ಇಸ್ಲಾಮಾಬಾದ – ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲಗಿಟ – ಬಾಲ್ಟಿಸ್ಥಾನ ಇಲ್ಲಿಯ ಜನರು ಗೋಧಿ ಹಿಟ್ಟು, ಬೇಳೆಕಾಳುಗಳು ಇದರ ಬೆಲೆ ಕಡಿಮೆಯಾಗಬೇಕು ಮತ್ತು ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಮತ್ತೆ ಸರಿ ಹೋಗಬೇಕು ಇದಕ್ಕಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಕಾಡುತ್ತಿದೆ. ಈ ಮೊದಲು ನೆರೆಹಾವಳಿಯ ಸಂಕಷ್ಟದಿಂದ ಜನರು ತೊಂದರೆಗಿಡಾಗಿದ್ದರು. ಅದರಲ್ಲಿ ಈಗ ನಿತ್ಯೊಪಯೋಗಿ ವಸ್ತುಗಳ ಬೆಲೆ ಹೆಚ್ಚಿರುವುದರಿಂದ ಜನರು ತೊಂದರೆ ಅನುಭವಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಮೇಲಿಂದ ಮೇಲೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
೧. ‘ಆರ್ಥಿಕ ಬಿಕ್ಕಟ್ಟಿನಿಂದ ಜನರು ತೊಂದರೆ ಅನುಭವಿಸುತ್ತಿರುವಾಗ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ನೇತೃತ್ವ ವಿಫಲವಾಗುತ್ತಿದೆ’, ಎಂದು ಜನರು ಟೀಕಿಸುತ್ತಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಷ್ಟ್ರಪತಿ ಸುಲ್ತಾನ್ ಮಹಮ್ಮದ್ ಚೌದರಿ ಇವರು ಬ್ರಿಟನ್, ಟರ್ಕಿ ಮತ್ತು ಬೆಲ್ಜಿಯಂ ದೇಶದ ಪ್ರವಾಸದಲ್ಲಿದ್ದಾರೆ. ಈ ವಿದೇಶಿ ಪ್ರವಾಸದ ಬಗ್ಗೆ ಜನರಿಗೆ ಮಾಹಿತಿ ನೀಡದೆ ಹೋಗಿರುವುದರಿಂದ ಜನರು ಹೆಚ್ಚು ಅಸಮಾಧಾನಗೊಂಡಿದ್ದಾರೆ.
೨. ಗಿಲಗಿಟ ಬಾಲ್ಟಿಸ್ತಾನದಲ್ಲಿ ಸರಕಾರವು ಜನರ ಭೂಮಿ ಕಬಳಿಸಿದ್ದಾರೆ. ಆದ್ದರಿಂದ ಜನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಡಿಸೆಂಬರ್ ೨೦೨೨ ರಲ್ಲಿ ಇಲ್ಲಿಯ ಯುವಕರು ಸೈನ್ಯದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹತ್ತಿಕಲು ಸೈನ್ಯ ಯುವಕರನ್ನು ಬಂಧಿಸಿತು. ಗಿಲಗಿಟ ಬಾಲ್ಟಿಸ್ಥಾನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ ಸರಕಾರ ಯಾವುದೇ ಸಹಾಯನಿಧಿ ಪೂರೈಸಿಲ್ಲ.
೩. ಕೇಂದ್ರದಿಂದ ಪೂರೈಸುವ ನಿಧಿಯ ಮೇಲೆ ಗಿಲಗಿಟ ಬಾಲ್ಟಿಸ್ಥಾನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಬೇಕಾಗುತ್ತದೆ. ಕಳೆದ ಕೆಲವು ಸಮಯದಲ್ಲಿ ಅದು ಸಿಗದೇ ಇರುವುದರಿಂದ ಇಲ್ಲಿಯ ಸಮಸ್ಯೆ ಹೆಚ್ಚಾಗಿವೆ.