಮೂರು ನಿಮಿಷಗಳಲ್ಲಿ ಏನಾದರೂ ಮಾತನಾಡುವುದಿತ್ತು. ನನಗಿಂತ ಮೊದಲು ಮಾತನಾಡಿದ ಖ್ಯಾತ ಸಾಹಿತಿಗಳು, ಲೇಖಕರು, ಕವಿಗಳು, ನಟನಟಿಯರು ಅಥವಾ ಕಲಾವಿದರಿಗೆ ಮಾತನಾಡಲು ಕರೆದಾಗ ಜೋರಾಗಿ ಚಪ್ಪಾಳೆಗಳನ್ನು ತಟ್ಟಲಾಗುತ್ತಿತ್ತು. ನನ್ನ ಹೆಸರು ಕರೆದಾಗ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಚಪ್ಪಾಳೆ ತಟ್ಟಲಾಯಿತು; ಏಕೆಂದರೆ ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ. ಆ ಸಮಯದಲ್ಲಿ ಮಾತನಾಡಿದ ನಾನು, “ಇಲ್ಲಿ ಉಪಸ್ಥಿತರಿರುವ ಖ್ಯಾತ ಲೇಖಕರು ಮತ್ತು ಕವಿಗೋಷ್ಟಿ, ಕವಿತೆ, ನಾಟಕ, ಹಾಗೆಯೇ ಚಲನಚಿತ್ರಗಳ ಕಥೆಗಳನ್ನು ಬರೆಯುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಪ್ರೇಮಿಸುವ ನಾಯಕ-ನಾಯಕಿಯರಿರುತ್ತಾರೆ. ನಾಟಕದಲ್ಲಿ ನಟನಟಿಯರು ಮತ್ತು ಚಲನಚಿತ್ರಗಳಲ್ಲಿ ಹಿರೋ-ಹಿರೋಯಿನ್ ಇವರು ಪಾತ್ರವನ್ನು ಮಾಡುತ್ತಾರೆ. ವಾಚಕರು ಅಥವಾ ಪ್ರೇಕ್ಷಕರು ನಾಯಕ-ನಾಯಕಿಯರು ಮತ್ತು ಹಿರೋ-ಹಿರೋಯಿನ್ ಇವರ ಪಾತ್ರದಲ್ಲಿ ತಮ್ಮನ್ನು ನೋಡತೊಡಗುತ್ತಾರೆ ಮತ್ತು ತಾತ್ಕಾಲಿಕ ಸುಖವನ್ನು ಅನುಭವಿಸುತ್ತಾರೆ. ಮುಂದೆ ನಾಯಕ-ನಾಯಕಿ ಮತ್ತು ಹಿರೋ-ಹಿರೋಯಿನ್ ಇವರಂತೆ ಸ್ವತಃ ಅವರ ಮಿಲನವಾಗದಿರುವುದರಿಂದ ಅವರು ತೀವ್ರ ನಿರಾಶೆಗೊಳಗಾಗುತ್ತಾರೆ. ಆಗ ಅವರು ಚಿಕಿತ್ಸೆಗಾಗಿ ನನ್ನಲ್ಲಿಗೆ ಬರುತ್ತಾರೆ. ಚಿಕಿತ್ಸೆಯಿಂದ ಅವರ ವ್ಯಕ್ತಿತ್ವ ದೃಢವಾಗುವುದರಿಂದ ಅವರಿಗೆ ನಿತ್ಯ ಸುಖ ಸಿಗುತ್ತದೆ” ಎಂದು ಹೇಳಿದೆನು. ಇಷ್ಟು ಮಾತನಾಡಿ ನಾನು ಧ್ವನಿಪ್ರಕ್ಷೇಪಕವನ್ನು ಬದಿಗಿಡುತ್ತಲೇ ಅಲ್ಲಿದ್ದ ಕೇಳುಗರು ಜೋರಾಗಿ ಚಪ್ಪಾಳೆಗಳ ಮಳೆಗಳೆದರು. ಆ ಚಪ್ಪಾಳೆಗಳಿಗೆ ವೇದಿಕೆಯಲ್ಲಿದ್ದ ಎಲ್ಲ ಗಣ್ಯವ್ಯಕ್ತಿಗಳೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.’
– ಡಾ. ಆಠವಲೆ (೫.೧೧.೧೯೮೯)