ಶ್ರೀರಾಮ ಮೂರ್ತಿಗಾಗಿ ಸಾಲಿಗ್ರಾಮ ಶಿಲೆ ತರುತ್ತಿರುವ ಮಾರ್ಗದಲ್ಲಿನ ಒಂದು ಗ್ರಾಮದಿಂದ ಪಿ.ಎಫ್. ಐ. ನ ೮ ಕಾರ್ಯಕರ್ತರ ಬಂಧನ

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ. ಯಿಂದ) ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿನ ಕುವಾನವ ಗ್ರಾಮದಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೮ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರಲ್ಲಿ ರಿಯಾಝ್ ಮಾರುಫ್ ಇವನ ಸಮಾವೇಶ ಇದೆ. ರಾಜ್ಯದಲ್ಲಿನ ಪುಲವಾರಿ ಶರೀಫನು ಪಿ.ಎಫ್. ಐ.ಗಾಗಿ ತರಬೇತಿ ಕೇಂದ್ರ ನಡೆಸುತ್ತಿದ್ದರು. ಆಗಿನಿಂದ ಪೊಲೀಸರು ಅದರ ಶೋಧ ನಡೆಸಿದ್ದರು. ಅಯೋಧ್ಯೆಯಲ್ಲಿ ಕಟ್ಟುತ್ತಿರುವ ಶ್ರೀರಾಮಮಂದಿರದ ಮೂರ್ತಿಗಾಗಿ ನೇಪಾಳದಿಂದ ಆ ಸಾಲಿಗ್ರಾಮ ಶಿಲೆಯನ್ನು ಈ ಗ್ರಾಮದಿಂದ ತರುತ್ತಿದ್ದರು. ಈ ಹಿಂದೆಯೇ ಶ್ರೀರಾಮಮಂದಿರದ ಮೇಲೆ ದಾಳಿ ನಡೆಸುವ ಬೆದರಿಕೆ ನೀಡಿದ್ದರಿಂದ ಬಂಧಿಸಿರುವ ಕಾರ್ಯಕರ್ತರನ್ನು ಅದೇ ದೃಷ್ಟಿಯಿಂದ ನೋಡಲಾಗುತ್ತಿದೆ.

ಪುಲವಾರಿ ಶರೀಫ್ ಇಲ್ಲಿ ನಡೆಸಿರುವ ದಾಳಿಯಲ್ಲೇ ಪಿ.ಎಫ್.ಐ. ೨೦೪೭ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಉದ್ದೇಶ ಇಟ್ಟಿರುವ ಬಗ್ಗೆ ಮಾಹಿತಿ ದೊರೆತ್ತಿತ್ತು. ಆ ಸಮಯದಲ್ಲಿ ಶ್ರೀರಾಮ ಮಂದಿರದ ಸ್ಥಳದಲ್ಲಿ ಮತ್ತೆ ಮಸೀದಿ ಕಟ್ಟುವ ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.