ಬಂಧಿತ ಆರೋಪಿ ಶಾಸಕ ಅಬ್ಬಾಸ್ ಅನ್ಸಾರಿ ಜೊತೆ ಜೈಲಿನಲ್ಲಿ ಮೋಜು ಮಾಡುತ್ತಿದ್ದ ಆತನ ಹೆಂಡತಿಯ ಬಂಧನ !

ಅಬ್ಬಾಸ ಅನ್ಸಾರಿ ಮತ್ತು ಅವನ ಪತ್ನಿ ನಿಖತ ಬಾನೊ

ಚಿತ್ರಕೂಟ (ಉತ್ತರಪ್ರದೇಶ) – ಇಲ್ಲಿಯ ಜೈಲಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ ಅಧೀಕ್ಷಕರು ಆಕಸ್ಮಿಕವಾಗಿ ದಾಳಿ ನಡೆಸಿದಾಗ ಅಲ್ಲಿ ಕೈದಿಯಾಗಿರುವ ಸುಹೇಲದೇವ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ ಅನ್ಸಾರಿ ತಮ್ಮ ಪತ್ನಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬಂದಿತು. ಶಾಸಕ ಅಬ್ಬಾಸ ಮತ್ತು ಅವರ ಪತ್ನಿ ನಿಖತ ಇವರಿಬ್ಬರು ಪ್ರತಿದಿನ ಜೈಲಿನ ಅಧೀಕ್ಷಕರ ಕೋಣೆಯಲ್ಲಿ ಭೇಟಿಯಾಗುತ್ತಿದ್ದರು. ದಾಳಿ ನಡೆಸಿದಾಗ, ಇವರಿಬ್ಬರು ಈ ಕೋಣೆಯಲ್ಲಿ ಕಂಡು ಬಂದರು. ನಿಖತರಿಂದ ಹಣ, ಸಂಚಾರವಾಣಿ ಮತ್ತು ಇತರೆ ವಸ್ತುಗಳು ಸಿಕ್ಕಿದವು. ಪೊಲೀಸರು ನಿಖತರನ್ನು ಬಂಧಿಸಿದ್ದಾರೆ. ಜೈಲಿನ ಅಧೀಕ್ಷಕರು ಮತ್ತು ಇತರೆ ಅಧಿಕಾರಿಗಳ ಮೇಲೆಯೂ ದೂರು ದಾಖಲಿಸಲಾಗಿದೆ.

1. ನಿಖತ ಬಾನೊ ಕಳೆದ ಅನೇಕ ದಿನಗಳಿಂದ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಜೈಲಿಗೆ ಬರುತ್ತಿದ್ದಳು ಮತ್ತು 3-4 ಗಂಟೆಗಳ ಕಾಲ ಅಬ್ಬಾಸರೊಂದಿಗೆ ಸಮಯ ಕಳೆದು ಮರಳಿ ಹೋಗುತ್ತಿದ್ದಳು, ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿತು. ಶಾಸಕ ಅನ್ಸಾರಿಯವರ ತಂದೆ ಕುಖ್ಯಾತಿ ಗೂಂಡಾ ಮುಖ್ತಾರ ಅನ್ಸಾರಿ ಬಂದಾ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

2. ನಿಖತ ಬಾನೊ ಮತ್ತು ಅಬ್ಬಾಸ ಭೇಟಿಯಾಗಲು ಯಾವುದೇ ಸಮಯ ಮತ್ತು ಅನುಮತಿ ಬೇಕಾಗುತ್ತಿರಲಿಲ್ಲ. ಅಬ್ಬಾಸರ ವಿರುದ್ಧ ಗಂಭೀರ ಸ್ವರೂಪದ ಅನೇಕ ಮೊಕದ್ದಮೆ ನ್ಯಾಯಾಲಯದಲ್ಲಿ ಬಾಕಿ ಇದೆ. ಚಿತ್ರಕೂಟ ಜೈಲಿನಲ್ಲಿರುವಾಗ ಅಬ್ಬಾಸನು ಪತ್ನಿಯ ಸಂಚಾರವಾಣಿಯ ಮೂಲಕ ಸಾಕ್ಷಿದಾರ ಮತ್ತು ಪ್ರತಿವಾದಿ ಅಧಿಕಾರಿಗಳನ್ನು ಬೆದರಿಸಿ ಹಣದ ಬೇಡಿಕೆ ಸಲ್ಲಿಸಿದ್ದರು. ಜೈಲಿನಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಲ್ಲ ಪ್ರಕಾರದ ಉಡುಗೊರೆ, ಹಣ ಮತ್ತು ಅನೇಕ ಆಮಿಷವನ್ನು ಒಡ್ಡಿದ್ದರು. ಇದರಿಂದ ಅವರ ಪತ್ನಿ ಆರಾಮವಾಗಿ ಜೈಲಿನಲ್ಲಿ ಕೆಲವು ಗಂಟೆಗಳನ್ನು ಕಳೆಯುತ್ತಿದ್ದಳು.

ಸಂಪಾದಕೀಯ ನಿಲುವು

ಜೈಲಿನಲ್ಲಿರುವವನು ಎಲ್ಲ ರೀತಿಯ ಅನುಮತಿಯನ್ನು ಪಡೆದುಕೊಂಡು ಅಂತರವಿಟ್ಟು ಕೆಲವು ನಿಮಿಷಗಳಿಗಾಗಿ ಭೇಟಿಯಾಗುವ ನಿಯಮವಿರುವಾಗ ಶಾಸಕನ ಪತ್ನಿ ನೇರವಾಗಿ ಅವರೊಂದಿಗೆ ಹೇಗೆ ಸಿಗುತ್ತಾಳೆ, ಎನ್ನುವ ಉತ್ತರ ಜನರಿಗೂ ತಿಳಿದಿದೆ ! ಭ್ರಷ್ಟಾಚಾರದ ಹುಳ ಎಲ್ಲಿಯವರೆಗೆ ಇದೆ ?, ಇದು ಜನರಿಗೂ ತಿಳಿದಿದೆ !