ಹಲ್ಲಿನ ಬೇರುಗಳಲ್ಲಿ ಸಂಗ್ರಹವಾದ ಕೊಳೆ ಹೋಗದಿದ್ದರೆ ದಂತವೈದ್ಯರ ಬಳಿಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಬೇಕು !

ವೈದ್ಯ ಮೇಘರಾಜ ಪರಾಡಕರ್

‘ನಿಯಮಿತವಾಗಿ ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದರಿಂದ ಹಲ್ಲುಗಳ ಬೇರುಗಳಲ್ಲಿ ಬಿಳಿ ಅಥವಾ ಹಳದಿ ಅಡ್ಡ ಗೆರೆಗಳು ಕಾಣಿಸತೊಡಗುತ್ತವೆ. ಇದು ಹಲ್ಲುಗಳ ಬುಡದಲ್ಲಿ ಸಂಗ್ರಹವಾದ ಕೊಳೆ ಇರುತ್ತದೆ. ಹಲ್ಲುಗಳ ಬೇರುಗಳ ಮೇಲೆ ದೀರ್ಘಕಾಲ ಕೊಳೆ ಇದ್ದರೆ, ಹಲ್ಲುಗಳ ಬೇರುಗಳು ದುರ್ಬಲವಾಗ ಬಹುದು. ಒಸಡುಗಳು ದುರ್ಬಲವಾಗಿ ಹಲ್ಲುಗಳನ್ನು ಉಜ್ಜುವಾಗ ಒಸಡುಗಳಿಂದ ರಕ್ತ ಬರುತ್ತದೆ. ಹಲ್ಲುಗಳನ್ನು ಆರೋಗ್ಯವಾಗಿಡಲು ಹಲ್ಲುಗಳ ಬೇರುಗಳಲ್ಲಿರುವ ಈ ಕೊಳೆಯನ್ನು ತೆಗೆಯಬೇಕಾಗುತ್ತದೆ; ಆದರೆ ಹಲ್ಲು ಬ್ರಶ್‌ನಿಂದ ಉಜ್ಜಿದರೆ ಈ ಕೊಳೆ ಹೋಗುವುದಿಲ್ಲ. ಆದ್ದರಿಂದ ದಂತವೈದ್ಯರ ಬಳಿಗೆ ಹೋಗಿ ತಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ಅವರ ಸಲಹೆಯಂತೆ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಅನಂತರ ಪುನಃ ಕೊಳೆ ಸಂಗ್ರಹವಾಗಬಾರ ದೆಂದು ತಿಂದ ನಂತರ ಪ್ರತಿಸಲ ಹಲ್ಲುಗಳನ್ನು ಸ್ವಚ್ಛವಾಗಿ ತೊಳೆಯಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧.೨೦೨೩)