ಹಳಿಯಾಳದಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಹಿಂದೂ ಐಕ್ಯ 

(ಎಡದಿಂದ) ಸೌ. ವಿದುಲಾ ಹಳದಿಪುರ, ಶ್ರೀ. ಮಹಾದೇವ ಸಾಗರೆಕರ, ಶ್ರೀ. ಗುರುಪ್ರಸಾದ ಗೌಡ ಇವರು ಸಭೆಯನ್ನು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು

ಹಳಿಯಾಳ – ಹಿಂದೂಗಳ ಮೇಲಾಗುವ ಅನ್ಯಾಯವನ್ನು ಬಯಲಿಗೆಳೆಯಲು ಮತ್ತು ಧರ್ಮಶಿಕ್ಷಣದ ಮೂಲಕ ಹಿಂದೂಗಳನ್ನು ಸಂಘಟಿಸಲು ಇಲ್ಲಿನ ಪಿಡಬ್ಲ್ಯೂಡಿ ಕಚೇರಿ ಪಕ್ಕದಲ್ಲಿರುವ ಗ್ರಾಮದೇವಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೧ ಮಾರ್ಚ್ ೨೦೨೩ ರಂದು ಹಿಂದೂ ರಾಷ್ಟ್ರಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯನ್ನು ಗೋಕಾಕ್‌ನ ಶ್ರೀ. ಮಹಾದೇವ ಸಾಗರೆಕರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಇವರು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜು ಧರೆಯಣ್ಣನವರು ಹಿಂದೂ ಜನಜಾಗೃತಿ ಸಮಿತಿಯ ಪರಿಚಯ ಮಾಡಿದರು. ಕು. ಪದ್ಮಾ ಉಪ್ಪಾರ ಕಾರ್ಯಕ್ರಮದ ಸೂತ್ರಸಂಚಾಲನೆ ಮಾಡಿದರು.

ನಮಗೆ ನಮ್ಮ ಧರ್ಮ ಮುಖ್ಯ – ಶ್ರೀ. ಮಹಾದೇವ ಸಾಗರೆಕರ

ಎಲ್ಲ ಹಿಂದೂಗಳು ಒಗ್ಗಟ್ಟಾಗಿ ಸೇರಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಇಡಬೇಕು, ರಾಷ್ಟ್ರ ರಕ್ಷಣೆಗೆ ಯುವಕರು ಮುಂದಾಗಬೇಕು, ನಮಗೆ ನಮ್ಮ ಧರ್ಮ ಮುಖ್ಯ.

ಇಡೀ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಲು ಆಗ್ರಹಿಸುತ್ತಿದ್ದೇವೆ ! – ಶ್ರೀ. ಗುರುಪ್ರಸಾದ ಗೌಡ

ಕಳೆದ ೨೦ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಸಂಘಟನೆಗಳನ್ನು ಜೋಡಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು, ಶಿಬಿರಗಳನ್ನು ಆಯೋಜಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ದೇವಸ್ಥಾನದ ಸರ್ಕಾರಿಕರಣ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್ ಮೂಲಕ ಹಿಂದೂಗಳ ಅಸ್ತಿತ್ವವನ್ನು ನಾಶ ಮಾಡುವ ಕೆಲಸ ಆಗುತ್ತಿದೆ. ಹಿಂದೂ ರಾಷ್ಟ್ರ ಬೇಡಿಕೆ ಕೇವಲ ಹಳಿಯಾಳಕ್ಕೆ ಮಾತ್ರ ಸೀಮಿತವಲ್ಲ, ಇಡೀ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಲು ಆಗ್ರಹಿಸುತ್ತಿದ್ದೇವೆ,

ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಆಧ್ಯಾತ್ಮಿಕ ಸಾಧನೆ ಆವಶ್ಯಕತೆ – ಸೌ. ವಿದುಲಾ ಹಳದಿಪುರ

ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಬೇಕು. ಪ್ರತಿನಿತ್ಯ ಹಿಂದೂ ಧರ್ಮದ ಮೇಲೆ ಅನ್ಯಾಯ ಆಗುತ್ತಿದೆ, ಇದಕ್ಕೆಲ್ಲಾ ಒಂದೇ ಪರಿಹಾರ ಅದುವೇ ಹಿಂದೂ ರಾಷ್ಟ್ರದ ಸ್ಥಾಪನೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಧ್ಯಾತ್ಮಿಕ ಸಾಧನೆ ಅವಶ್ಯಕತೆಯಿದೆ.

ವೈಶಿಷ್ಟ್ಯಪೂರ್ಣ ಘಟನೆಗಳು

೧. ಈ ಸಭೆಗೆ ಲಕ್ಷ್ಮೇಶ್ವರ, ರಾಣೆಬೆನ್ನೂರು ಹೀಗೆ ದೂರದ ಊರುಗಳಿಂದ ಧರ್ಮಪ್ರೇಮಿಗಳು ಬಂದಿದ್ದರು.

೨. ನವಲಗುಂದದಿಂದ ಧರ್ಮಪ್ರೇಮಿಗಳು ೫ ದಿನ ಮುಂಚಿತವಾಗಿ ಬಂದು ಸಭೆಯ ಸೇವೆಯಲ್ಲಿ ಭಾಗಿಯಾಗಿದ್ದರು