ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆ ಬರಹ !
ಒಟಾವಾ (ಕೆನಡಾ) – ಕೆನಡಾದ ಮಿಸಿಸೋಂಗಾದಲ್ಲಿನ ಶ್ರೀರಾಮ ಮಂದಿರವನ್ನು ಫೆಬ್ರವರಿ ೧೪ ರಂದು ಧ್ವಂಸ ಮಾಡಿ ಅಲ್ಲಿ ಭಾರತ ವಿರೋಧಿ ಘೋಷಣೆಯನ್ನು ಬರೆದಿರುವ ಘಟನೆ ನಡೆದಿದೆ. ಈ ಘಟನೆಯ ಹಿಂದೆ ಖಲಿಸ್ತಾನಿಗಳಿದ್ದಾರೆಂದು ಹೇಳಲಾಗುತ್ತದೆ. ಟೊರೋಂಟೋದಲ್ಲಿನ ಭಾರತದ ವಾಣಿಜ್ಯ ರಾಯಭಾರಿ ಕಚೇರಿಯು ದೇವಸ್ಥಾನ ಧ್ವಂಸವನ್ನು ಖಂಡಿಸಿದೆ. ಹಾಗೂ ರಾಯಭಾರಿ ಕಚೇರಿಯು ಈ ಪ್ರಕರಣದಲ್ಲಿನ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ವಿನಂತಿಸಿದೆ.
೧. ಕೆನಡಾದಲ್ಲಿ ಈ ಹಿಂದೆ ಜನವರಿಯಲ್ಲಿ ಬ್ರಾಮ್ಟ್ಟನ್ವನಲ್ಲಿನ ಗೌರೀಶಂಕರ ದೇವಸ್ಥಾನದಲ್ಲಿ ಭಾರತ ವಿರೋಧಿ ಘೋಷಣೆ ಬರೆಯಲಾಗಿತ್ತು. ಅನಂತರ ಅಲ್ಲಿನ ಸ್ಥಳೀಯ ಹಿಂದೂ ನಾಗರಿಕರ ಸಹಿತ ಭಾರತದ ವಾಣಿಜ್ಯ ರಾಯಭಾರ ಕಚೇರಿಯು ಖೇದ ವ್ಯಕ್ತಪಡಿಸುತ್ತಾ, ‘ಘಟನೆಯಿಂದ ಕೆನಡಾದಲ್ಲಿರುವ ಹಿಂದೂಗಳ ಭಾವನೆಗೆ ನೋವಾಗಿದೆ’, ಎಂದು ಹೇಳುತ್ತಾ ತನಿಖೆಯ ಬೇಡಿಕೆ ಮಾಡಿತ್ತು.
೨. ಸಪ್ಟೆಂಬರ ೨೦೨೨ ರಲ್ಲಿ ಕೆನಡಾದಲ್ಲಿನ ಶ್ರೀ ಸ್ವಾಮಿನಾರಾಯಣ ದೇವಸ್ಥಾನವನ್ನು ಒಡೆದಿರುವ ಘಟನೆ ಬೆಳಕಿಗೆ ಬಂದಿತ್ತು. ಇವೆಲ್ಲ ಘಟನೆಗಳಲ್ಲಿ ಖಲಿಸ್ತಾನಿ ಬೆಂಬಲಿಗರ ಮೇಲೆ ಆರೋಪವಿದೆ. ಜುಲೈ ೨೦೨೨ ರಲ್ಲಿ ಕೂಡ ಗ್ರೇಟರ್ ಟೊರೋಂಟೋ ಪರಿಸರದಲ್ಲಿನ ರಿಚ್‌ಮಂಡ್ ಹಿಲ್‌ನಲ್ಲಿನ ಹಿಂದೂ ದೇವಸ್ಥಾನದಲ್ಲಿನ ಮಹಾತ್ಮಾ ಗಾಂಧಿಯ ಪ್ರತಿಮೆಯನ್ನು ಒಡೆದು ಹಾಕಲಾಗಿತ್ತು.
(ಸೌಜನ್ಯ : Republic World)
(ಈ ಚಿತ್ರ ಹಾಗೂ ವಿಡಿಯೋ ಪ್ರಸಾರ ಮಾಡುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ಸಂಪಾದಕೀಯ ನಿಲುವುಕೆನಡಾದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ಕಾಣಿಸುತ್ತಿದ್ದು ಅದಕ್ಕೆ ಅಲ್ಲಿನ ಸರಕಾರದ ಬೆಂಬಲವಿದೆ. ಭಾರತ ಸರಕಾರ ಈಗ ಇದರ ಕಡೆಗೆ ಗಮನ ಹರಿಸಿ ಇಂತಹ ಘಟನೆಗಳನ್ನು ತಡೆಯಲು ಹಾಗೂ ಖಲಿಸ್ತಾನಿಗಳ ಮೇಲೆ ಕಡಿವಾಣ ಹಾಕಲು ವಿಶ್ವ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ ! |