|
ಮುರೈನಾ (ಮಧ್ಯಪ್ರದೇಶ) – ಇಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಭೂಮಿಯಲ್ಲಿರುವ ಶ್ರೀ ಹನುಮಂತ ದೇವಸ್ಥಾನದಲ್ಲಿನ ಭಗವಾನ್ ಶ್ರೀ ಹನುಮಂತನಿಗೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ನಲ್ಲಿ ಶ್ರೀ ಹನುಮಂತನಿಗೆ ಅತಿಕ್ರಮಣಕಾರ ಎಂದು ಹೇಳಿ ಏಳು ದಿನದಲ್ಲಿ ದೇವಸ್ಥಾನ ತೆರವುಗೊಳಿಸಲು ಹೇಳಿದೆ. ದೇವಸ್ಥಾನ ಏನಾದರೂ ತೆರವುಗೊಳಿಸದಿದ್ದರೆ ಆಗ ರೈಲ್ವೆ ಇಲಾಖೆಯು ತಾವಾಗಿ ಕ್ರಮ ಕೈಗೊಂಡು ಅದರ ಖರ್ಚು ಕೂಡ ವಸೂಲಿ ಮಾಡುವುದು ಎಂದು ಹೇಳಿದೆ.
ಗ್ವಾಲ್ಹೆರ-ಶ್ಯೋಪೂರ ‘ಬ್ರಾಡ್ ಗೇಜ್ ರೈಲ್ವೆ ಲೈನ್’ ನ ಕೆಲಸ ನಡೆಯುತ್ತಿದೆ. ಸಬಲಗಡ ತಾಲೂಕಿನಲ್ಲಿ ಹನುಮಂತನ ದೇವಸ್ಥಾನ ಈ ಮಾರ್ಗದ ಮಧ್ಯ ಬರುತ್ತದೆ. ಈ ಭೂಮಿ ರೈಲ್ವೆಯದಾಗಿದ್ದು ಅದರಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ. ಆದ್ದರಿಂದ ರೈಲ್ವೆ ಇಲಾಖೆಯು ನೇರ ಶ್ರೀ ಹನುಮಂತನಿಗೆ ನೋಟಿಸ್ ಜಾರಿ ಮಾಡಿದೆ.
#DebBiz#IndianRailway#LordHanuman
The railways department has issued a notice to Lord Hanuman for alleged encroachment on government land in a village in Madhya Pradesh’s Morena. pic.twitter.com/pIf4j3IUwG
— Debasish Gharai (@DebasishGharai) February 12, 2023
ಸಂಪಾದಕೀಯ ನಿಲುವುರೈಲ್ವೆ ಇಲಾಖೆಯು ಎಂದಾದರೂ ಚರ್ಚ್ ಅಥವಾ ಮಸೀದಿಗೆ ಈ ರೀತಿ ನೋಟಿಸ್ ಜಾರಿಗೊಳಿಸಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತದೆಯೇ ? |