ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ

ದೇವಘರ್ (ಜಾರ್ಖಂಡ್) ನಲ್ಲಿ ಹಿಂದೂದ್ವೇಷಿ ಸರಕಾರದಿಂದ ಮಹಾಶಿವರಾತ್ರಿ ಮೆರವಣಿಗೆಯ ಮಾರ್ಗವನ್ನು ಬದಲಾಯಿಸಿದ ಪ್ರಕರಣ

ಬಾಬಾ ಬೈದ್ಯನಾಥ ದೇವಾಲಯ

ದೇವಘರ್ (ಜಾರ್ಖಂಡ್) – ಶಿವನ ಪ್ರಾಚೀನ ಬಾಬಾ ಬೈದ್ಯನಾಥ ದೇವಾಲಯವಿರುವ ದೇವಘರ್‌ನಲ್ಲಿ ಮಹಾಶಿವರಾತ್ರಿಯ ಹಬ್ಬವನ್ನು ಆಚರಿಸಲು ಸ್ಥಳೀಯ ಆಡಳಿತವು ಅಡೆತಡೆ ತಂದಿದೆ. ಶಿವನ ಶೋಭಾಯಾತ್ರೆ ಹೊರಡುವ ಸ್ಥಳದಲ್ಲಿಯೇ ಸೆಕ್ಷನ್ 144 ವಿಧಿಸಲಾಗಿದೆ ಮತ್ತು ಅಲ್ಲಿಂದ ಮೆರವಣಿಗೆ ತೆಗೆಯುವುದನ್ನು ನಿಷೇಧಿಸಿದೆ. ಇದರ ವಿರುದ್ಧ ಭಾಜಪದ ಸ್ಥಳೀಯ ಸಂಸದ ಡಾ. ನಿಶಿಕಾಂತ್ ದುಬೆ ಅವರು ಆಡಳಿತದ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯವೂ ಆಡಳಿತದ ಪರವಾಗಿ ತೀರ್ಪು ನೀಡಿದ್ದು, ಸೆಕ್ಷನ್‌ 144 ಇದು ಸಾಮಾನ್ಯ ಭಕ್ತರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ. ಆಡಳಿತ ಸೂಚಿಸಿದ ಮಾರ್ಗದಲ್ಲಿಯೇ ಮೆರವಣಿಗೆ ಹೊರಡಬೇಕು ಎಂದೂ ಹೇಳಿದೆ.

ತೀರ್ಪಿನ ನಂತರ, ಡಾ. ದುಬೆ ಪರ ನ್ಯಾಯವಾದಿಗಳು ಗುಪ್ತಚರ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಮೆರವಣಿಗೆಯು ಸಾಮಾನ್ಯ ಮಾರ್ಗದಲ್ಲಿ ಸಾಗಿದರೆ ದಾಳಿಯಾಗುವ ಸಾಧ್ಯತೆಯಿದೆ ಹಾಗಾಗಿ ಆಡಳಿತ ತನ್ನ ಮಾರ್ಗವನ್ನು ಬದಲಿಸಿಕೊಂಡಿದೆ ಎಂದು ಹೇಳಿದ್ದಾರೆ.

ಈ ಹಿಂದೆ ರಾಜ್ಯದ ಭಾಜಪದ ನಾಯಕರು ಹೇಮಂತ್ ಸೊರೇನ್ ಸರಕಾರದ ಈ ಕ್ರಮ ವಿರುದ್ಧ ಖಂಡಿಸಿದ್ದರು. ಮತದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪವೂ ಅವರ ಮೇಲಿತ್ತು. ಡಾ. ದುಬೆ ಇವರು ಪ್ರತಿಕ್ರಿಯಿಸುತ್ತಾ, 1994 ರಿಂದ ಮಹಾಶಿವರಾತ್ರಿಯಂದು ಪ್ರತಿ ವರ್ಷ ಇದೇ ಮಾರ್ಗದಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು, ಈ ವರ್ಷ ಆಡಳಿತ ಈ ರೀತಿ ಏಕೆ ಬದಲಾಯಿಸಿತು ? ಅಲ್ಲದೇ ಈ ಮಾರ್ಗ ತುಂಬಾ ವಿಶಾಲವಾಗಿದೆ. ಕಲಂ 144 (ಸಂಚಾರ ನಿಷೇಧ) ಹೇರಿರುವುದರಿಂದ ಶಿವನಿಗೆ ಜಲ ಅರ್ಪಿಸುವ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರೂ ಜೈಲಿಗೆ ಹೋಗಬೇಕೇ ?, ಎಂದು ಪ್ರಶ್ನಿಸಿದ್ದಾರೆ.

ಸಂಪಾದಕರ ನಿಲುವು

* ಬಹುಸಂಖ್ಯಾತ ಹಿಂದೂಗಳು ಭಾರತದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವಾಗ, ಹಿಂದೂಗಳ ಹಬ್ಬಗಳನ್ನು ಆಚರಿಸಲು ನಿಬಂಧನೆಗಳು ಬರುವುದು ಅಪೇಕ್ಷಿತವಿಲ್ಲ ! ಬೆದರಿಕೆಯ ಕಾರಣ ನೀಡುತ್ತಾ ಸ್ಥಳೀಯ ಆಡಳಿತವು ಹಿಂದೂಗಳ ಪರಂಪರೆಗಳನ್ನು ಬದಲಾಯಿಸುವುದು ಖಂಡನೀಯ. ಆದ್ದರಿಂದ ಉಚ್ಚ ನ್ಯಾಯಾಲಯವು ಆಡಳಿತದ ಕಿವಿ ಹಿಂಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !