ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

‘ಬೆಳಗ್ಗೆ ಉಪಾಹಾರ ಮಾಡುವುದು, ಇದರಿಂದ ವಾತ, ಪಿತ್ತ ಮತ್ತು ಕಫಗಳ ಸಮತೋಲನವು ಹದಗೆಡುವುದು, ಹಾಗೆಯೇ ರೋಗ ಉತ್ಪತ್ತಿಗೆ ಕಾರಣವಾಗುತ್ತದೆ, ಎಂದು ಮಹರ್ಷಿ ವಾಗಭಟ್ಟರು ಹೇಳುವುದು

‘ಸನಾತನ ಪ್ರಭಾತದ ೨೪/೨೧ ನೇ ಸಂಚಿಕೆಯ ಲೇಖನದಲ್ಲಿ ನಾವು, ‘ವಾತ, ಪಿತ್ತ ಮತ್ತು ಕಫ ಇವುಗಳ ‘ಅಸಮತೋಲನ’ವೇ ಎಲ್ಲ ರೋಗಗಳಿಗೆ ಕಾರಣವಾಗಿದೆ.’ ಎಂದು ಓದಿದೆವು.

ಪ್ರಾತರಾಶೇ ತ್ವಜೀರ್ಣೇಽಪಿ ಸಾಯಮಾಶೋ ನ ದುಷ್ಯತಿ |

ಅಜೀರ್ಣೇ ಸಾಯಮಾಶೇ ತು ಪ್ರಾತರಾಶೋ ಹಿ ದುಷ್ಯತಿ ||

– ಅಷ್ಟಾಙ್ಗಸಙ್ಗ್ರಹ, ಸೂತ್ರಸ್ಥಾನ, ಅಧ್ಯಾಯ ೧೧, ಶ್ಲೋಕ ೫೫

ಅರ್ಥ : ಬೆಳಗಿನ ಊಟವು ಜೀರ್ಣವಾಗದಿರುವಾಗ ಸಾಯಂಕಾಲ

ಊಟ ಮಾಡಿದರೆ ಅದು ಸಾಮಾನ್ಯವಾಗಿ ಹಾನಿಕರವಲ್ಲ; ಆದರೆ ಸಾಯಂಕಾಲದ (ರಾತ್ರಿಯ) ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ತಿಂದರೆ ‘ಖಚಿತವಾಗಿ ದೋಷಗಳ ಸಮತೋಲನ ಕೆಡುತ್ತದೆ. (ವಾತ, ಪಿತ್ತ ಮತ್ತು ಕಫ ಇವುಗಳ ಸಮತೋಲನವು ಖಂಡಿತ ಹಾಳಾಗುತ್ತದೆ.)’ ಕೇವಲ ‘ಹಸಿವಾಗುವುದು’ ಇದು ಊಟ ಜೀರ್ಣವಾಗಿರುವ ಲಕ್ಷಣವಲ್ಲ’, ಎಂಬುದನ್ನು ಗಮನದಲ್ಲಿಡುವುದು ತುಂಬಾ ಮಹತ್ವದ್ದಾಗಿದೆ. ಬೆಳಗ್ಗೆ ಉಪಹಾರದ ವೇಳೆ ರಾತ್ರಿಯ ಊಟವು ಜೀರ್ಣವಾಗಿರುವುದಿಲ್ಲ; ಆದರೆ ಎಂದಿನಂತೆ ರೂಢಿಯಿಂದಾಗಿ ಹಸಿವಾಗುತ್ತದೆ ಮತ್ತು ನಾವು ಉಪಾಹಾರವನ್ನು ಮಾಡುತ್ತೇವೆ. ಮಹರ್ಷಿ ವಾಗಭಟ್ಟರ ಮೇಲಿನ ಸೂತ್ರಕ್ಕನುಸಾರ ಇದೇ ವಾತ, ಪಿತ್ತ ಮತ್ತು ಕಫ ಇವುಗಳ ಅಸಮತೋಲನ ಹದಗೆಡಲು ಮತ್ತು ರೋಗ ಉತ್ಪತ್ತಿಗೆ ಕಾರಣವಾಗುತ್ತದೆ. ನಿಖರವಾಗಿ ೪ ದಿನ ಬೆಳಗ್ಗೆ ಉಪಾಹಾರವನ್ನು ಮಾಡದಿದ್ದರೆ ಬೆಳಗ್ಗೆ ಹಸಿವಾಗುವುದು ನಿಲ್ಲುತ್ತದೆ ಮತ್ತು ನೇರವಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಹಸಿವಾಗುತ್ತದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ