ಬಾಂಗ್ಲಾದೇಶದಲ್ಲಿ ಹಿಂದೂಗಳ ೧೪ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಮೂರ್ತಿಗಳ ವಿಧ್ವಂಸ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಠಾಕೂರ ಗ್ರಾಮದಲ್ಲಿ ಬಲಿಯಾಡಾಂಗಿಯಲ್ಲಿ ಫೆಬ್ರವರಿ ೫ ರಂದು ದುಷ್ಕರ್ಮಿಗಳಿಂದ ೧೪ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಅಲ್ಲಿಯ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಹಾಗೂ ಕೆಲವು ಮೂರ್ತಿಗಳನ್ನು ಕಾಲುವೆಗೆ ಎಸೆದಿದ್ದಾರೆ.

೧. ಬಾಲಿದಂಗಿ ಉಪಜಿಲ್ಲೆಯ ಪೂಜಾ ಸೆಲಿಬ್ರೇಶನ್ ಕೌನ್ಸಿಲಿಂಗ್ ನ ಕಾರ್ಯದರ್ಶಿ ಬಿದ್ಯಾನಾಥ ಬರ್ಮನ ಇವರು, ಕೆಲವು ಮೂರ್ತಿ ಸಂಪೂರ್ಣವಾಗಿ ನಾಶಗೊಂಡಿವೆ ಹಾಗೂ ಕೆಲವು ಮೂರ್ತಿಗಳು ದೇವಸ್ಥಾನದಲ್ಲಿರುವ ಕಲ್ಯಾಣಿಗೆ ಎಸೆದಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ, ಆದರೆ ತನಿಖೆ ಪೂರ್ಣವಾದ ನಂತರ ಅಪರಾಧಿಗಳನ್ನು ಬಂಧಿಸಿ ನ್ಯಾಯ ಸಿಗಬೇಕು ಎಂದು ನಮ್ಮ ಇಚ್ಛೆಯಾಗಿದೆ ಎಂದು ಹೇಳಿದರು.

೨. ಸಂಘ ಪರಿಷತ್ತಿನ ಅಧ್ಯಕ್ಷ ಸಮರ ಚಟರ್ಜಿ ಇವರು, ಈ ಪ್ರದೇಶ ಯಾವಾಗಲು ಜಾತಿಯ ಸೌಹಾರ್ದತೆಗಾಗಿ ಗುರುತಿಸುತ್ತಾರೆ. ಈ ಮೊದಲು ಈ ರೀತಿಯ ಯಾವುದೇ ಖಂಡನಿಯ ಘಟನೆ ಘಟಿಸಿಲ್ಲ. ಈ ಸ್ಥಳದಲ್ಲಿ ಮುಸಲ್ಮಾನ ಸಮಾಜ ಬಹುಸಂಖ್ಯಾತರಾಗಿದ್ದರೂ ಹಿಂದುಗಳ ಜೊತೆ ಅವರದು ಯಾವುದೇ ವಿವಾದವಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ನಮಗೂ ಕೂಡ ತಿಳಿದಿಲ್ಲ ಎಂದು ಹೇಳಿದರು.

೩. ಠಾಕೂರ್ ಗ್ರಾಮದ ಪೊಲೀಸ್ ಪ್ರಮುಖ ಜಹಾಂಗೀರ್ ಹುಸೇನ್ ಇವರು, ದೇಶದಲ್ಲಿ ಶಾಂತಿ ಕದಡುವುದಕ್ಕಾಗಿ ಅನಿರೀಕ್ಷಿತ ದಾಳಿ ನಡೆಸಿರುವುದು ಸ್ಪಷ್ಟವಾಗುತ್ತಿದೆ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

೪. ಠಾಕೂರ ಗ್ರಾಮದ ಸರಕಾರಿ ಪ್ರಮುಖ ಮಹಬೂರ್ ರೆಹಮಾನ್ ಇವರು, ‘ಈ ದಾಳಿ ಶಾಂತಿ ಮತ್ತು ಜಾತಿ ಸೌಹಾರ್ದತೆ ವಿರುದ್ಧ ರೂಪಿಸಿರುವ ಷಡ್ಯಂತ್ರದ ಭಾಗವಾಗಿದೆ. ಇದು ಗಂಭೀರ ಅಪರಾಧವಾಗಿದೆ ಮತ್ತು ಅಪರಾಧಿಗಳು ಕಾರ್ಯಾಚರಣೆಗೆ ಎದುರಾಗಬೇಕಾಗಬಹುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಘಟನೆಯನ್ನು ಜಗತ್ತಿನ ಯಾವುದೇ ಸಂಘಟನೆ ಖಂಡಿಸಿಲ್ಲ, ಇದನ್ನು ತಿಳಿದುಕೊಳ್ಳಿ ! ಇದೇ ರೀತಿಯ ಘಟನೆ ಭಾರತದಲ್ಲಿನ ಚರ್ಚ್ ಅಥವಾ ಮಸೀದಿಯ ಮೇಲೆ ಆಗುತ್ತಿದ್ದರೆ, ಇಷ್ಟೊತ್ತಿಗೆ ಅದು ಅಂತರಾಷ್ಟ್ರೀಯ ವಾರ್ತೆ ಆಗುತ್ತಿತ್ತು ಮತ್ತು ಮುಸಲ್ಮಾನರು, ಕ್ರೈಸ್ತರು ಬಿದಿಗೆ ಬಂದು ರಂಪ ರಾದ್ಧಾಂತ ಮಾಡುತ್ತಿದ್ದರು !