‘ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುವ ಮಧ್ಯದ ಕಾಲದಲ್ಲಿ ಶೀತ, ಕೆಮ್ಮು, ದಮ್ಮು ಇವುಗಳಂತಹ ಕಫದ ರೋಗಗಳು ಹೆಚ್ಚಾಗುತ್ತವೆ. ಚಳಿ ಕಡಿಮೆಯಾದ ನಂತರ ಸುಮಾರು ೧೫ ದಿನ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಕಾಲು ಚಮಚದಷ್ಟು ಸನಾತನ ಶುಂಠಿ ಚೂರ್ಣ, ಕಾಲು ಚಮಚ ಜೇನುತುಪ್ಪ ಅಥವಾ ಅರ್ಧ ಬಟ್ಟಲು ಉಗುರುಬಿಸಿ ನೀರಿನಲ್ಲಿ ಸೇರಿಸಬೇಕು ಅಥವಾ ಚಹಾ ಅಥವಾ ಕಶಾಯಗಳಲ್ಲಿ ರುಚಿಗೆ ತಕ್ಕಷ್ಟು ಸನಾತನ ಶುಂಠಿ ಚೂರ್ಣವನ್ನು ಹಾಕಿ ಕುದಿಸಿ ಕುಡಿಯಬೇಕು. (ಅಳತೆಗಾಗಿ ಚಹಾದ ಚಮಚ ಉಪಯೋಗಿಸಬೇಕು.) ಇದರಿಂದ ಕಫದ ರೋಗಗಳನ್ನು ನಿಯಂತ್ರಿಸಲು ಸಹಾಯ ವಾಗುತ್ತದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ