ಭಾರತ ಚೀನಾ ಗಡಿಯಲ್ಲಿ ಭಾರತದಿಂದ ಎಲ್ಲಕ್ಕಿಂತ ಹೆಚ್ಚಿನ ಸೈನ್ಯದ ನೇಮಕ ಇದು ಇತಿಹಾಸಿಕ ಹೆಜ್ಜೆ !

  • ರಾಹುಲ ಗಾಂಧಿ ಇವರಿಂದ ವಿದೇಶಾಂಗ ಸಚಿವರನ್ನು ಟೀಕಿಸಿದ ಪ್ರಕಾರಣ

  • ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !

ನವ ದೆಹಲಿ – ನಾನು ಅಥವಾ ಪ್ರಧಾನಮಂತ್ರಿ ಮೋದಿ ಚೀನಾದ ಹೆಸರು ಹೇಳಲು ಹೆದರುವುದಿಲ್ಲ. ಇಂದು ಭಾರತ ಚೀನಾ ಇದರಲ್ಲಿನ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಲದಲ್ಲಿ ಭಾರತದಿಂದ ಎಲ್ಲಕ್ಕಿಂತ ಹೆಚ್ಚಿನ ಸೈನ್ಯವನ್ನು ನೇಮಿಸಿದೆ. ಇದು ಐತಿಹಾಸಿಕವಾಗಿದ್ದು ಈ ಕ್ರಮ ರಾಹುಲ್ ಗಾಂಧಿಯವರು ತೆಗೆದುಕೊಳ್ಳದೆ ಪ್ರಧಾನ ಮಂತ್ರಿ ಅವರು ತೆಗೆದುಕೊಂಡಿದ್ದಾರೆ. ತಿಳಿದುಕೊಳ್ಳಿ. ‘ಚೈನಾ !’ ಈ ರೀತಿ ವಿದೇಶಾಂಗ ಸಚಿವ ಜಯಶಂಕರ ಇವರು ಕಾಂಗ್ರೆಸ್ಸಿಗೆ ಖಂಡತುಂಡಾಗಿ ಉತ್ತರಿಸಿದರು. ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿಯವರಿಗೆ ಹಲವುಬಾರಿ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರ ಕುರಿತು ಟೀಕಿಸುವಾಗ, ಅವರಿಬ್ಬರೂ ಎಂದು ಚೀನಾದ ಹೆಸರು ಹೇಳುವುದಿಲ್ಲ, ಚೀನಾದ ವಿಷಯ ಬಂದರೆ ಇಬ್ಬರು ಮೌನವಾಗಿ ಇರುತ್ತಾರೆ. ಈ ಹೇಳಿಕೆಗೆ ವಿದೇಶಾಂಗ ಸಚಿವರು ಪ್ರತ್ಯುತ್ತರ ನೀಡಿದ್ದಾರೆ. ವಿದೇಶಿ ಪ್ರಸಾರ ಮಾಧ್ಯಮಗಳಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಅನೇಕ ಲೇಖನಗಳು ಬರೆದಿದ್ದಾರೆ. ಅಮೇರಿಕಾ ಉದ್ಯೋಗಿ ಜಾರ್ಜ್ ಸೋರೋಸ್ (ಭಾರತ ವಿರೋಧಿ ವಿಚಾರಧಾರೆ ಮುಂದುವರಿಸಲು ಅಬ್ಜಗಟ್ಟಲೆ ಹಣ ಖರ್ಚು ಮಾಡುವ ಉದ್ಯೋಗಿ) ಇವರು ಕೂಡ ಪ್ರಧಾನಮಂತ್ರಿ ಮೋದಿ ಅವರ ಪ್ರತಿಮೆ ಮಲಿನವಾಗಿದೆ ಎಂದು ಹೇಳಿದ್ದರು.

ಪ್ರಸಾರ ಮಾಧ್ಯಮದ ಈ ಪ್ರಶ್ನೆಗೆ ವಿದೇಶಾಂಗ ಸಚಿವರು ಉತ್ತರಿಸುವಾಗ,

೧. ಬೇರೆ ಮಾಧ್ಯಮದಿಂದ ಯುದ್ಧ ಮಾಡುವ ಪದ್ಧತಿ ಇದಾಗಿದೆ. ಇದರ ಬಗ್ಗೆ ಯೋಚನೆ ಮಾಡಿರಿ ! ಇದು ಒಂದು ರೀತಿಯ ರಾಜಕೀಯವಾಗಿದೆ.

೨. ಅನಿರೀಕ್ಷಿತವಾಗಿ ಭಾರತ ವಿರೋಧಿ ವರದಿ ಮತ್ತು ವಿಚಾರದ ಪ್ರವಾಹ ಹೇಗೆ ಬಂದಿದೆ ? ಹೀಗೆ ಇದರ ಹಿಂದಿನವರೆಗೆ ಏಕೆ ನಡೆಯುತ್ತಿರಲಿಲ್ಲ ?

೩. ಬಿಬಿಸಿಯು ನಿರ್ಮಿಸಿರುವ ಹಿಂದೂ ವಿರೋಧಿ ಸಾಕ್ಷ್ಯಚಿತ್ರದ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ ಎಸ್. ಜೈಶಂಕರ ಇವರು, ೧೯೮೪ ರಲ್ಲಿ ದೆಹಲಿಯಲ್ಲಿ ಏನೆಲ್ಲಾ ನಡೆದಿತ್ತು. ಅದರ ಬಗ್ಗೆ ಸಾಕ್ಷ್ಯಚಿತ್ರ ಏಕೆ ತಯಾರಾಗಲಿಲ್ಲ ? ನೀವು, ಈ ಸಾಕ್ಷ್ಯಚಿತ್ರ ಕೇವಲ ಒಂದು ಯೋಗ ಯೋಗವಾಗಿದೆ ಎಂದು ಹೇಳುತ್ತೀರಿ. ಹಾಗಾದರೆ ಇದು ಏಕೆ ಆಗುತ್ತಿದೆ? ಇದು ನನಗೆ ತಿಳಿದಿಲ್ಲ. ದೆಹಲಿ ಅಥವಾ ಭಾರತದಲ್ಲಿ ಚುನಾವಣೆಯ ಸಮಯ ಬಂದಾಗಲೆ ನಡೆಯುತ್ತದೆ; ಆದರೆ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ನಡೆಯುತ್ತಿದೆ. (”ಭಾರತದ ಚುನಾವಣೆಯಲ್ಲಿ ರಾಷ್ಟ್ರ ನಿಷ್ಠೆಗೆ ಪೆಟ್ಟು ನೀಡುವುದಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಈಗಲಿಂದಲೇ ಕಟಿಬದ್ಧರಾಗಲು ಪ್ರಾರಂಭಿಸಿದ್ದಾರೆ’, ಎಂದು ಡಾ. ಜೈಶಂಕರ ಇವರು ಈ ಹೇಳಿಕೆ ಮಾಧ್ಯಮದಿಂದ ಹೇಳಿದರು, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು)