ಸಮಾಜದಲ್ಲಿ ‘ವಕೀಲಿ’ವೃತ್ತಿಯನ್ನು ಪ್ರತಿಷ್ಠಿತ (ಘನತೆಯ) ವಿಷಯವೆಂದು ಪರಿಗಣಿಸಲಾಗುತ್ತದೆ. ವಕೀಲರು ಹೇಗೆ ರಾಜಕೀಯ ಮುಖಂಡರಿಗೆ ಕಾನೂನಿನ ವಿಷಯದಲ್ಲಿ ಸಹಾಯ ಮಾಡುತ್ತಾರೆಯೋ, ಹಾಗೆಯೇ ಅವರು ಸಾಮಾಜಿಕ ಸಂಸ್ಥೆ, ಕಾರ್ಮಿಕ ಸಂಘಟನೆ, ದೇವಸ್ಥಾನ ಮುಂತಾದ ವಿವಿಧ ಘಟಕಗಳಿಗೂ ಮಾರ್ಗವನ್ನು ತೋರಿಸುತ್ತಾರೆ. ಆದುದರಿಂದ ‘ವಕೀಲರು’ ಸಮಾಜದ ಅವಿಭಾಜ್ಯ ಘಟಕವಾಗಿದ್ದಾರೆ. ಇಂತಹ ವಕೀಲರಿಗೆ ಸಾಧನೆಯನ್ನು ಮಾಡುವ ಆವಶ್ಯಕತೆಯನ್ನು ವಿವರಿಸುವ ಈ ಲೇಖನ ವನ್ನು ನಾವುನೋಡುವವರಿದ್ದೇವೆ.
೧. ನ್ಯಾಯಾಲಯಗಳಲ್ಲಿ ವಿಷಯಗಳನ್ನು ದೃಢವಾಗಿ ಮಂಡಿಸುವಾಗ ವಕೀಲರಲ್ಲಿ ‘ನಾನು ಹೇಳಿದ್ದೇ ಸರಿ’, ಎನ್ನುವ ಘಾತಕ ಪ್ರವೃತ್ತಿ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ
ವಕೀಲರಿಗೆ ಕಾನೂನಿನ ಹೊರತು ಇತರ ಅನೇಕ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ಇರುತ್ತದೆ. ಅವರು ವಿವಿಧ ವ್ಯವಸಾಯಗಳಲ್ಲಿನ ವಿಷಯಗಳನ್ನು ನೋಡುತ್ತಿರುತ್ತಾರೆ. ಅವರು ಕಟ್ಟಡ ಕಾಮಗಾರಿ ವ್ಯವಸಾಯಕರು, ಕಾರ್ಖಾನೆಗಳ ಮಾಲೀಕರು, ಕೃಷಿಕರು, ಆಸ್ಪತ್ರೆಗಳು, ಖಾಸಗಿ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು, ಶಿಕ್ಷಣಸಂಸ್ಥೆಗಳು ಹೀಗೆ ಎಲ್ಲರಿಗೂ ಕಾನೂನಿನ ಸಹಾಯ ಮಾಡುತ್ತಾರೆ. ಮಹತ್ವದ ವಿಷಯವೆಂದರೆ ವಕೀಲರ ಕ್ಷೇತ್ರದಲ್ಲಿ ತಮಗೆಷ್ಟು ಬರುತ್ತದೆ, ಎಂಬುದರ ಮೌಲ್ಯವನ್ನು ಮಾಡುವವರು ಅವರೇ ಆಗಿರುತ್ತಾರೆ. ಆದ್ದರಿಂದ ‘ನಮಗೆ ಎಲ್ಲವೂ ಬರುತ್ತದೆ’ ಎಂಬ ತಪ್ಪು ಅಭಿಪ್ರಾಯ ವಕೀಲರಲ್ಲಿ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ.
೨. ‘ತಮಗೆಲ್ಲ ಬರುತ್ತದೆ’, ಎಂಬ ಅಹಂಕಾರ ಇರುವುದರ ಅನಿವಾರ್ಯತೆ ಮತ್ತು ವಾಸ್ತವ
ಇಂತಹ ಮಾನಸಿಕತೆಯೂ ಒಂದು ವ್ಯಾವಸಾಯಿಕ ಅನಿವಾರ್ಯವೇ ಆಗಿರುತ್ತದೆ. ವಕೀಲರಿಗೆ ತಮ್ಮ ಅಧ್ಯಯನದ (ಅಭ್ಯಾಸದ) ಮೇಲೆ ವಿಶ್ವಾಸ ಇಲ್ಲದಿದ್ದರೆ ಮತ್ತು ‘ತಮ್ಮ ಪಕ್ಷ ನಿಜವಾಗಿದೆ’ ಎಂದೆನಿಸದಿದ್ದರೆ, ‘ತಾವು ಹೇಳುವುದು ಯೋಗ್ಯವೇ ಆಗಿದೆ’, ಎಂಬ ದೃಢ ಆತ್ಮವಿಶ್ವಾದಿಂದ ನ್ಯಾಯಾಲಯದಲ್ಲಿ ಖಟ್ಲೆಯನ್ನು ನಡೆಸುವುದು ಹೇಗೆ ? ಎದುರುಪಕ್ಷದ ಯಕ್ತಿವಾದವನ್ನು ನಿಷ್ಫಲಗೊಳಿಸುವುದು ಹೇಗೆ ? ಅಥವಾ ನ್ಯಾಯಾಧೀಶರಿಗೆ ‘ನಮ್ಮ ಪಕ್ಷವು ಸತ್ಯವಾಗಿದೆ’, ಎಂಬುದನ್ನು ಹೇಗೆ ಮನದಟ್ಟು ಮಾಡಿಕೊಡುವುದು ? ತಮ್ಮ ಹೇಳಿಕೆಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡುತ್ತಾ ಹೋದಂತೆ ವಕೀಲರಲ್ಲಿ ‘ತಾನು ಹೇಳಿದ್ದೇ ಸತ್ಯ’, ಎಂಬ ವೃತ್ತಿ ನಿರ್ಮಾಣವಾಗುತ್ತದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಇಂದು ನ್ಯಾಯವು ವ್ಯಕ್ತಿಸಾಪೇಕ್ಷ್ಷ ಕಲ್ಪನೆಯಾಗಿದೆ. ಕನಿಷ್ಠ ನ್ಯಾಯಾಲಯಕ್ಕೆ ಸರಿಯೆನಿಸಿದ ನ್ಯಾಯ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಸರಿಯೆನಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ‘ನ್ಯಾಯಾಧೀಶರು ನೀಡಿದ ತೀರ್ಪು ನ್ಯಾಯವೇ ಆಗಿರುತ್ತದೆ’, ಎಂದು ಹೇಳಲು ಬರುವುದಿಲ್ಲ. ಎದುರು ಪಕ್ಷದ ವಕೀಲರೂ ತಮ್ಮ ಪಕ್ಷವೇ ಸತ್ಯವಾಗಿದೆ ಎಂದು ಹೇಳಬಹುದು. ಹೀಗಿರುವಾಗ ‘ತಮ್ಮದೇ ಸತ್ಯ ಎಂದು ತಿಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರಲ್ಲಿ ಬದಲಾವಣೆ ಮಾಡುವುದು ವಕೀಲರ ಕೈಯಲ್ಲಿರುವುದಿಲ್ಲ. ರೈತನು ತನ್ನ ಕೃಷಿ ಭೂಮಿಯ ಗುಣವನ್ನು ಬದಲಾಯಿಸಬಹುದು, ಅವನಿಗೆ ಬೇಕಾದ ಬೆಳೆಯನ್ನು ತನ್ನ ಹೊಲದಲ್ಲಿ ಬೆಳೆಸಬಹುದು, ಬದಲಾವಣೆ ಯನ್ನು ಮಾಡುವ ಕೆಲವೊಂದು ಕೃತಿಗಳು ಅವನ ಕೈಯಲ್ಲಿರುತ್ತವೆ; ವಕೀಲರಲ್ಲಿ ಹಾಗಿರುವುದಿಲ್ಲ, ಅವರಿಗಿರುವ ಪರಿಸ್ಥಿತಿಯನ್ನು ಸ್ವೀಕರಿಸಿ ಎಲ್ಲವನ್ನೂ ಮಾಡಬೇಕಾಗುತ್ತದೆ.
೩. ವಕೀಲರು ಸಾಧನೆ ಮತ್ತು ಅಧ್ಯಾತ್ಮವನ್ನು ಕಲಿತುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ
ಆಧ್ಯಾತ್ಮಿಕ ಸ್ತರದಲ್ಲಿ ನೋಡಿದರೆ ವಕೀಲ ರಲ್ಲಿರುವ ಏಕಾಗ್ರತೆ ಮತ್ತು ಬುದ್ಧಿಶಕ್ತಿಯು ಅವರ ಪೂರ್ವಜನ್ಮದ ಸಾಧನೆಯಿಂದ ಬಂದಿರುತ್ತದೆ. ಹಣ, ಪ್ರಸಿದ್ಧಿ ಮತ್ತು ಯಶಸ್ಸು ಸಿಗಲೂ ಪೂರ್ವಪುಣ್ಯವೇ ಕಾರಣವಾಗಿರುತ್ತದೆ. ಅಂದರೆ ‘ಇದೆಲ್ಲವೂ ಪೂರ್ವಜನ್ಮದಿಂದ ಸಿಗುತ್ತದೆ’, ಎಂದು ನಾನು ಹೇಳುತ್ತಿಲ್ಲ; ಆದರೆ ಈ ವಿಷಯಗಳು ಅವರಿಗೆ ಸಹಜ ಸಾಧ್ಯವಾಗುವುದರಿಂದ ‘ನಮಗೆ ಇದಕ್ಕಿಂತ ಬೇರೆ ಏನಾದರೂ ಪಡೆಯಬೇಕು’, ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಬರುವುದಿಲ್ಲ; ಆದರೆ ‘ಏಕಾಗ್ರತೆ ಮತ್ತು ಬುದ್ಧಿಯನ್ನು ನಾವು ಜನ್ಮಕ್ಕೆ ಬರುವಾಗ ಹೇಗೆ ತೆಗೆದುಕೊಂಡು ಬಂದೆವು ?’, ಎನ್ನುವ ಒಗಟನ್ನು ಬಿಡಿಸಲು ಅವರು ಎಂದಿಗೂ ಇಚ್ಛಿಸುವುದಿಲ್ಲ. ಅವರಲ್ಲಿಗೆ ಬರುವ ಪಕ್ಷಕಾರನು ತನ್ನ ಸಮಸ್ಯೆಗೆ ಉಪಾಯವನ್ನು ಕೇಳಲು ಬಂದಿರುತ್ತಾನೆ. ಆದ್ದರಿಂದ ಸಾಮಾನ್ಯವಾಗಿ ವಕೀಲರು ಎದುರಿನ ವ್ಯಕ್ತಿಗೆ ‘ಹೇಳುವ’ ಸ್ಥಿತಿಯಲ್ಲಿರುತ್ತಾರೆ. ಈ ಸ್ಥಿತಿಯು ಈ ವ್ಯವಸಾಯದ ಮತ್ತು ವಕೀಲರ ವ್ಯಕ್ತಿತ್ವದ ಒಂದು ಭಾಗವಾಗಿ ಹೋಗುತ್ತದೆ. ಆಗ ಅವರಿಗೆ ‘ನಮಗೆ ಕಾನೂನಿನ ವಿಷಯದಲ್ಲಿ ಬಹಳಷ್ಟು ತಿಳಿಯುತ್ತದೆ, ಹೀಗಿರುವಾಗ ನಮಗೆ ಅಧ್ಯಾತ್ಮವೂ ತಿಳಿಯುತ್ತದೆ’, ಎಂದು ತಿಳಿದುಕೊಳ್ಳುವ ಪ್ರಕ್ರಿಯೆ ಬೇಗನೆ ಆಗಬಹುದು. ‘ಇಂದು ಸಮಾಜದಲ್ಲಿ ಸಾಧನೆ ಮತ್ತು ಅಧ್ಯಾತ್ಮವನ್ನು ಕಲಿತುಕೊಳ್ಳುವ ಅತೀ ಹೆಚ್ಚು ಅವಶ್ಯಕತೆ ಯಾರಿಗಾದರೂ ಇದ್ದರೆ, ಅದು ವಕೀಲರಿಗಿದೆ’, ಎಂದು ನನಗೆ ಅನಿಸುತ್ತದೆ. ಅದಕ್ಕೆ ಈ ಮುಂದಿನ ಕಾರಣಗಳನ್ನು ಕೊಡಬಹುದು.
೩ ಅ. ಸಮಾಜದ ದೃಷ್ಟಿಕೋನದಿಂದ ವಕೀಲರ ಮಹತ್ವ : ವಕೀಲನು ಮೂಲತಃ ಒಬ್ಬ ಸಾಮಾಜಿಕ ಶಾಸ್ತ್ರಜ್ಞ ಅಥವಾ ಸಾಮಾಜಿಕ ಅಭಿಯಂತನಾಗಿದ್ದಾನೆ. ಶಾಸ್ತ್ರಜ್ಞರ ಭೂಮಿಕೆ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ವಕೀಲನದ್ದಾಗಿದ್ದರೂ, ಕನಿಷ್ಠ ನ್ಯಾಯಾಲಯಗಳಲ್ಲಿ ವ್ಯವಸಾಯ ಮಾಡುವವರೂ ಅಭಿಯಂತರೇ ಆಗಿರುತ್ತಾರೆ, ಎಂದು ಹೇಳಬಹುದು. ಕಾನೂನಿನ ಮಾಧ್ಯಮದಿಂದ ಸಮಾಜದ ವಿಕಾಸದ ಪ್ರಕ್ರಿಯೆ ನಡೆಯುತ್ತದೆ. ಕಾನೂನುಗಳು ಎಲ್ಲಿ ತಪ್ಪುತ್ತವೆ ? ಅವು ಎಲ್ಲಿ ಅಪೂರ್ಣವಾಗಿವೆ ? ಸಮಾಜಕ್ಕೆ ಲಾಭವಾಗಲು ಅವುಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ? ಎಂಬುದನ್ನು ವಕೀಲರು ಚೆನ್ನಾಗಿ ತಿಳಿದುಕೊಳ್ಳಬಹುದು. ಇದು ಸಮಾಜದ ದೃಷ್ಟಿಕೋನದಲ್ಲಿದ್ದರೂ ಅವರಿಗೆ ತಮ್ಮ ದೃಷ್ಟಿಯಲ್ಲಿ ಸಾಧನೆಯ ಅವಶ್ಯಕತೆ ಬಹಳಷ್ಟಿದೆ.
೩ ಆ. ಆಧುನಿಕ ವೈದ್ಯರು ನೀಡಿದ ಔಷಧಗಳ ಸಹಾಯದಿಂದ ರೋಗಿ ಗುಣಮುಖನಾಗುತ್ತಾನೆ : ರೋಗಿಯು ಯಾವುದಾದರು ಆಧುನಿಕ ವೈದ್ಯರ (ಡಾಕ್ಟರರ) ಬಳಿ ಹೋಗುವಾಗ ಜ್ವರ, ಹೊಟ್ಟೆನೋವಿನಂತಹ ತೊಂದರೆಗಳೊಂದಿಗೆ ಹೋಗುತ್ತಾನೆ. ಈ ಶಾರೀರಿಕ ತೊಂದರೆಗಳ ಕಡೆಗೆ ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವುದಾದರೆ, ಮನುಷ್ಯನ ಶರೀರವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಂದ ತಯಾರಾಗಿದೆ. ಪಂಚಮಹಾಭೂತಗಳ ರಚನೆಯಲ್ಲಿ ಏನಾದರೂ ಏರುಪೇರಾದರೆ ರೋಗಗಳು ಉದ್ಭವಿಸುತ್ತವೆ. ವೈದ್ಯರು ನೀಡಿದ ಔಷಧಿಗಳಿಂದ ಈ ಏರುಪೇರು ಸಮಪ್ರಮಾಣವಾಗಲು ಸಹಾಯವಾಗುತ್ತದೆ ಮತ್ತು ರೋಗಿ ಗುಣಮುಖನಾಗುತ್ತಾನೆ.
೩ ಇ. ಕ್ರಿಮಿನಲ್ ಖಟ್ಲೆಗಳ ಮೂಲಕ್ಕೆ ಹೋದರೆ ಮನುಷ್ಯನ ಷಡ್ರಿಪು, ಅವನ ಅಹಂ ಮತ್ತು ಅವನ ಪ್ರಾರಬ್ಧ ಅಥವಾ ಕರ್ಮಫಲನ್ಯಾಯ ಇರುವುದು ಗಮನಕ್ಕೆ ಬರುವುದು : ವಕೀಲರ ಬಳಿ ಬರುವ ಪಕ್ಷಕಾರರ ಸ್ಥಿತಿ ಹೇಗಿರುತ್ತದೆ ? ನಾವು ಮೊದಲು ಕ್ರಿಮಿನಲ್ ಖಟ್ಲೆ, ಅಂದರೆ ಅಪರಾಧಿ ಖಟ್ಲೆಗಳ ವಿಚಾರ ಮಾಡೋಣ. ಕ್ರಿಮಿನಲ್ ನ್ಯಾಯಾಲಯಗಳಲ್ಲಿ ವಕೀಲರು ತಮ್ಮ ಪಕ್ಷಕಾರರ ಪ್ರತಿನಿಧಿತ್ವವನ್ನು ಮಾಡುತ್ತಾರೆ. ಈ ಪಕ್ಷಕಾರರ ವಿರುದ್ಧ ಮೋಸ, ಕಳ್ಳತನ, ದರೋಡೆ, ಕೊಲೆ, ಮಾನಭಂಗ, ಬಲಾತ್ಕಾರ, ಆಹಾರಧಾನ್ಯ ಔಷಧಗಳಲ್ಲಿ ಕಲಬೆರಕೆ, ನಕಲಿ ಕಾಗದಪತ್ರಗಳನ್ನು ತಯಾರಿಸುವುದು, ಭ್ರಷ್ಟಾಚಾರ ಈ ಸಂದರ್ಭದಲ್ಲಿನ ಬೇರೆ ಬೇರೆ ರೀತಿಯ ಅಪರಾಧಗಳನ್ನು ದಾಖಲಿಸಿರುತ್ತಾರೆ. ಹೇಗೆ ನಾವು ವೈದ್ಯಕೀಯ ಕ್ಷೇತ್ರದಲ್ಲಿ ಪಂಚಮಹಾಭೂತಗಳ ಉದಾಹರಣೆಯನ್ನು ನೋಡಿದೆವೋ, ಹಾಗೆಯೇ ಈ ಕ್ರಿಮಿನಲ್ ಖಟ್ಲೆಗಳ ಮೂಲಕ್ಕೆ ಹೋದರೆ ಏನಿರಬಹುದು ? ಭಾರತೀಯ ಸಂಸ್ಕೃತಿ ಮತ್ತು ಹಿಂದೂತತ್ತ್ವಜ್ಞಾನದ ದೃಷ್ಟಿಕೋನದಿಂದ ನೋಡಿದರೆ, ಇದರ ಉತ್ತರವನ್ನು ೩ ಸ್ವರೂಪಗಳಲ್ಲಿ ಮತ್ತು ಒಟ್ಟಾಗಿ ಓದಬೇಕಾಗುವುದು, ಅವುಗಳೆಂದರೆ, ಮನುಷ್ಯನ ಷಡ್ರಿಪುಗಳು, ಅವನ ಅಹಂಕಾರ ಮತ್ತು ಅವನ ಪ್ರಾರಬ್ದ ಅಥವಾ ಕರ್ಮಫಲನ್ಯಾಯ ! ಆದರೆ ಅವುಗಳನ್ನು ಸಂಸತ್ತು, ವಿಧಿ ಆಯೋಗ ಮತ್ತು ಸರ್ವೋಚ್ಚ ನ್ಯಾಯಾಲಯ ಇವುಗಳಲ್ಲಿ ಯಾರೂ ಅಧ್ಯಯನ ಮಾಡುವುದಿಲ್ಲ.
೩ ಈ. ಅಪರಾಧಗಳು ಘಟಿಸಲು ಷಡ್ರಿಪುಗಳೇ ಕಾರಣವಾಗಿರುವುದು : ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಇವು ಮನುಷ್ಯನ ಷಡ್ರಿಪುಗಳು, ಅಂದರೆ ಶತ್ರುಗಳಾಗಿವೆ ಎಂದು ಹೇಳಿದ್ದಾನೆ. ಇವುಗಳಲ್ಲಿನ ಯಾವುದಾದರೊಂದು ರಿಪುವಿನಿಂದ ಅಥವಾ ಇತರ ಎರಡು ಅಥವಾ ಮೂರು ರಿಪುಗಳಿಂದ ಅಪರಾಧ ವಾಗುತ್ತದೆ. ಉದಾಹರಣೆ ಹೇಳುವುದಾದರೆ, ಬಲಾತ್ಕಾರಿಗೆ ಕಾಮ ಮತ್ತು ಮೋಸಗಾರನಿಗೆ ಲೋಭವನ್ನು ನಿಯಂತ್ರಣ ದಲ್ಲಿಡಲು ಆಗುವುದಿಲ್ಲ. ಲೋಭದ ಜೊತೆಗೆ ‘ಮದ ಅಂದರೆ ‘ಇವನು ನನಗೇನು ಮಾಡಬಲ್ಲನು ? ಅವನನ್ನು ನಾನು ನೋಡಿಕೊಳ್ಳುತ್ತೇನೆ, ಇಂತಹ ಭಾವನೆ ಇರುತ್ತದೆ.
೪. ಅಹಂಕಾರಕ್ಕೆ ಪೆಟ್ಟಾದುದರಿಂದ ಇಬ್ಬರು ಸಹೋದರರಲ್ಲಿ ವಿವಾದವುಂಟಾಗಿ ಅದು ನ್ಯಾಯಾಲಯದವರೆಗೆ ಹೋಗುವುದು
ದಿವಾಣಿ ಖಟ್ಲೆಗಳಲ್ಲಿ ಷಡ್ರಿಪುಗಳು ನಿಶ್ಚಿತವಾಗಿ ಕಾರಣ ವಾಗಿರುತ್ತವೆ; ಅವುಗಳ ಜೊತೆಗೆ ಅಹಂಕಾರವೂ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಅದರ ಒಂದು ಉದಾಹರಣೆಯನ್ನು ನೋಡೊಣ. ಹೊಲದ ಒಡ್ಡಿನಿಂದಾಗಿ ಇಬ್ಬರು ಸಹೋದರಲ್ಲಿ ಅಥವಾ ರೈತರಲ್ಲಿ ಜಗಳವಾಗುತ್ತದೆ. ಕೋರ್ಟ್-ಕಚೇರಿ ಆರಂಭವಾಗುತ್ತದೆ. ಒಬ್ಬ ಸಹೋದರ ತನ್ನ ವಕೀಲರಿಗೆ ಹೇಳುತ್ತಾನೆ “ಸಾಹೇಬರೆ, ಎಷ್ಟು ಹಣ ಖರ್ಚಾದರೂ ಸರಿ; ಈ ಸಹೋದರನನ್ನು ನಾನು ಬಿಡುವುದಿಲ್ಲ. ನಾನು ಅವನಿಗೆ ಪಾಠ ಕಲಿಸದೆ ಬಿಡುವುದಿಲ್ಲ. ಈ ಭೂಮಿ ಮಾರಾಟವಾದರೂ ಚಿಂತೆಯಿಲ್ಲ. ನೀವು ಖಟ್ಲೆ ದಾಖಲಿಸಿರಿ. ಹೊಲದ ಒಡ್ಡಿನ ಜಗಳದಿಂದ ಅವನು ಹೊಲವನ್ನು ಮಾರಾಟ ಮಾಡುವ ವಿಷಯವನ್ನು ಏಕೆ ಮಾತನಾಡುತ್ತಾನೆ ? ಏಕೆಂದರೆ ಅವನ ಅಹಂಕಾರಕ್ಕೆ ಪೆಟ್ಟಾಗಿರುತ್ತದೆ. ವಕೀಲರು ಅವರ ಕಡೆಗೆ ಬರುವ ಪಕ್ಷಕಾರರ ಮನಸ್ಸನ್ನು ಸ್ವಲ್ಪ ಇಣುಕಿ ನೋಡಬೇಕು. ಅವರಿಗೆ ಇಂತಹ ಭಾವನೆಗಳು ನೋಡಲು ಸಿಗುವುದು ಖಚಿತ.
೫. ಕರ್ಮಫಲನ್ಯಾಯಕ್ಕನುಸಾರ ದೋಷಿ ವ್ಯಕ್ತಿ ನಿರ್ದೋಷಿ ಎಂದು ಬಿಡುಗಡೆಯಾಗುವುದು ಅಥವಾ ನಿರಪರಾಧಿಗೆ ಶಿಕ್ಷೆಯಾಗುವುದು
ಯಾರಾದರೂ ಹೀಗೆ ಕೇಳಬಹುದು, ‘ಯಾವುದಾದರೊಬ್ಬ ನಿರಪರಾಧಿ ವ್ಯಕ್ತಿಯನ್ನು ಪೊಲೀಸರು ಇಲ್ಲಸಲ್ಲದ ಖಟ್ಲೆಯಲ್ಲಿ ಸಿಲುಕಿಸುತ್ತಾರೆ, ಅದರ ಬಗ್ಗೆ ಏನು ? ಈ ಪ್ರಶ್ನೆ ಯೋಗ್ಯವಾಗಿದೆ. ಇದರ ಉತ್ತರವನ್ನೂ ನಮಗೇ ಕಂಡುಕೊಳ್ಳಬೇಕಾಗುವುದು. ಇದು ಪೊಲೀಸರ ಪಾಪವಾಗಿದೆಯೇ ಅಥವಾ ಆ ನಿರಪರಾಧಿ ವ್ಯಕ್ತಿಯ ಹಿಂದಿನ ಪ್ರಾರಬ್ಧವಾಗಿದೆಯೇ ? ಎಂಬುದನ್ನು ಹುಡುಕಬೇಕಾಗುವುದು. ಪೊಲೀಸರ ಪಾಪವಾಗಿದ್ದರೆ ಅಲ್ಲಿ ಅವರ ಅಹಂಕಾರ ಅಥವಾ ಅವರ ದೋಷಗಳು ಕಾರ್ಯನಿರತ ವಾಗಿರುತ್ತವೆ. ಅದರಿಂದ ಹೊಸ ಲೆಕ್ಕಾಚಾರವನ್ನು ಆ ಪೊಲೀಸರು ನಿರ್ಮಾಣ ಮಾಡುತ್ತಿರಬಹುದು ? ಇಂತಹ ಪ್ರಶ್ನೆಗಳನ್ನು ನಾವು ಮೊದಲು ವ್ಯಾಪಕ ದೃಷ್ಟಿಯಿಂದ ನೋಡಬೇಕಾಗುವುದು. ಬಹಳಷ್ಟು ಸಲ ದೊಡ್ಡ ಸಮಸ್ಯೆಗಳು ನಿವಾರಣೆಯಾದರೆ ಸಣ್ಣ ಸಮಸ್ಯೆಗಳು ತನ್ನಿಂತಾನೇ ನಿವಾರಣೆಯಾಗುತ್ತವೆ. ಈ ವಿಷಯವನ್ನು ಹಾಗೆಯೆ ನೋಡಬೇಕಾಗುವುದು.
ಅನೇಕ ಬಾರಿ ನಿರಪರಾಧಿ ವ್ಯಕ್ತಿಗೆ ಶಿಕ್ಷೆಯಾಗುತ್ತದೆ ಮತ್ತು ದೋಷಿ ವ್ಯಕ್ತಿಯು ನಿರ್ದೋಷಿ ಎಂದು ಬಿಡುಗಡೆಯಾಗುತ್ತಾನೆ, ಇಂತಹ ಪ್ರಕರಣಗಳ ಅನುಭವವವೂ ಬರುತ್ತದೆ. ಇದರ ಹಿಂದಿನ ಕಾರ್ಯಕಾರಣಭಾವ ಏನಿರಬಹುದು ? ಎಂಬುದರ ಚರ್ಚೆಗಳಾಗುವುದಿಲ್ಲ ಅಥವಾ ಚರ್ಚೆಯಾದರೆ ಅದನ್ನು ಪಾಶ್ಚಾತ್ಯರ ಕನ್ನಡಕದಿಂದ ಮಾಡಲಾಗುತ್ತದೆ. ಹಿಂದೂ ತತ್ತ್ವಜ್ಞಾನಕ್ಕನುಸಾರ ನೋಡಿದರೆ, ನಮಗೇನು ಕಾಣಿಸುತ್ತದೆ ?
‘ನಾವು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅವುಗಳ ಫಲವನ್ನು ನಾವೇ ಭೋಗಿಸಬೇಕಾಗುತ್ತದೆ, ಎಂದು ಹಿಂದೂಗಳ ಕರ್ಮಸಿದ್ಧಾಂತ ಹೇಳುತ್ತದೆ. ಇದೇನೂ ಹೊಸ ಸಂಕಲ್ಪನೆಯಲ್ಲ. ಇದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪಾಶ್ಚಾತ್ಯ ಭೌತವಿಜ್ಞಾನಿ ನ್ಯೂಟನ್‌ನ ಯಾವ ಮೂರನೇ ನಿಯಮವನ್ನು ಜಗತ್ತು ಒಪ್ಪುತ್ತದೆಯೋ, ಆ ನಿಯಮವೆಂದರೆ ‘ಪ್ರತಿಯೊಂದು ಕ್ರಿಯೆಗೆ ಅಷ್ಟೇ ಮತ್ತು ಅದರ ವಿರುದ್ಧ ಪ್ರತಿಕ್ರಿಯೆ ಇರುತ್ತದೆ. (Every action has equal and opposite reaction) ಹಾಗಾದರೆ ಕರ್ಮದ ಸಿದ್ಧಾಂತ ಇದಕ್ಕಿಂತ ಬೇರೆ ಏನಿದೆ ? ಇದರಲ್ಲಿ ವಕೀಲರು ತಮ್ಮ ವ್ಯವಸಾಯದಲ್ಲಿನ ಅನುಭವಗಳನ್ನು ನೆನಪಿಸಿಕೊಳ್ಳಬೇಕು. ನನ್ನ ಜೊತೆಗಿರುವ ಕೆಲವು ವಕೀಲರ ಅನುಭವ ಹೇಗಿದೆಯೆಂದರೆ, ಅಪರಾಧ ಮಾಡಿ ನಿರ್ದೋಷಿ ಎಂದು ಬಿಡುಗಡೆಯಾದವನು ತನ್ನ ನಂತರದ ಜೀವನವನ್ನು ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾನೆ ಎಂದಿರುವುದಿಲ್ಲ, ಅವನು ಪುನಃ ಅಪರಾಧ ಮಾಡಿ ಸೆರೆಮನೆಗೆ ಹೋಗುತ್ತಾನೆ ಅಥವಾ ಯಾವುದಾದರೊಂದು ದೊಡ್ಡ ಸಂಕಟಕ್ಕೀಡಾಗುತ್ತಾನೆ. ನಾವು ಇಂತಹ ಅನುಭವಗಳನ್ನು ಸಂಗ್ರಹಿಸಬೇಕು.
(ಮುಂದುವರಿಯುವುದು)
– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು (೩೦.೪.೨೦೨೨)
ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ಹಾಗೂ ಹಿತಚಿಂತಕರಿಗೆ ವಿನಂತಿ !ಈ ಲೇಖನವನ್ನು ಓದಿದ ನಂತರ ವಕೀಲರು ಅಥವಾ ಸಮಾಜದಲ್ಲಿನ ವ್ಯಕ್ತಿಗಳಲ್ಲಿ ಯಾರಾದರೂ ನ್ಯಾಯಪ್ರಕ್ರಿಯೆಯ ಲೇಖನದಲ್ಲಿ ಹೇಳಿದಂತೆ ಅನುಭವ ಪಡೆದಿದ್ದರೆ, ಅಂತಹವರಿಗೆ ಈ ವಿಷಯದಲ್ಲಿ ಏನಾದರೂ ಹೇಳಲಿಕ್ಕಿದ್ದರೆ, ಅವರು ಈ ಮುಂದಿನ ವಿಳಾಸಕ್ಕೆ ತಮ್ಮ ಅನುಭವವನ್ನು ಕಳುಹಿಸಬೇಕು. ನಿಮ್ಮ ಹೆಸರನ್ನು ಗುಪ್ತವಾಗಿಡಬೇಕೆಂದು ಅನಿಸಿದರೆ ಹಾಗೆ ಮಾಡಲಾಗುವುದು. ವಿಳಾಸ : ನ್ಯಾಯವಾದಿ ನೀಲೆಶ ಸಾಂ>ಗೋಲಕರ್, ‘ಸುಖಠಣಕರ ರಿಟ್ರೀಟ್, ಫ್ಲಾಟ್ ಕ್ರ. ಎಜಿ-೪, ವಾಗದೋರ, ನಾಗೇಶಿ, ಫೋಂಡಾ, ಗೋವಾ. ೪೦೩೪೦೧ ಸಂಪರ್ಕ ಕ್ರ. : ೯೫೯೫೯೮೪೮೪೪ ವಿ-ಅಂಚೆ : socialchange.n@gmail |